Health Tips: ಸಕ್ಕರೆ ಖಾಯಿಲೆ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು..? ಇದಕ್ಕಾಗಿ ನೀವು ಏನೇನು ಪಥ್ಯ ಮಾಡಬೇಕು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಡಯಾಬಿಟೀಸ್ ಅನ್ನೋದು ಒಂದು ಖಾಯಿಲೆ ಹೌದಾ.. ಅಲ್ಲವಾ.. ಇದನ್ನು ವಾಸಿ ಮಾಡೋಕ್ಕೆ ಆಗೋದೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಲಿದ್ದೇವೆ.
ವೈದ್ಯರಾದ ಪವನ್ ಕುಮಾರ್, ಡಯಾಬಿಟೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ವೈದ್ಯರ ಪ್ರಕಾರ, ಡಯಾಬಿಟೀಸ್ ಬಗ್ಗೆ ಜನರಿಗೆ ಹಲವು ರೀತಿಯ ತಪ್ಪು ಕಲ್ಪನೆಗಳಿದೆ. ಏಕೆಂದರೆ, ಒಮ್ಮೆ ನಮಗೆ ಡಯಾಬಿಟೀಸ್ ಇದೆ ಅಂತಾ ಗೊತ್ತಾದ ತಕ್ಷಣ, ಕೆಲವರು ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ ಎಂದು, ತಾವೇ ಮನೆ ಮದ್ದು ಮಾಡಿಕೊಳ್ಳಲು ಶುರು ಮಾಡುತ್ತಾರೆ. ಇದು ತಪ್ಪು. ಹೀಗೆ ಮಾಡುವುದರಿಂದ ಸಕ್ಕರೆ ಖಾಯಿಲೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ಇದೆ ಎಂದು ಗೊತ್ತಾದ ತಕ್ಷಣ, ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ.
ಇನ್ನು ಸಕ್ಕರೆ ಖಾಯಿಲೆ ಅನ್ನುವುದು, ಮಾರಕ ಖಾಯಿಲೆ ಅಲ್ಲ. ಸರಿಯಾದ ಆಹಾರ ಪದ್ಧತಿ, ಜೀವನ ಕ್ರಮ, ವೈದ್ಯರ ಸಲಹೆ ಅನುಸರಿಸುವುದರಿಂದ, ಸಕ್ಕರೆ ಖಾಯಿಲೆಯನ್ನು ಕಡಿಮೆ ಮಾಡಬಹುದು. ಆದರೆ ಪೂರ್ತಿಯಾಗಿ ವಾಸಿ ಮಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವೈದ್ಯರು. ಏಕೆಂದರೆ, ಶುಗರ್ ಅನ್ನೋದು ಸ್ಲೋ ಪಾಯ್ಸನ್ ಇದ್ದಂತೆ. ಇದು ಕೊಂಚ ಕೊಂಚವಾಗಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿ, ಕೊನೆಗೆ ನಿಮ್ಮ ಜೀವಕ್ಕೆ ಕುತ್ತು ತರುತ್ತದೆ.
ಆದ್ದರಿಂದ ಶುಗರ್ ಇದ್ದವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ದೇಹದ ತೂಕ ಹೆಚ್ಚಾದಂತೆ, ಶುಗರ್ ಲೆವಲ್ ಹೆಚ್ಚಾಗುತ್ತದೆ. ಹಾಗಾಗಿ ಹೊತ್ತಿಗೆ ಸರಿಯಾಗಿ, ಆರೋಗ್ಯಕರ ಆಹಾರವನ್ನು ಸೇವಿಸಿ, ಪಥ್ಯ ಮಾಡುವುದರಿಂದ, ಮಾತ್ರೆ ತೆಗೆದುಕೊಳ್ಳದೇ, ಶುಗರ್ ಕಡಿಮೆ ಮಾಡಿಕೊಳ್ಳಬಹುದು. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಈ ವೀಡಿಯೋ ನೋಡಿ..