ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ..
ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ ವಸ್ತುಗಳನ್ನು ಮುಟ್ಟಬಾರದು. ತುಳಸಿ ಗಿಡವನ್ನು ಮುಟ್ಟಬಾರದು. ಇಂದಿನ ಕಾಲದ ಗಡಿಬಿಡಿಯ ಜೀವನದಲ್ಲಿ ಹೆಣ್ಣು ಮಕ್ಕಳು ಎಲ್ಲ ಕೆಲಸ ಮುಗಿಸಿ, ಬಳಿಕ ಸ್ನಾನ ಮಾಡುತ್ತಾರೆ. ಆದರೆ ಹಿಂದೂ ಧರ್ಮದ ಪದ್ಧತಿ ಪ್ರಕಾರ, ಸ್ನಾನ ಮಾಡಿಯೇ, ಒಲೆ ಉರಿಸಬೇಕು, ಅಡುಗೆ ಮಾಡಬೇಕು.
ಇನ್ನು ಸ್ನಾನದ ಬಳಿಕ ಏನು ಮಾಡಬಾರದು ಅನ್ನೋ ಬಗ್ಗೆ ಹೇಳುವುದಾದರೆ, ಸ್ನಾನವಾದ ಬಳಿಕ, ತಲೆ ಕೂದಲು ಕತ್ತರಿಸಬಾರದು. ಉಗುರು ತೆಗಿಯಬಾರದು. ಸ್ನಾನ ಮಾಡಿದ ಬಳಿಕ ಎಣ್ಣೆ ಹಾಕಬಾರದು. ಸ್ನಾನದ ಮೊದಲು ಧರಿಸಿದ ಬಟ್ಟೆಯನ್ನೇ, ನಂತರ ಧರಿಸಬಾರದು. ಸ್ನಾನ ಮಾಡುವ ಮೊದಲು, ನಾವು ಧರಿಸಿದ ಬಟ್ಟೆಯನ್ನು ಒದ್ದೆ ಮಾಡಿ, ಬಳಿಕ, ಸ್ನಾನ ಮಾಡಿ, ಹೊಸ ಬಟ್ಟೆಯನ್ನ ಧರಿಸಬೇಕು.
ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..