ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಈ ಹಣ್ಣಿನ ಸೇವನೆಯೇ ರಾಮಬಾಣ..

Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಜನ ಹೆಚ್ಚಾಗಿ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ಯಾಸ್ಟ್ರಿಕ್‌, ಹೊಟ್ಟೆ ನೋವು, ಮಲಬದ್ಧತೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂದು ನಾವು ಮಲಬದ್ಧತೆ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳಿಗೆ ಯಾವ ಹಣ್ಣು ಸೇವಿಸುವ ಮೂಲಕ, ಪರಿಹಾರ ಕಂಡುಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..

ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಪರಿಹಾರ ಬೇಕೆಂದಲ್ಲಿ, ನೀವು ಬೇಲದ ಹಣ್ಣಿನ ಸೇವನೆ ಮಾಡಬೇಕು. ಬೇಲದ ಹಣ್ಣು ವಾಯು ನಾಶಕವಾಗಿದೆ. ಇದರ ಸೇವನೆಯಿಂದ, ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಗ್ಯಾಸ್ಟಿಕ್ ಆಗುವುದಿಲ್ಲ. ಮತ್ತು ಮಲಬದ್ಧತೆ ಸಮಸ್ಯೆಯೂ ಬರುವುದಿಲ್ಲ.

ಬೇಲದ ಹಣ್ಣನ್ನು ಯಾವ ರೀತಿ ಸೇವಿಸಬೇಕು ಎಂದಲ್ಲಿ, ಇದು ಒಣಗಿದಾಗ ತಿನ್ನಲು ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇರುತ್ತದೆ. ನೀವು ಬೇಲದ ಹಣ್ಣನ್ನು ಬೆಲ್ಲದ ಜೊತೆ ಸೇವಿಸಬಹುದು. ಬೇಲದ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ ಬೇಲದ ಹಣ್ಣಿನ ಕ್ಯಾಂಡಿ ಮಾಡಿಯೂ ಸೇವಿಸಬಹುದು. ಊಟವಾದ ಬಳಿಕ ಸಿಹಿ ತಿನ್ನಬೇಕು ಎನ್ನಿಸಿದಾಗ, ಚಿಕ್ಕ ತುಂಡು ಬೇಲದ ಹಣ್ಣಿನ ಕ್ಯಾಂಡಿ ಸೇವಿಸಿ. ಇದು ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುತ್ತದೆ.

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

About The Author