National News: ಸಾಕಷ್ಟು ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಕೊಡಲಾಗುತ್ತದೆ. ವರ್ಷವಿಡೀ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳನ್ನು ಸಂತುಷ್ಪಡಿಸಲು ಮತ್ತು ಮುಂದಿನ ಯೋಜನೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲು ಈ ಕ್ರಮವನ್ನು ಅನುಸರಿಸಿಕೊಂಡು ಬರಲಾಗುತ್ತದೆ. ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಈಗಾಗಲೇ ಉಡುಗೊರೆಗಳು ದೊರೆತಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಅತ್ಯಪರೂಪದ್ದು. ತಮಿಳುನಾಡಿನ (Tamil Nadu) ಟೀ ಎಸ್ಟೇಟ್ ಮಾಲಿಕರೊಬ್ಬರು ತಮ್ಮ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ನೆಟ್ಟಿಗರು ಈ ಉಡುಗೊರೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
ನೀಲಗಿರಿ ಜಿಲ್ಲೆಯ ಕೋಟಗಿರಿ ನಗರದಲ್ಲಿರುವ ಟೀ ಎಸ್ಟೇಟ್‌ನ ಮಾಲೀಕ ಪಿ. ಶಿವಕುಮಾರ ತಮ್ಮ 15 ಉದ್ಯೋಗಿಗಳಿಗೆ ದೀಪಾವಳಿಗಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ವೈರಲ್ ಆಗಿರುವ ವಿಡಿಯೋ ಮೂಲತಃ ಪಿಟಿಐನದ್ದು. ವಿವಿಧ ಆಟಗಳಲ್ಲಿ ಉದ್ಯೋಗಿಗಳನ್ನು ತೊಡಗಿಸಿಕೊಂಡ 42 ವರ್ಷದ ಎಸ್ಟೇಟ್ ಮಾಲಿಕರು ಅವರುಗಳಿಗೆ ಬೈಕ್ ಕೀಗಳನ್ನು ಕೊಡುತ್ತಾರೆ.
ಇತ್ತೀಚೆಗೆ ಹರಿಯಾಣಾದ ಪಂಚಕುಲದ ಫಾರ್ಮಾ ಕಂಪನಿ ಮಾಲಿಕರೊಬ್ಬರು ದೀಪಾವಳಿ ಉಡುಗೊರೆಯಾಗಿ ಹೊಸ ಕಾರುಗಳನ್ನು ತಮ್ಮ ಉದ್ಯೋಗಿಗಳಿಗೆ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು. ಮಿಟ್ಸ್‌ಕಾರ್ಟ್ ಅಧ್ಯಕ್ಷ ಎಂಕೆ ಭಾಟಿಯಾ 12 ಉದ್ಯೋಗಿಗಳಿಗೆ ಹೊಚ್ಚಹೊಸ ಟಾಟಾ ಪಂಚ್ ಕಾರುಗಳ ಕೀಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅನ್ನೋದು ಪಾರ್ಲಿಮೆಂಟ್ ಚುನಾವಣೆಯ ಇನ್ನೊಂದು ಡ್ರಾಮಾ’
ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..
‘ಬ್ರ್ಯಾಂಡ್ ಬೆಂಗಳೂರು ಸಿಂಗಾಪುರ ಮಾಡ್ತೀವಿ ಅಂತಾರೆ ಆದರೆ ಕುಡಿಯೋಕೆ ನೀರಿಲ್ಲ’