ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ: ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿಶ್

Political News: ವಯನಾಡಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಹುಲ್ ಗಾಂಧಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್‌ಗೆ ಸಾಥ್ ಕೊಟ್ಟಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನ ವಯನಾಡಿನಲ್ಲಿ ರಾಹುಲ್‌ ಗಾಂಧಿ ರೋಡ್ ಶೋ ನಡೆಸಿ, ಮತಯಾಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರೀತಿಯ ರಾಹುಲ್ ಗಾಂಧಿ ಅವರೇ, ಅಸಮಾನತೆ, ಅಸಹನೆ, ದೌರ್ಜನ್ಯಗಳಿಂದ ನರಳುತ್ತಿರುವ ಭಾರತವನ್ನು ಸಹಬಾಳ್ವೆ – ಸಮಾನತೆಯತ್ತ ಮುನ್ನಡೆಸುವ ನಿಮ್ಮ ಪ್ರಯತ್ನದ ಜೊತೆ ನಾನಿದ್ದೇನೆ, ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ವಯನಾಡಿನ ಜನ ಕಳೆದ ಬಾರಿಗಿಂತ ಹೆಚ್ಚಿನ‌ ಮತಗಳಿಂದ ನಿಮ್ಮನ್ನು ಆಯ್ಕೆ ಮಾಡುತ್ತಾರೆಂಬ ಪೂರ್ಣ ಭರವಸೆ ನನಗಿದೆ. ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ. ದ್ವೇಷದ ಜ್ವಾಲೆ ಅಳಿಯಲಿ, ಪ್ರೀತಿಯ ಹಣತೆ ಬೆಳಗಲಿ, ನಮ್ಮೆಲ್ಲರ ಭಾರತ ಪ್ರಕಾಶಿಸಲಿ ಎಂದಿದ್ದಾರೆ..

ಕಳೆದ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಈ ಬಾರಿಯೂ ರಾಹುಲ್ ವಯನಾಡಿನಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.

ಸಿದ್ಧರಾಮಯ್ಯನವರಿಗೆ ಸೋಲಿನ ಭೀತಿ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿ

ವೆಂಕಟರಮಣಸ್ವಾಮಿ ಮೋದಿ, ನಾಮ ಜೆಡಿಎಸ್ ಪಕ್ಷ ಇದ್ದ ಹಾಗೆ: ಶಾಸಕ ಸಮೃದ್ಧಿ ಮಂಜುನಾಥ್

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಾಕ್ಸರ್ ವಿಜಯೇಂದರ್

About The Author