Health Tips: ನಾವು ರೋಗಿಗಳಾಗಬಾರದು. ಆರೋಗ್ಯವಾಗಿರಬೇಕು ಅಂತಲೇ, ಚೆನ್ನಾಗಿ ಹಣ್ಣು- ತರಕಾರಿ, ಸೊಪ್ಪು, ಮೊಳಕೆಕಾಳುಗಳನ್ನು ತಿನ್ನಬೇಕು ಅಂತಾ ಹೇಳುತ್ತಾರೆ. ಆದರೆ ನಮ್ಮ ನಿರ್ಲಕ್ಷ್ಯದಿಂದ ನಮಗೇನಾದರೂ ಶುಗರ್ ಬಂದರೆ, ನಾವು ಪ್ರಕೃತಿಯಿಂದ ಸಿಗುವ ಕೆಲ ಸೊಪ್ಪು ತರಕಾರಿಗಳನ್ನು ಸಹ ತಿನ್ನಲಾಗುವುದಿಲ್ಲ, ಯಾಕಂದ್ರೆ ಅಂಥ ತರಕಾರಿಗಳು ನಮ್ಮ ರೋಗವನ್ನು ಇನ್ನೂ ಹೆಚ್ಚಿಸಿಬಿಡತ್ತೆ. ಹಾಗಾದ್ರೆ ಶುಗರ್ ಬಂದಾಗ, ಯಾವ ಸೊಪ್ಪು, ತರಕಾರಿಗಳನ್ನು ನಾವು ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಸ್ವೀಟ್ ಕಾರ್ನ್. ಮಧುಮೇಹಿಗಳು ಮೆಕ್ಕೆಜೋಳದ ಸೇವನೆ ಮಾಡುವುದರಿಂದ ಅವರ ಶುಗರ್ ಲೆವಲ್ ಹೆಚ್ಚಾಗುತ್ತದೆ. ಯಾಕಂದ್ರೆ ಇದರಲ್ಲಿ ಕಡಿಮೆ ಫೈಬರ್ ಇರುತ್ತದೆ. ಮತ್ತು ಹೆಚ್ಚು ಕಾರ್ಬೋಹೈಡ್ರೇಟ್ ಇರುತ್ತದೆ.
ಬಟಾಣಿ. ಬಟಾಣಿಯಲ್ಲೂ ಕೂಡ ಕಡಿಮೆ ಫೈಬರ್ ಇರುವ ಕಾರಣ, ಇದರ ಸೇವನೆಯಿಂದ ಶುಗರ್ ಹೆಚ್ಚಾಗುತ್ತದೆ. ಹಾಗಾಗಿ ಬಟಾಣಿಯನ್ನು ಮಿತವಾಗಿ ಸೇವಿಸಿ. ಅಥವಾ ಸೇವಿಸಬೇಡಿ.
ಆಲೂಗಡ್ಡೆ. ಆಲೂಗಡ್ಡೆಯ ಪದಾರ್ಥ ಟೇಸ್ಟಿಯಾಗಿರುತ್ತದೆ. ಆದರೆ ಇದು ಮಧುಮೇಹಿಗಳಿಗೆ ಮಾತ್ರ, ಉತ್ತಮವಲ್ಲ. ಅಷ್ಟೇ ಅಲ್ಲದೇ, ಆಲೂಗಡ್ಡೆಯನ್ನು ಕರಿದು ಚಿಪ್ಸ್, ಫ್ರೆಂಚ್ ಫ್ರೈಸ್ ರೀತಿ ಸೇವಿಸುವುದರಿಂದ, ಇನ್ನೂ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.
ಸಿಹಿ ಗೆಣಸು. ಸಿಹಿ ಗೆಣಸಿನ ಹೆಸರಿನಲ್ಲೇ ಸಿಹಿ ಇದೆ. ಆಗಲೇ ನೀವು ಶುಗರ್ ಇದ್ದವರಿಗೆ ಇದು ಉತ್ತಮ ಆಹಾರ ಅಲ್ಲ ಅಂತಾ ತಿಳಿಯಬೇಕು. ಹಾಗಂತ ಸಿಹಿ ಗೆಣಸನ್ನು ತಿನ್ನಲೇಬಾರದು ಅಂತಲ್ಲ. ಬದಲಾಗಿ, ಮಿತವಾಗಿ ಸೇವಿಸಿದರೆ ಉತ್ತಮ.
ಕ್ಯಾರೆಟ್. ಕ್ಯಾರೆಟ್ ರುಚಿ ಸ್ವಲ್ಪ ಸಿಹಿಯಾಗಿರುತ್ತದೆ. ಅಲ್ಲದೇ, ಇದರಲ್ಲಿ ಫೈಬರ್ ಅಂಶವೂ ಕಡಿಮೆ ಇರುತ್ತದೆ. ಹಾಗಾಗಿ ಶುಗರ್ ಇದ್ದವರು ಇದನ್ನು ಸೇವಿಸಿದರೆ, ಶುಗರ್ ಇನ್ನೂ ಹೆಚ್ಚಾಗಬಹುದು.
ಬಿಳಿ ಅಕ್ಕಿ ಅನ್ನ. ಬಿಳಿ ಅಕ್ಕಿ ಅನ್ನದ ಸೇವನೆಯಿಂದ ಶುಗರ್ ಲೆವಲ್ ಹೆಚ್ಚಾಗುತ್ತದೆ ಅಂತಾ ಎಲ್ಲರಿಗೂ ಗೊತ್ತು. ಅದರಲ್ಲೂ ತಿಳಿ ತೆಗಿಯದೇ, ಕುಕ್ಕರ್‌ನಲ್ಲಿ ಅನ್ನ ಮಾಡಿ, ಸೇವಿಸುವುದರಿಂದ ಶುಗರ್ ಇನ್ನೂ ಹೆಚ್ಚಾಗುತ್ತದೆ. ಬಿಳಿ ಅಕ್ಕಿ ಅನ್ನ ಉಣ್ಣಲೇಬೇಕು ಅಂತಿದ್ದರೆ, ತಿಳಿ ತೆಗೆದು ಸೇವಿಸಿ.
ಸಿಹಿ ಗುಂಬಳಕಾಯಿ. ಸಿಹಿ ಗುಂಬಳಕಾಯಿಯಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದ್ದು, ಫೈಬರ್ ಕಡಿಮೆಯಾಗಿರುತ್ತದೆ. ಹಾಗಾಗಿ ಇದರ ಸೇವನೆಯಿಂದ ದೇಹದಲ್ಲಿ ಶುಗರ್ ಲೆವಲ್ ಹೆಚ್ಚಾಗುತ್ತದೆ.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..