Sunday, September 8, 2024

Latest Posts

ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂಥ ಆಹಾರ ಸೇವನೆ ಮಾಡಿ..

- Advertisement -

Health tips: ಮಳೆಗಾಲ ಅಂದರೆ, ಕೆಮ್ಮು, ನೆಗಡಿ, ಜ್ವರದ ಸೀಸನ್. ಈ ವೇಳೆಯಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಅನ್ನೋ ಕನ್ಫೂಶನ್ ಹೆಚ್ಚು. ಆದರೆ ಆಯುರ್ವೇದದ ಪ್ರಕಾರ, ನೀವು ಮಳೆಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡಿದರೆ, ನಿಮ್ಮ ಆರೋಗ್ಯವನ್ನ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಾವಿಂದು ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..

ನಾವೀಗ ಹೇಳುವ ಪದಾರ್ಥಗಳನ್ನು ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕೊಂಚ ಕೊಂಚ ಬಳಸಿದರೂ, ಅದು ನಿಮ್ಮ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.

ಅರಿಶಿನ. ಅರಿಶಿನದಲ್ಲಿ ರೋಗ ನಿರೋಧಕ ಶಕ್ತಿ ಇದೆ. ಹಾಗಾಗಿ ಪ್ರತಿದಿನ ನೀವು ಮಾಡುವ ಅಡುಗೆಯಲ್ಲಿ ಖಂಡಿತ ಅರಿಶಿನ ಬಳಸಿ. ಆದರೆ ಅದು ಪ್ಯೂರ್ ಅರಿಶಿನವಾಗಿರಬೇಕು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಅರಿಶಿನದಲ್ಲಿ ಕೆಮಿಕಲ್ ಮಿಶ್ರಣವಾಗಿರುತ್ತದೆ. ಅಥವಾ ಕೆಲ ಹಿಟ್ಟುಗಳನ್ನು ಮಿಶ್ರಣ ಮಾಡಿರುತ್ತಾರೆ. ಹಾಗಾಗಿ ಅರಿಶಿನ ಕೊಂಬನ್ನು ಒಣಗಿಸಿ, ಪುಡಿ ಮಾಡಿದ ಅರಶಿನವನ್ನೇ ಉಪಯೋಗಿಸಿ.

ಶುಂಠಿ. ಶುಂಠಿ ಬಳಸುವುದರಿಂದ ಶೀತ, ಕೆಮ್ಮು ಕಂಟ್ರೋಲಿಗೆ ಬರುತ್ತದೆ. ಅಥವಾ ಶೀತ, ಕೆಮ್ಮು ಬರದಂತೆ ಶುಂಠಿ ತಡೆಯುತ್ತದೆ. ಹಾಗಾಗಿ ಪ್ರತಿದಿನ ಇದರ ಬಳಕೆ ಕೊಂಚವಾದರೂ ಮಾಡಬೇಕು. ಶುಂಠಿ ಚಹಾ ಮಾಡಬಹುದು.

ಕಾಳುಮೆಣಸು. ಪ್ರತಿದಿನ ನೀವು ಮಾಡುವ ಅಡುಗೆಯಲ್ಲಿ ನಾಲ್ಕು ಕಾಳಾದರೂ ಕಾಳುಮೆಣಸು ಬಳಸಿದ್ದಲ್ಲಿ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಕ್ಯಾನ್ಸರ್‌ ಬರುವುದನ್ನು ಕೂಡ ಇದು ತಡೆಗಟ್ಟುತ್ತದೆ.

ಬೆಳ್ಳುಳ್ಳಿ. ಪ್ರತಿದಿನ ಬೆಳ್ಳುಳ್ಳಿ ತಿನ್ನಲು ಶುರು ಮಾಡಿದ್ರೆ ವಾಕರಿಕೆ ಬರುತ್ತೆ ಅನ್ನೋದು ಎಷ್ಟು ನಿಜವೋ, ಪ್ರತಿದಿನ ಎರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ ಅನ್ನೋದು ಅಷ್ಟೇ ಸತ್ಯ. ಹಾಗಾಗಿ ಸಾಧ್ಯವಾದರೆ, ಚಪಾತಿ ಅಥವಾ ರೊಟ್ಟಿ ತಿನ್ನುವಾಗ ಎರಡೇ ಎರಡು ಎಸಳು ಹಸಿ ಬೆಳ್ಳುಳ್ಳಿ ಸೇವನೆ ಮಾಡಿ.

ಪುದೀನಾ. ಎಲ್ಲ ಪದಾರ್ಥಗಳ ರುಚಿ ಹೆಚ್ಚಿಸುವ ಪುದೀನಾ ಆರೋಗ್ಯಕ್ಕೂ ಕೂಡ ತುಂಬಾ ಲಾಭಕಾರಿಯಾಗಿದೆ. ಪುದೀನಾ ಎಲೆಯನ್ನು ಪ್ರತಿದಿನ ಸೇವಿಸಬೇಕು. ಪ್ರತಿದಿನ 2 ಎಲೆ ಅಥವಾ ಒಂದು ಸ್ಪೂನ್ ಪುದೀನಾ ಚಟ್ನಿ ಸೇವಿಸಿದರೂ, ಶೀತ, ಕೆಮ್ಮಿನಿಂದ ದೂರವಿರುತ್ತೀರಿ.

ಜೇನುತುಪ್ಪ. ಜೇನುತುಪ್ಪದಲ್ಲಿ ಡ್ರೈಫ್ರೂಟ್ಸ್ ನೆನೆಸಿಟ್ಟು ತಿನ್ನಬಹುದು. ಅಥವಾ ಬರೀ ಅರ್ಧ ಸ್ಪೂನ್ ಜೇನುತುಪ್ಪವನ್ನ ತಿನ್ನಬಹುದು. ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಬಹುದು.

ಕಲ್ಲುಪ್ಪು. ಹುಡಿ ಉಪ್ಪಿಗಿಂತ ಕಲ್ಲುಪ್ಪು ಆರೋಗ್ಯಕ್ಕೆ ಒಳ್ಳೆಯದು. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಯನ್ನು ಸರಿದೂಗಿಸಲು ಇದು ಸಹಕಾರಿಯಾಗಿದೆ.

ರಾಜಮುಡಿ ಅಕ್ಕಿ. ರಾಜಮುಡಿ ಅಕ್ಕಿ ಕೆಂಪಾಗಿರುತ್ತದೆ. ಕೆಂಪಕ್ಕಿ ಅನ್ನ ಅಂತಲೂ ಹೇಳುತ್ತಾರೆ. ಈ ಅಕ್ಕಿಯನ್ನ ಬಳಸಿ ನೀವು ಅನ್ನ ಮಾಡಿ, ಉಂಡರೆ, ನಿಮಗೆ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ಉಬ್ಬರ ಸಮಸ್ಯೆ ಏನೂ ಬರುವುದಿಲ್ಲ. ಬಿಳಿ ಅನ್ನಕ್ಕಿಂತ, ರಾಜಮುಡಿ ಅನ್ನ ಉತ್ತಮ.

ಜೋಳ. ಜೋಳದ ಹಿಟ್ಟುಮಾಡಿ, ರೊಟ್ಟಿ ಮಾಡಿ ಸೇವಿಸಿದರೆ, ಅದರಿಂದ ನಿಮ್ಮ ತೂಕ ಸರಿಯಾಗಿ ಇರುತ್ತದೆ. ಅದು ಸುಲಭವಾಗಿ ಜೀರ್ಣವಾಗುತ್ತದೆ.

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

- Advertisement -

Latest Posts

Don't Miss