Saturday, October 12, 2024

Latest Posts

ಇನ್ಮುಂದೆ ಓಲಾ,ಊಬರ್ ಶೇರಿಂಗ್, ಪೂಲಿಂಗ್ ಬಂದ್..!

- Advertisement -

ಬೆಂಗಳೂರು: ರಾಜ್ಯಾದ್ಯಂತ ಓಲಾ, ಊಬರ್ ಗೆ ಮೂಗುದಾರ ಆರ್ ಟಿಒ ಮೂಗುದಾರ ಹಾಕಿದೆ.ಟ್ಯಾಕ್ಸಿ ಸಂಸ್ಥೆಗಳು ನೀಡುತ್ತಿರೋ ಶೇರಿಂಗ್ ಮತ್ತು ಪೂಲಿಂಗ್ ಸೇವೆಗಳನ್ನು ರದ್ದುಗೊಳಿಸಿದೆ.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಆರ್ ಟಿಒ ಇದೀಗ ಓಲಾ ಮತ್ತು ಊಬರ್ ನಲ್ಲಿ ಶೇರಿಂಗ್ ಮತ್ತು ಪೂಲಿಂಗ್ ಸೇವೆಯನ್ನು ರದ್ದುಗೊಳಿಸಿ ಆದೇಶಿಸಿದೆ. ಶೇರಿಂಗ್ ಮತ್ತು ಪೂಲಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ ತೊಂದರೆ ಮತ್ತಿತರ ಅನಾನುಕೂಲಗಳ ಹಿನ್ನೆಲೆಯಲ್ಲಿ ಈ ಸೇವೆಯನ್ನು ಈ ಕ್ಷಣದಿಂದಲೇ ರದ್ದುಗೊಳಿಸಲಾಗಿದೆ. ಒಂದು ವೇಳೆ ಸಂಸ್ಥೆಗಳು ಈ ನಿಯಮ ಉಲ್ಲಂಘಿಸಿದ್ರೆ ಪರ್ಮಿಟನ್ನೇ ರದ್ದುಗೊಳಿಸೋದಾಗಿ ಆರ್ ಟಿಒ ಖಡಕ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರೊಂದಿಗೆ ಸಭೆ ನಡೆಸಿದ ಆರ್ ಟಿಒ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಏನಿದು ಶೇರಿಂಗ್, ಪೂಲಿಂಗ್..?

ನಿಗದಿತ ಸ್ಥಳ ತಲುಪಲು ಬಾಡಿಗೆಗೆ ಪಡೆದ ಟ್ಯಾಕ್ಸಿಯಲ್ಲಿ ಅದೇ ಮಾರ್ಗವಾಗಿ ಅಥವಾ ಸುತ್ತಮುತ್ತಲಿನ ಸ್ಥಳ ತಲುಪಲು ಮತ್ತೊಬ್ಬರು ಪ್ರಯಾಣಿಸಲು ಇರುವ ಆಯ್ಕೆಯನ್ನು ಶೇರಿಂಗ್ ಅಥವಾ ಪೂಲಿಂಗ್ ಅಂತ ಕರೆಯಲಾಗುತ್ತೆ. ಶೇರಿಂಗ್ / ಪೂಲಿಂಗ್ ನಿಂದಾಗಿ ನಿಮ್ಮ ಪ್ರಯಾಣ ದರ ಕಡಿಮೆಯಾಗುತ್ತದೆ. ಇನ್ನೂ ಶೇರಿಂಗ್ ನಿಂದಾಗಿ ಹಣ ಉಳಿತಾಯವಾಗೋದಲ್ಲದೆ ಟ್ರಾಫಿಕ್ ಗೂ ಕೂಡ ಕಡಿಮೆಯಾಗುತ್ತೆ ಅನ್ನೋದು ಬುದ್ಧಿ ಜೀವಿಗಳ ಪ್ರತಿಪಾದನೆ.  ಆದ್ರೆ ಇದರಿಂದ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗೋ ಸಾಧ್ಯತೆಯೇ ಹೆಚ್ಚು. ಹೀಗಾಗಿ ಆರ್ ಟಿಒ ಶೇರಿಂಗ್ /ಪೂಲಿಂಗ್ ಸೇವೆಯನ್ನೇ ರದ್ದುಗೊಳಿಸಿದೆ.

ಗಗನಕ್ಕೇರಿತು ಚಿನ್ನದ ಬೆಲೆ. ಆಷಾಢಕ್ಕಾದ್ರೂ ಕಮ್ಮಿಯಾಗುತ್ತಾ ರೇಟು!!? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=axQ1xqes1mY
- Advertisement -

Latest Posts

Don't Miss