Wednesday, January 22, 2025

Latest Posts

ನಿಮ್ಮ ಮಕ್ಕಳು ನಾಯಿ ಪ್ರೇಮಿಗಳಾಗಿದ್ದಲ್ಲಿ ಎಚ್ಚರ..

- Advertisement -

Health Tips: ಹಿಂದಿನ ಕಾಲದಲ್ಲಿ ಯಾರದ್ದಾದರೂ ಮನೆಯಲ್ಲಿ ಸಾಕು ನಾಯಿ ಇದ್ದರೆ, ಅವರು ಉತ್ತಮ ಆರ್ಥಿಕ ಪರಿಸ್ಥಿತಿ ಉಳ್ಳವರು ಎಂದು ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹಲವರ ಮನೆಯಲ್ಲಿ ಸಾಕು ನಾಯಿಗಳಿದೆ. ಅಲ್ಲದೇ, ಹಲವರು ನಾಯಿ ಪ್ರೇಮಿಗಳಿದ್ದಾರೆ. ಅದ ರೀತಿ ಅವರ ಮಕ್ಕಳು ಕೂಡ ನಾಯಿಯೊಂದಿಗೆ ಸಲುಗೆಯಿಂದ ಬೆರೆಯುತ್ತಾರೆ. ಆದರೆ ಇದು ತುಂಬಾ ಡೇಂಜರ್ ಆಗಿರುತ್ತದೆ. ಹಾಗಾದ್ರೆ ಯಾಕೆ ನಾಯಿಯೊಂದಿಗೆ ಮಕ್ಕಳನ್ನು ಬಿಡಬಾರದು ಅಂತಾ ಹೇಳುವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸಾಕಿದ ನಾಯಿಗಳು, ಅನ್ನ ಹಾಕಿದವರಿಗೆ ತೊಂದರೆ ಕೊಡುವುದು ಕಡಿಮೆ. ಆದರೂ ಕೂಡ ಅದನ್ನು ನಿರ್ಲಕ್ಷಿಸುವಂತಿಲ್ಲ. ಅದರ ಹಾವಭಾವಗಳನ್ನು ಕಂಡು ನೀವು ಅದರಿಂದ ದೂರವಿರಬೇಕಾಗುತ್ತದೆ. ಇನ್ನು ಎಲ್ಲಾದರೂ ಹೊರಗಡೆ ತಿರುಗಾಡಲು ಹೋದರೆ, ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚುತ್ತದೆ. ಹಾಗಾಗಿ ದೊಡ್ಡವರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬೇಕು. ಮತ್ತು ಮಕ್ಕಳನ್ನು ಒಬ್ಬೊಬ್ಬರೇ ಎಲ್ಲೂ ಬಿಡದೇ, ಅವರಿಗೂ ನಾಯಿಯಿಂದ ದೂರವಿರಲು ಹೇಳಬೇಕು ಎನ್ನುತ್ತಾರೆ, ಡಾ.ಆಂಜೀನಪ್ಪ.

ಇನ್ನು ಕೆಲ ಮಕ್ಕಳು ನಾಯಿಗೆ ಕಲ್ಲು ಹೊಡೆಯುತ್ತಾರೆ. ಅವನ್ನು ಆಟವಾಡಿಸಲು, ಕೀಟಲೆ ಮಾಡುತ್ತಾರೆ. ಅಥವಾ ನಾಯಿ ನೋಡಿದ ತಕ್ಷಣ ಹೆದರಿ ಓಡುತ್ತಾರೆ. ಆಗ, ನಾಯಿ ಅವರನ್ನು ಅಟ್ಟಿಸಿಕೊಂಡು ಬರುತ್ತದೆ. ಇಂಥ ಕೆಲಸಗಳನ್ನು ಮಾಡಬಾರದು ಎಂದು ಪೋಷಕರು ಮಕ್ಕಳಿಗೆ ಎಚ್ಚರಿಸುವುದು ಉತ್ತಮ. ಇಂಥ ಕೆಲಸಗಳಿಂದಲೇ, ಎಷ್ಟೋ ಮಕ್ಕಳಿಗೆ ಬೀದಿ ನಾಯಿ ಕಚ್ಚಿರುವುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

- Advertisement -

Latest Posts

Don't Miss