ನಿದ್ದೆ ಮಾಡಿಯೂ ನೀವು ನಿಮ್ಮ ದೇಹದ ತೂಕವನ್ನು ಇಳಿಸಬಹುದು ಗೊತ್ತಾ..?

Health Tips: ನಿದ್ದೆ ಮಾಡಿಯೂ ನಾವು ನಮ್ಮ ದೇಹದ ತೂಕವನ್ನು ಇಳಿಸಬಹುದು. ಈ ಮಾತು ಕೇಳಿ ನಿಮಗೆ ವಿಚಿತ್ರ ಎನ್ನಿಸಬಹುದು. ಆದರೆ ಇದು ನಿಜ. ಯಾರು ಅವಶ್ಯಕತೆ ಇದ್ದಷ್ಟು ನಿದ್ರಿಸುತ್ತಾರೋ, ಅವರ ತೂಕ ಸರಿಯಾಗಿ ಇರುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಮತ್ತು ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವವರ ತೂಕ ಹೆಚ್ಚಾಗಿರುತ್ತದೆ. ಹಾಗಾದ್ರೆ ನಿದ್ರೆಗೂ, ತೂಕಕ್ಕೂ ಇರುವ ಸಂಬಂಧವೇನೆಂದು ತಿಳಿಯೋಣ ಬನ್ನಿ..

ಯಾರು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುತ್ತಾರೋ, ಅಂಥವರು ಆರೋಗ್ಯಕರ ತೂಕವನ್ನು ಹೊಂದಿರುತ್ತಾರೆ. ಮತ್ತು ಯಾರು ಲೇಟಾಗಿ ಮಲಗಿ 9 ಗಂಟೆಗೂ ಹೆಚ್ಚು ಕಾಲ ಮಲಗುತ್ತಾರೋ, ಅವರ ತೂಕ ಸರಿಯಾಗಿ ಇರುವುದಿಲ್ಲ. ಇನ್ನು ನಿದ್ರಾಹೀನತೆಯಿಂದ ಬಳಲುವವರ ತೂಕ ಕೂಡ ಅನಾರೋಗ್ಯಕರವಾಗಿ ಹೆಚ್ಚುತ್ತದೆ. ಇದು ನಿದ್ರೆಗೂ ಮತ್ತು ತೂಕಕ್ಕೆ ಇರುವ ಸಂಬಂಧ.

ಮನುಷ್ಯ ರಾತ್ರಿಯ ಹೊತ್ತು 7ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ಇದು ನಿದ್ರೆಗೆ ಸರಿಯಾದ ಸಮಯ. 8ಗಂಟೆಗೂ ಮೀರಿ ಮಲಗಿದರೆ, ಅದರಿಂದ ಅನಾರೋಗ್ಯ, ಸೋಮಾರಿತನ ಕಟ್ಟಿಟ್ಟ ಬುತ್ತಿ. ಇನ್ನು ಯಾರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲವೋ, ಅಂಥವರಿಗೆ ಹೆಚ್ಚು ಹಸಿವಾಗುತ್ತದೆ. ಆದರೆ ಆರೋಗ್ಯಕರ ತಿಂಡಿ ತಿನ್ನಬೇಕು ಅಂತಾ ಅವರಿಗೆ ಅನ್ನಿಸುವುದಿಲ್ಲ. ಬದಲಾಗಿ, ಸಿಹಿ ತಿಂಡಿ, ಬೇಕರಿ ಪದಾರ್ಥ, ಕಾರ್ಬೋಹೈಡ್ರೇಟ್ ಹೆಚ್ಚಿರುವ ತಿಂಡಿ ತಿನ್ನಬೇಕು ಎಂದು ಎನ್ನಿಸುತ್ತದೆ. ಈ ಮೂಲಕ ಅವರ ದೇಹದ ತೂಕ, ಅನಾರೋಗ್ಯಕರವಾಗಿ ಹೆಚ್ಚುತ್ತ ಹೋಗುತ್ತದೆ.

ಅದರಲ್ಲೂ ರಾತ್ರಿ, ಮಧ್ಯರಾತ್ರಿಯ ಹೊತ್ತು ಸರಿಯಾಗಿ ನಿದ್ರೆ ಬರದಿದ್ದಾಗ, ಹಸಿವಾಗುತ್ತದೆ. ಮತ್ತು ರಾತ್ರಿ ಹೊತ್ತು ಜಂಕ್ ಫುಡ್ ತಿನ್ನುವುದರಿಂದ ಬೊಜ್ಜಿನ ಸಮಸ್ಯೆ ಬರುತ್ತದೆ. ಇನ್ನು ಮಲಗಿದರೆ ತೂಕ ಕಡಿಮೆಯಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ. ಹೌದು, ತೂಕ ಕಡಿಮೆಯಾಗುತ್ತದೆ. ನಾವು ಮಲಗಿದಾಗ, ಪ್ರತೀ ಗಂಟೆಗೆ 50 ಕ್ಯಾಲೋರಿ ಬರ್ನ್ ಆಗುತ್ತದೆ. ಈ ಮೂಲಕ ನಮ್ಮ ದೇಹದ ತೂಕ ಇಳಿಯುತ್ತದೆ. ಆದರೆ ರಾತ್ರಿ ಹೊತ್ತು ನಾವು ನೆಮ್ಮದಿಯಾಗಿ 7ರಿಂದ 8 ಗಂಟೆಗಳ ಕಾಲ ನಿದ್ರಿಸುವುದರಿಂದ ಮಾತ್ರ.

ನೀವು ಸುಮ್ಮನೆ ಮಂಚದ ಮೇಲೆ ಮಲಗಿದರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಆದರೆ ಸರಿಯಾದ ಸಮಯಕ್ಕೆ, ಸರಿಯಾಗಿ ನಿದ್ರಿಸಿದರೆ, ನಿಮ್ಮ ದೇಹದ ತೂಕ ಸರಿಯಾಗಿ ಇರುತ್ತದೆ. ನಾವು ಮಲಗಿದ್ದಾಗಲೂ, ನಮ್ಮ ಮೆದಳು ಕಾರ್ಯಗತವಾಗಿರುತ್ತದೆ. ನಮ್ಮ ದೇಹದ ಶಕ್ತಿಗಳು ಕಾರ್ಯ ನಿರ್ವಹಿಸುತ್ತದೆ. ಈ ರೀತಿಯಾಗಿ ದೇಹದ ತೂಕ ಇಳಿಯುತ್ತದೆ.

ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..

ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?

About The Author