Darshan Arrest Case: ಆರೋಪಿಗಳು 13 ಅಲ್ಲ, 17 ಜನ!

Sandalwood Crime News: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಖ್ಯೆ 13ರಿಂದ 17ಕ್ಕೆ ಏರಿಕೆಯಾಗಿದೆ. ದರ್ಶನ್, ಪವಿತ್ರಾಗೌಡ, ವಿನಯ್ ಸೇರಿದಂತೆ 13 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಪವಿತ್ರಾಗೌಡ ಹಾಗೂ ದರ್ಶನ್‌ ಸೇರಿದಂತೆ 17 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್‌ ಕಸ್ಟ್‌ಡಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪವಿತ್ರಾಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2, ಕೆ.ಪರ್ವನ್ ಎ3 ಆರೋಪಿಯಾಗಿದ್ದಾರೆ. ರಘು ದರ್ಶನ್ ಎ4, ನಂದೀಶ್ ಎ5 ಆಗಿದ್ದಾರೆ. ದರ್ಶನ್ ಆಪ್ತರಾದ ವಿನಯ್, ಪ್ರದೋಷ್,ದೀಪಕ್, ಲಕ್ಷ್ಮಣ್, ಕಾರ್ತಿಕ್, ನಾಗರಾಜು, ನಿಖಿಲ್, ಕೇಶವಮೂರ್ತಿ ಅವರನ್ನು ಅರೆಸ್ಟ್ ಮಾಡಲಾಗಿದೆ.

ಇನ್ನೂ, ನಿನ್ನೆ ರಾತ್ರಿ ಪೊಲೀಸ್ ಠಾಣೆಯಲ್ಲೇ ರಾತ್ರಿ ಕಳೆದಿರುವ ದರ್ಶನ್ ಅ್ಯಂಡ್ ಟೀಂ, ರಾತ್ರಿ ಊಟ ಮಾಡಲು ಹಿಂದೇಟು ಹಾಕಿದೆ ಎನ್ನಲಾಗಿದೆ. ಬೆಳಗ್ಗೆ ಆರೋಪಿಗಳಿಗೆ ಇಡ್ಲಿ, ಚಟ್ನಿ ಹಾಗೂ ರೈಸ್ ಬಾತ್ ತಂದುಕೊಟ್ಟಿದ್ದಾರೆ. ಕೆಲವು ಆರೋಪಿಗಳು ಬೆಳಗಿನ ಉಪಹಾರ ಸೇವಿಸಿದರೆ, ಕೆಲವರು ಟಿಫಿನ್ ಮಾಡಲು ಹಿಂದೇಟು ಹಾಕಿದ್ದಾರೆ.

ಎಲ್ಲರನ್ನೂ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಇಂದು ರೇಣುಕಾಸ್ವಾಮಿ ಕೊಲೆಯಾದ ಗೋಡಾನ್‌ಗೆ ಆರೋಪಿಗಳನ್ನ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳನ್ನ ಸ್ಥಳ ಮಹಜರ್ ಗೆ ಕರೆತರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಈ ಗೋಡಾನ್‌ವನ್ನು ಸೀಜ್ ಮಾಡಿದ್ದಾರೆ. ಈ ಗೋಡಾನ್ ಸುತ್ತಮುತ್ತ ಹೆಚ್ಚಾಗಿ ಸಾರ್ವಜನಿಕರು ಓಡಾಟ ಕೂಡ ಇಲ್ಲ ಎನ್ನಲಾಗಿದೆ. ಈ ಗೋಡಾನ್‌ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿದೆ.

ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

ಮಿಲಿಟರಿ ವಿಮಾನ ಪತನ: ಮಲಾವಿಯ ಉಪಾಧ್ಯಕ್ಷ ಸೇರಿ 9 ಜನರ ದುರ್ಮರಣ

ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್‌ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್

About The Author