Saturday, July 27, 2024

Latest Posts

ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನ- 102ಕ್ಕಿಳಿದ ದೋಸ್ತಿ ಸಂಖ್ಯಾಬಲ..!

- Advertisement -

ಬೆಂಗಳೂರು: ಕೈ ಶಾಸಕ ರೋಷನ್ ಬೇಗ್ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ನ ಮತ್ತೊಂದು ವಿಕೆಟ್ ಪತನವಾಗಿದೆ. ಹೀಗಾಗಿ ದೋಸ್ತಿಗಳು ಮತ್ತೊಂದು ಸ್ಥಾನ ಕಳೆದುಕೊಂಡು ಸಂಖ್ಯಾಬಲ ಇಳಿಮುಖವಾಗಿದೆ.

ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದು ಮುನಿಸಿಕೊಂಡು ಬಂಡಾಯವೆದ್ದಿದ್ದ ಬೆಂಗಳೂರಿನ ಶಿವಾಜಿನಗರ ಶಾಸಕ ರೋಷನ್ ಬೇಗ್ ಇದೀಗ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ಸಂಖ್ಯಾಬಲ 102ಸ್ಥಾನಕ್ಕಿಳಿದಿದೆ. ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಗೆ ಇದೀಗ ರಾಜೀನಾಮೆ ಸಲ್ಲಿಸಿರುವ ಕೈ ಶಾಸಕ ರೋಷನ್ ಬೇಗ್, ಕಾಂಗ್ರೆಸ್ ನಲ್ಲಿ ಸತ್ಯ ಹೇಳೋದೇ ಅಪರಾಧ. ನಾನು ಸತ್ಯ ಬಿಚ್ಚಿಟ್ಟ ಮೇಲೆ ನನ್ನ ಮೇಲೆ ಕ್ರಮ ಕೈಗೊಂಡರು ಅಂತ ಬೇಸರ ವ್ಯಕ್ತಪಡಿಸಿದ್ರು. ಇನ್ನು ನಾನು ಮುಂಬೈಗೂ ಹೋಗೋದಿಲ್ಲ, ಗೋವಾಕ್ಕೂ ಹೋಗೋದಿಲ್ಲ. ನನ್ನ ಮಗನ ಜೊತೆ ಹಜ್ ಯಾತ್ರೆಗೆ ತೆರಳುವೆ ಅಂತ ಹೇಳಿದ್ದಾರೆ.

ಇನ್ನು ರೋಷನ್ ಬೇಗ್ ರಾಜೀನಾಮೆ ಕುರಿತಾಗಿ ಪ್ರತಿಕ್ರಿಯಿಸಿರೋ ಸಿದ್ದರಾಮಯ್ಯ, ಅವರು ರಾಜೀನಾಮೆ ಕೊಡಲಿ, ಪಕ್ಷದ ಚಿಹ್ನೆ ಮೇಲೆ ಗೆದ್ದು ರಾಜೀನಾಮೆ ನೀಡಿರೋದು ಪಕ್ಷ ದ್ರೋಹ ಮಾಡುವ ಕೆಲಸ. ಅವರ ಮೇಲೂ ದೂರು ನೀಡಲಾಗುತ್ತೆ ಅಂತ ಹೇಳಿದ್ರು.

ರಾಜ್ಯದಲ್ಲಿ ಜೋಡೆತ್ತಿನ ದೋಸ್ತಿ ಸರ್ಕಾರ ಉಳಿಯುತ್ತಾ, ಉರುಳುತ್ತಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=uFofHtw9Qq8
- Advertisement -

Latest Posts

Don't Miss