Saturday, July 27, 2024

Latest Posts

ಅಪ್ಪಿ ತಪ್ಪಿಯೂ ನಿಮ್ಮ ಮಗುವಿಗೆ ಇಂಥ ಹೆಸರುಗಳನ್ನು ಇಡಬೇಡಿ..

- Advertisement -

ಒಂದು ಮನೆಗೆ ಪುಟ್ಟ ಮಗು ಬಂದಾಗ, ಅವರಿಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರ ಲಾಲನೆ ಪಾಲನೆ, ಅದು ಆಡುವ ಆಟ ನೋಡುತ್ತಾ ದಿನಗಳೆದಿದ್ದೇ ಗೊತ್ತಾಗುವುದಿಲ್ಲ. ಅದಕ್ಕೆ ಬೇಕಾದ, ಆಹಾರ, ಅಂಗಿಗಳನ್ನ ತರುವುದರಲ್ಲಿ ಏನೋ ಖುಷಿ. ಇದೇ ಸಂಭ್ರಮಗಳ ನಡುವೆ ಬರುವುದೇ ನಾಮಕರಣ ಸಮಾರಂಭ. ಈ ದಿನಕ್ಕಾಗಿ ನೀವು ಎಷ್ಟೆಲ್ಲ ಖರ್ಚು ಮಾಡಿರುತ್ತೀರಿ. ಆದರೆ ನೀವು ಈ ವಿಷಯದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಮಾತ್ರ, ಆ ಮಗು ಭವಿಷ್ಯದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ನಿಮ್ಮ ಮಗುವಿಗೆ ನೀವು ಎಂಥ ಹೆಸರುಗಳನ್ನು ಇಡಬಾರದು ಅಂತಾ ತಿಳಿಯೋಣ ಬನ್ನಿ..

ದ್ರೌಪದಿ ಅಥವಾ ಪಾಂಚಾಲಿ. ನಿಮಗೆ ಆಶ್ಚರ್ಯವಾಗಬಹುದು. ಅಥವಾ ನಗುವೂ ಬರಬಹುದು. ಆದ್ರೆ ಎಷ್ಟೋ ಕಡೆ ಹಳ್ಳಿಗಾಡಿನಲ್ಲಿ ಜನ ತಮ್ಮ ಮಕ್ಕಳಿಗೆ ಇಂಥದ್ದೇ, ಹೆಸರನ್ನಿಡುತ್ತಾರೆ. ಆದರೆ ಇಂಥ ಹೆಸರನ್ನಿಡುವುದರಿಂದ ಹೆಣ್ಣುಮಕ್ಕಳ ಮುಂದಿನ ಭವಿಷ್ಯ ಉತ್ತಮವಾಗಿರುವುದಿಲ್ಲ. ಆಕೆಯ ವೈವಾಹಿಕ ಜೀವನವೂ ಸರಿಯಾಗಿ ಇರುವುದಿಲ್ಲ.

ಸೀತೆ, ಜಾನಕಿ, ವೈದೇಹಿ, ಹೀಗೆ ಸೀತೆಗೆ ಸಂಬಂಧಿಸಿದ ಯಾವುದೇ ಹೆಸರನ್ನು ನಿಮ್ಮ ಮಗಳಿಗೆ ಇಡಬೇಡಿ. ಸೀತಾದೇವಿ ವಿವಾಹದ ಬಳಿ, ಸಾಕಷ್ಟು ಕಷ್ಟ, ನೋವನ್ನ ಅನುಭವಿಸಿದವಳು. ಆಕೆಗೆ ಉತ್ತಮ ಗುಣ, ಚರಿತ್ರೆ ಇದ್ದರೂ ಕೂಡ, ಆಕೆ ಕಷ್ಟವೇ ಅನುಭವಿಸಿದ್ದು. ಇಂಥ ಹೆಸರಿನ ಅನೇಕರು ಬರೀ ಕಷ್ಟವನ್ನೇ ಅನುಭವಿಸಿದ ಉದಾಹರಣೆಗಳಿದೆ. ಹಾಗಾಗಿ ನಿಮ್ಮ ಮಗಳಿಗೆ ಇಂಥ ಹೆಸರನ್ನಿಡಬೇಡಿ.

ನಿಮಗೆ ಪೌರಾಣಿಕ ಹೆಸರುಗಳೇಬೇಕೆಂದಲ್ಲಿ ಭಗವದ್ಗೀತೆ, ಲಲಿತಾ ಸಹಸ್ರನಾಮದಲ್ಲಿ ಬರುವ ಹೆಸರುಗಳನ್ನ ಆಯ್ಕೆ ಮಾಡಿ, ಇಡಬಹುದು.

ಚಾಣಕ್ಯರ ಪ್ರಕಾರ ನಿಮ್ಮಲ್ಲಿ ಈ 5 ಗುಣಗಳಿದ್ದರೆ ನೀವೇ ಬುದ್ಧಿವಂತರು..

ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..

ಈ ಮೂರು ವಿಚಾರಗಳಿಂದ ದೂರವಿದ್ದರೆ ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ..

- Advertisement -

Latest Posts

Don't Miss