Health Tips: ಈ ಪ್ರಪಂಚದಲ್ಲಿ ಕ್ಯಾನ್ಸರ್ನಿಂದ ಸಾವನ್ನಪ್ಪಿದವರಲ್ಲಿ, ನಿರ್ಲಕ್ಷ್ಯ ಮಾಡಿ ಜೀವ ಬಿಟ್ಟವರೇ ಹೆಚ್ಚಿನವರಾಗಿದ್ದಾರೆ. ಏಕೆಂದರೆ ಹಲವರು ದೇಹದಲ್ಲಾಗುವ ಗಡ್ಡೆ, ನೋವುಗಳನ್ನು ನಿರ್ಲಕ್ಷಿಸಿ, ಕ್ಯಾನ್ಸರ್ ಫೈನಲ್ ಸ್ಟೇಜ್ಗೆ ಹೋದಾಗಲೇ, ಆ ಬಗ್ಗೆ ಗಮನ ಕೊಡುತ್ತಾರೆ. ಮತ್ತು ವೈದ್ಯರ ಬಳಿ ಹೋಗುತ್ತಾರೆ. ಆದರೆ ಅದನ್ನು ಗುಣಪಡಿಸಲು ಸಾಧ್ಯವಾಗದ ಕಾರಣ, ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಿರ್ಲಕ್ಷ್ಯ ಮಾಡದಿದ್ದಲ್ಲಿ ಶೇ.90 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಈ ವಿಷಯಕ್ಕೆ ಸಂಬಂಧಿಸಿದಂತೆ, ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಮಾತನಾಡಿದ್ದು, ನಿರ್ಲಕ್ಷ್ಯದಿಂದಲೇ ಕ್ಯಾನ್ಸರ್ ಫೈನಲ್ ಸ್ಟೇಜ್ ತಲುಪುತ್ತದೆ ಎಂದು ಹೇಳಿದ್ದಾರೆ. ಉದಾಹರಣೆಗೆ ಸ್ತನ ಕ್ಯಾನ್ಸರ್ ಬರುವ ಮುನ್ನ, ಸ್ತನದಲ್ಲಿ ಗಡ್ಡೆಯಾಗುತ್ತದೆ. ಆ ಗಡ್ಡೆ ದೊಡ್ಡದಾಗಿ ಬೆಳೆದಾಗ, ಕ್ಯಾನ್ಸರ್ ಹರಡುವುದು. ಹಾಗಾಗಿ ಸ್ತನದಲ್ಲಿ ಗಡ್ಡೆ ಕಾಣಿಸಿಕೊಂಡಾಗ, ನೋವಾದಾಗ, ಅದನ್ನು ನಿರ್ಲಕ್ಷಿಸದೇ, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಬೇಕು. ಆಗ ವೈದ್ಯರು ಕ್ಯಾನ್ಸರ್ ಇದ್ದಲ್ಲಿ, ಆ ಗಡ್ಡೆ ತೆಗೆದು, ಕ್ಯಾನ್ಸರ್ ಹರಡದಂತೆ ತಡೆಯುತ್ತಾರೆ. ಇದರಿಂದ ಪ್ರಾಣವೂ ಉಳಿಯುತ್ತದೆ.
ಇನ್ನು ಕ್ಯಾನ್ಸರ್ ಇದ್ದವರಿಗೆ ಕಿಮೋ ಥೆರಪಿ ಕೊಡಲಾಗುತ್ತದೆ. ಕಿಮೋ ಥೆರಪಿ ಎಂದರೆ, ದೇಹದಲ್ಲಿರುವ ಕ್ಯಾನ್ಸರ್ ಕಣಗಳನ್ನು ಸಾಯಿಸಲು ಈ ಥೆರಪಿ ಕೊಡಲಾಗುತ್ತದೆ. ಒಮ್ಮೆ ಕಿಮೋ ಥೆರಪಿ ಮಾಡುವುದಾದರೆ, ಬೆಳಿಗ್ಗೆಯಿಂದ ಸಂಜೆಯವರೆಗೂ ಕಿಮೋಥೆರಪಿ ಮಾಡಲಾಗುತ್ತದೆ. 3 ವಾರಗಳ ಬಳಿಕ, ಇನ್ನೊಮ್ಮೆ ಕಿಮೋ ಥೆರಪಿ ಮಾಡಲಾಗುತ್ತದೆ. ಈ ರೀತಿ ಮೊದಲ ಸ್ಟೇಜ್ನಲ್ಲಿರುವವರಿಗೆ ಮಾಡಿದಾಗ, ಅವರ ಆರೋಗ್ಯ ಸರಿಯಾಗುತ್ತದೆ. ಶೇ.90ರಷ್ಟು ಕ್ಯಾನ್ಸರ್ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..




