Thursday, June 1, 2023

Latest Posts

‘ಮನೇಲಿದ್ರೂ ಪರವಾಗಿಲ್ಲ, ರಾಜೀನಾಮೆ ಹಿಂಪಡೆಯಲ್ಲ’- ಅತೃಪ್ತ ಶಾಸಕ ಭೈರತಿ ಬಸವರಾಜ್ ಪಟ್ಟು

- Advertisement -

ಬೆಂಗಳೂರು: ತಮ್ಮನ್ನು ದೋಸ್ತಿ ನಾಯಕರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಇದ್ರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಅಂತ ಆರೋಪಿಸಿ ಅತೃಪ್ತ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜ್, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯೋದಿಲ್ಲ ಅಂತ ಪಟ್ಟುಹಿಡಿದಿದ್ದಾರೆ.

ಮುಂಬೈನ ಸೊಫಿಟೆಲ್ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಬಸವರಾಜ್, ನನ್ನ ಕಷ್ಟಗಳನ್ನು ಹೇಳಿಕೊಂಡರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಹೀಗಾಗಿ ನಾನು ನನ್ನ ತಾಯಿ ಮೇಲೆ ಆಣೆ ಮಾಡಿ ರಾಜೀನಾಮೆ ಕೊಡ್ತೀನಿ ಅಂತ ಅವರಿಗೆ ಹೇಳಿಯೇ ಬಂದಿರುವೆ. ನಾನು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಅಂತ ಹೇಳಿದ್ರು. ಅಲ್ಲದೆ ನಾನು ಎಲ್ಲಾ ಬೆಳವಣಿಗೆಗಳಿಂದ ಬಹಳ ನೊಂದಿದ್ದು ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿರೋದಕ್ಕೂ ಸಹ ಸಿದ್ದನಿದ್ದೇನೆ. ಆದರೆ ಪಕ್ಷ ನನ್ನನ್ನು ಅನರ್ಹಗೊಳಿಸಿದ್ರೂ ಸಹ ನಾನು ರಾಜೀನಾಮೆ ಹಿಂಪಡೆಯೋದಿಲ್ಲ ಅಂತ ಬೈರತಿ ಬಸವರಾಜ್ ಸ್ಪಷ್ಟಪಡಿಸಿದ್ರು.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=X9W90V9v4io
- Advertisement -

Latest Posts

Don't Miss