Friday, July 11, 2025

Latest Posts

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

- Advertisement -

Health Tips: ಸಾಮಾನ್ಯವಾಗಿ ಚಟ್ನಿ ಅಂದ್ರೆ, ಅದು ರುಚಿಯಾಗಿ, ಖಾರಾ, ಹುಳಿ, ಉಪ್ಪಿನಿಂದ ಕೂಡಿದ ಪದಾರ್ಥವಾಗಿರುತ್ತದೆ. ಇಡ್ಲಿ, ದೋಸೆ, ಕೆಲವೊಮ್ಮೆ ಚಾಟ್ಸ್‌ ಜೊತೆ ಚಟ್ನಿ ಟೇಸ್ಟ್ ಮಾಡಲಾಗತ್ತೆ. ಆದರೆ ನಾವಿಂದು ಹೇಳುವ ಚಟ್ನಿಯನ್ನು ನೀವು ಮಾಡಿ, ಸೇವಿಸಿದರೆ, ಅದರಿಂದ ಹಲವು ಆರೋಗ್ಯ ಲಾಭಗಳಾಗಲಿದೆ. ಹಾಗಾದ್ರೆ ಇದು ಯಾವ ಚಟ್ನಿ..? ಇದನ್ನು ತಯಾರಿಸೋದು ಹೇಗೆ..? ಇದರ ಸೇವನೆಯಿಂದ ಯಾವ ಯಾವ ಆರೋಗ್ಯಕರ ಲಾಭಗಳಿದೆ ಅಂತಾ ತಿಳಿಯೋಣ ಬನ್ನಿ..

ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ, ಗ್ಯಾಸ್ಟ್ರಿಕ್ ಸಮಸ್ಯೆ ಇದೆ, ಆ್ಯಸಿಡಿಟಿಯಾಗುತ್ತದೆ. ಶುಗರ್ ಸಮಸ್ಯೆ ಇದೆ. ದೇಹದಲ್ಲಿ ಹೆಚ್ಚು ರಕ್ತವಿಲ್ಲ. ನಿಶ್ಶಕ್ತಿ ಇದೆ. ಲಿವರ್ ಆರೋಗ್ಯ ಚೆನ್ನಾಗಿಲ್ಲ. ಹೀಗೆ ರಾಶಿ ರಾಶಿ ಆರೋಗ್ಯ ಸಮಸ್ಯೆ ಇರುವವರಿಗೆ ಈ ಚಟ್ನಿಯ ಸೇವನೆ ಆರೋಗ್ಯ ಲಾಭ ಕೊಡುತ್ತದೆ.

ಈ ಚಟ್ನಿ ತಯಾರಿಸಲು 6 ವಸ್ತುಗಳು ಬೇಕು. ಕರಿಬೇವು, ಕೊತ್ತೊಂಬರಿ ಸೊಪ್ಪು, ಪುದೀನಾ, ನಿಂಬೆಹಣ್ಣು, ಸೇಂಧವ ಲವಣ, ಜೀರಿಗೆ. 1 ಬೌಲ್ ಪುದೀನಾ, 1 ಬೌಲ್ ಕರಿಬೇವು, ಅರ್ಧ ಬೌಲ್ ಕೊತ್ತೊಂಬರಿ ಸೊಪ್ಪು, ಅರ್ಧ ನಿಂಬೆರಸ, ಒಂದು ಸ್ಪೂನ್ ಜೀರಿಗೆ, ರುಚಿಗೆ ತಕ್ಕಷ್ಟು ಸೈಂಧವ ಲವಣ ಸೇರಿಸಿ. ಇವಿಷ್ಟನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿದರೆ ಚಟ್ನಿ ರೆಡಿ. ದಿನದ ಮೂರು ಹೊತ್ತು ಕೊಂಚ ಕೊಂಚ ಇದನ್ನು ಊಟದೊಂದಿಗೆ ಸೇವಿಸಬಹುದು.

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

- Advertisement -

Latest Posts

Don't Miss