Health Tips: ಸಕ್ಕರೆ ಸೇವನೆಗಿಂತ ಬೆಲ್ಲದ ಸೇವನೆ ಅತ್ಯುತ್ತಮ ಅಂತಾ ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ. ಆದರೆ ಶುಗರ್ ವಿಷಯದಲ್ಲಿ ಇದು ಸುಳ್ಳು ಅಂತಾರೆ ವೈದ್ಯರು. ಡಯಾಬಿಟೀಸ್ ನಲ್ಲಿ ಸಕ್ಕರೆ ಖಾಯಿಲೆ, ಬೆಲ್ಲದ ಖಾಯಿಲೆ ಅಂತೇನಿಲ್ಲ. ಎಲ್ಲವೂ ಒಂದೇ. ಶುಗರ್ ಇದ್ದವರು ಸಕ್ಕರೆಯೂ ತಿನ್ನಬಾರದು, ಬೆಲ್ಲವೂ ತಿನ್ನಬಾರದು. ಈ ಬಗ್ಗೆ ವೈದ್ಯರು ಏನೇನು ವಿವರಿಸಿದ್ದಾರೆಂದು ತಿಳಿಯೋಣ ಬನ್ನಿ..
ಶುಗರ್ ಇದ್ದವರು ಸಕ್ಕರೆ ಬಳಸಿ ಮಾಡಿದ ಸಿಹಿ ತಿಂಡಿಯ ಜೊತೆಗೆ ಬೆಲ್ಲ ಬಳಸಿ ಮಾಡಿದ ಸಿಹಿ ತಿಂಡಿಯನ್ನೂ ಸಹ ತಿನ್ನಬಾರದು. ನನಗೆ ಸಕ್ಕರೆ ಖಾಯಿಲೆ ಇದೆ, ಹಾಗಾಗಿ ನಾನು ಬೆಲ್ಲವನ್ನು ತಿನ್ನುತ್ತೇನೆ ಎಂದು ಹೇಳುವವರು ಹೆಚ್ಚಿನ ಜನರಿದ್ದಾರೆ. ಆದರೆ ಸಕ್ಕರೆ ಖಾಯಿಲೆ ಅನ್ನೋದು ಕಾಮನ್ ಭಾಷೆಯಲ್ಲಿ ನಾವು ಹೇಳುವುದಷ್ಟೇ ಬಿಟ್ಟರೆ, ಈ ರೋಗವನ್ನು ಡಯಾಬಿಟೀಸ್ ಎಂದು ಕರೆಯುತ್ತಾರೆ.
ಹಾಾಗಾಗಿ ಸಕ್ಕರೆ ಖಾಯಿಲೆ ಇದ್ದವರು ಸಕ್ಕರೆಯನ್ನೂ ಸೇವಿಸುವಂತಿಲ್ಲ. ಬೆಲ್ಲವನ್ನೂ ಸೇವಿಸುವಂತಿಲ್ಲ. ಜೊತೆಗೆ ಜೇನುತುಪ್ಪದ ಸೇವನೆ ಕೂಡ ಮಾಡಬಾರದು ಅಂತಾರೆ ವೈದ್ಯರು. ಡಾಕ್ಟರ್ ಈ ಬಗ್ಗೆ ಇನ್ನೂ ಏನೇನು ವಿವರಿಸಿದ್ದಾರೆ ಅನ್ನೋ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ..

