Thursday, October 10, 2024

Latest Posts

ಪ್ರಧಾನ ಮಂತ್ರಿ ಯೋಜನೆಯಲ್ಲೇ ಮೋದಿ ಹೆಸರು ಕೈಬಿಟ್ಟ ಜಿಲ್ಲಾಡಳಿತ..!

- Advertisement -

ರಾಮನಗರ: ಪ್ರಾಧಾನಮಂತ್ರಿ ಯೋಜನೆಯಲ್ಲಿ ಖುದ್ದು ನರೇಂದ್ರ ಮೋದಿ ಹೆಸರನ್ನು ಕೈಬಿಟ್ಟು ಸಿಎಂ ಹಾಗೂ ಡಿಸಿಎಂ ಭಾವಚಿತ್ರ ಮುದ್ರಿಸೋ ಮೂಲಕ ಜಿಲ್ಲಾಡಳಿತ ಎಡವಟ್ಟು ಮಾಡಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪೋಸ್ಟರ್ ಗಳಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಪೋಸ್ಟರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಜಿಲ್ಲಾಡಳಿತ ಕೈಬಿಟ್ಟಿದೆ. ಜಿಲ್ಲಾಡಳಿತದ ಈ ಎಡವಟ್ಟು ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ರಾಜಕೀಯ ಪ್ರೇರಿತವಾಗಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪ್ರಧಾನಿ ಮೋದಿ ಹೆಸರನ್ನು ಕೈಬಿಟ್ಟಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮೋದಿಯವರ ನೀಡಿದ ಯೋಜನೆಗೆ ರಾಜ್ಯದ ಸಿಎಂ ಭಾವಚಿತ್ರ ಬಳಸಿ ಮೋಸ ಮಾಡುತ್ತಿದ್ದಾರೆ ಅಂತ ಕಿಡಿ ಕಾರಿದ್ದಾರೆ.

ಪೋಸ್ಟರ್ ನಲ್ಲಿರೋ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಭಾವಚಿತ್ರವನ್ನು ಹರಿದು ಹಾಕುತ್ತಿರೋ ಬಿಜೆಪಿ ಕಾರ್ಯಕರ್ತ

ಇನ್ನು ಇದನ್ನು ಪ್ರಶ್ನಿಸಿರೋ ಬಿಜೆಪಿ ಕಾರ್ಯಕರ್ತರು ಕೆಲವೆಡೆ ತಾವೇ ಪೋಸ್ಟರ್ ನಲ್ಲಿರೋ ಸಿಎಂ ಮತ್ತು ಡಿಸಿಎಂ ಭಾವಚಿತ್ರವನ್ನು ಹರಿದು ಹಾಕ್ತಿದ್ದಾರೆ. ಅಲ್ಲದೆ, ಅಧಿಕಾರಿಗಳಿಗೆ ಈಗಾಗಲೇ ಜಿಲ್ಲೆಯ ಹಲವೆಡೆ ಅಂಟಿಸಲಾಗಿರೋ ಪೋಸ್ಟರ್ ಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ.\

ಪ್ರಧಾನಿ ಬಳಿ ಸುಮಲತಾ ಮನವಿ ಮಾಡಿಕೊಂಡಿದ್ದು ಯಾವ ವಿಷಯಕ್ಕೆ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=ugS6r9Pm7AU
- Advertisement -

Latest Posts

Don't Miss