Friday, April 4, 2025

Latest Posts

ಎದೆಹಾಲು ಹೆಚ್ಚಿಸಲು ಇದನ್ನು ಸೇವಿಸಿ..

- Advertisement -

ಶಿಶುವಿಗೆ 6 ತಿಂಗಳತನಕ ತಾಯಿಯ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ. ಅದರಿಂದಲೇ, ಶಿಶುವಿಗೆ ಪೋಷಕಾಂಶ ಸಿಗುತ್ತದೆ. ಆದರೆ ತಾಯಿಯ ಎದೆಯಲ್ಲಿ ಹಾಲೇ ಇಲ್ಲದಿದ್ದರೆ, ಆ ಮಗುವಿಗೆ ಎಷ್ಟು ಕಷ್ಟವಾಗಬಹುದು. ಹಾಗಾಗಿ ನಾವಿಂದು ಎದೆಹಾಲು ಹೆಚ್ಚಿಸಲು ಏನೇನು ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..

ಬಿಸಿನೀರು: ನೀವು ಬಾಣಂತಿಯಾದಾಗಿನಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸುವ ತನಕ, ಬಿಸಿ ಬಿಸಿ ನೀರನ್ನೇ ಕುಡಿಯಬೇಕು. ಬಿಸಿ ನೀರು ಕುಡಿದಷ್ಟು ಎದೆ ಹಾಲು ಹೆಚ್ಚುತ್ತದೆ. ಹಾಗಂತ, ಅಗತ್ಯಕ್ಕಿಂತ ಬಿಸಿ ನೀರಿರಬಾರದು. ಆ ನೀರನ್ನು ನೀವು ಕುಡಿದರೂ, ನಿಮ್ಮ ನಾಲಿಗೆ ಸುಡಬಾರದು. ಅಷ್ಟು ಬಿಸಿ ಇದ್ದರೆ ಸಾಕು. ಬೇಕಾದರೆ, ಜೀರಿಗೆ, ಕೊತ್ತಂಬರಾ ಕಾಳು ಹಾಕಿ, ನೀರನ್ನು ಕುದಿಸಿ, ಕಶಾಯ ಮಾಡಿಡಿ. ಇದು ಕೂಡ ಹಾಲು ಹೆಚ್ಚಿಸಲು ಉತ್ತಮವಾಗಿರುತ್ತದೆ.

ನೀವು ಮೆಂತ್ಯೆ ನೀರು ಕುಡಿಯಬಹುದು. ಮೆಂತ್ಯೆ ಹಾಕಿ, ನೀರನ್ನು ಕುದಿಸಿ, ಕಶಾಯ ಮಾಡಿಡಿ. ನೀರಿನ ಬದಲು ಹಾಲು ಬಳಸಬಹುದು. ದಿನಕ್ಕೆ ನಾಲ್ಕು ಬಾರಿ ಈ ನೀರು ಕುಡಿದರೂ ಸಾಕು. ಇದರಿಂದ ಎದೆಹಾಲು ಹೆಚ್ಚುತ್ತದೆ.

ಬೆಳಿಗ್ಗೆ ಎದ್ದು 5 ನೆನೆಸಿ, ಸಿಪ್ಪೆ ತೆಗೆದ ಬಾದಾಮಿಯನ್ನು ಸೇವಿಸಿ. ಇದರಿಂದಲೂ ಎದೆಹಾಲು ಹೆಚ್ಚುತ್ತದೆ. ನಿಮ್ಮ ಊಟದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿ, ಇದು ಕೂಡ ಬಾಣಂತಿಯರಿಗೆ ಉತ್ತಮ ಆಹಾರ. ರಾತ್ರಿ ಮಲಗುವಾಗ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ, ಕುಡಿಯಿರಿ. ಹಸುವಿನ ಹಾಲು, ಹಸುವಿನ ಶುದ್ಧ ತುಪ್ಪದ ಬಳಕೆ, ಹೆಸರು ಕಾಳಿನ ಸೇವನೆ ಇವೆಲ್ಲವೂ ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಆರೋಗ್ಯವಾಗಿ ಇಡುವುದಲ್ಲದೇ, ನಿಮ್ಮ ಎದೆ ಹಾಲನ್ನ ಕೂಡ ಹೆಚ್ಚಿಸುತ್ತದೆ.

ಬಾಯಿ ಹುಣ್ಣಾಗಿದ್ದರೆ ಈ ರೀತಿ ಮನೆಮದ್ದು ಮಾಡಿ, ಪರಿಹಾರ ಕಂಡುಕೊಳ್ಳಿ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಇದನ್ನ ಸೇವಿಸಿ..

- Advertisement -

Latest Posts

Don't Miss