ಧಾಬಾ ಸ್ಟೈಲ್ ಬದನೆಕಾಯಿ ಗ್ರೇವಿ..

ಈತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ದಾಬಾಗಳಿಗೆ ವಿಸಿಟ್ ಮಾಡುತ್ತಿದ್ದಾರೆ. ಯಾಕಂದ್ರೆ ದಾಬಾಗಳಲ್ಲಿ ಉತ್ತರ ಭಾರತ ಶೈಲಿಯ ಊಟ ಸಿಗುತ್ತದೆ. ಪನೀರ್ ಗ್ರೇವಿ, ಮಂಚೂರಿ, ರೋಟಿ, ನಾನ್, ಬಟರ್‌ ಕುಲ್ಚಾ, ಹೀಗೆ ತರಹೇವಾರಿ ಉತ್ತರಭಾರತ ಶೈಲಿ, ಪಂಜಾಬಿ ಶೈಲಿ ಫುಡ್ ತಯಾರಿಸಲಾಗತ್ತೆ. ಎಲ್ಲ ದಾಬಾಗಳಲ್ಲಿ ಅಲ್ಲದಿದ್ದರೂ, ಕೆಲವು ದಾಬಾಗಳಲ್ಲಿ ಬದನೆ ಗ್ರೇವಿ ಮಾಡಲಾಗುತ್ತದೆ. ಹಾಗಾದ್ರೆ ದಾಬಾ ಬದನೆಕಾಯಿ ಗ್ರೇವಿ ಮಾಡೋದು ಹೇಗೆ..? ಅದನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ನೆನೆಸಿದ ಕಡಲೆಬೀಜ ಪ್ರತಿದಿನ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು..!

ಬೇಕಾಗುವ ಸಾಮಗ್ರಿ: 5 ಬದನೆಕಾಯಿ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 5 ಸ್ಪೂನ್ ಎಣ್ಣೆ, ಕೊಂಚ ಸಾಸಿವೆ ಕಾಳು, ಕೊಂಚ ಬೆಲ್ಲ, ಹುಣಸೆಹಣ್ಣು, ಕಾಲು ಕಪ್ ಶೇಂಗಾ, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಅರ್ಧ ಸ್ಪೂನ್ ಜೀರಿಗೆ, ಒಂದು ಸ್ಪೂನ್ ಎಳ್ಳು, ಅರ್ಧ ಸ್ಪೂನ್ ಸೋಂಪು, ಕೊಂಚ ಮೆಂತ್ಯೆ ಕಾಳು, ನಾಲ್ಕು ಒಣಮೆಣಸು, ಒಂದು ಕಪ್‌ ಕೊಬ್ಬರಿ ತುರಿ, ಅರ್ಧ ಸ್ಪೂನ್ ಅರಿಶಿನ ಪುಡಿ, ಕೊಂಚ ಹಿಂಗು, ಧನಿಯಾ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಗ್ಯಾಸ್ ಆನ್ ಮಾಡಿ ಪ್ಯಾನ್ ಇಟ್ಟು, ಶೇಂಗಾ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್‌ಗೆ ಜೀರಿಗೆ, ಕೊತ್ತೊಂಬರಿ ಕಾಳು, ಎಳ್ಳು, ಸೋಂಪು, ಮೆಂತ್ಯೆ ಕಾಳು, ಒಣ ಮೆಣಸು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಬ್ಲೆಂಡರ್‌ಗೆ ಕೊಬ್ಬರಿ ತುರಿ, ಹುರಿದುಕೊಂಡ ಮಸಾಲೆ ಮಿಶ್ರಣ ಹಾಕಿ, ಕೊಂಚ ಹುಣಸೆ ಹಣ್ಣು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಗ್ರೇವಿ ಮಸಾಲೆ ರೆಡಿ.

ಎರಡು ರೀತಿ ಶೇಂಗಾ ಚಟ್ನಿ ರೆಸಿಪಿ..

ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ಹಾಕಿ ಹುರಿದುಕೊಳ್ಳಿ. ಬದನೆಕಾಯಿ ಹಾಕಿ ಹುರಿಯಿರಿ.2 ನಿಮಿಷ ಮಂದ ಉರಿಯಲ್ಲಿ ನೀರು ಹಾಕದೇ, ಎಣ್ಣೆಯಲ್ಲೇ ಬದನೆಯನ್ನು ಬೇಯಿಸಬೇಕು. ನಂತರ ಗ್ರೇವಿ ಮಸಾಲೆ, ಅರಿಶಿನ ಪುಡಿ, ಹಿಂಗು, ಧನಿಯಾ ಪುಡಿ, ಗರಂ ಮಸಾಲೆ, ಬೆಲ್ಲ, ಉಪ್ಪು , ನೀರು ಹಾಕಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಗ್ರೇವಿ ಬದನೆ ಸರಿಯಾಗಿ ಬೆಂದರೆ, ದಾಬಾ ಸ್ಟೈಲ್ ಬದನೆ ಗ್ರೇವಿ ರೆಡಿ.

About The Author