Spiritual Story: ಹಿಂದೂ ಧರ್ಮದಲ್ಲಿ ಹಲವಾರು ದೇವರು ದೇವತೆಗಳಿದ್ದಾರೆ. ಕೃಷ್ಣನಿಗೆ ಅಲಂಕಾರವೆಂದರೆ ಬಲು ಇಷ್ಟ. ಗಣಪತಿಗೆ ನೈವೇದ್ಯವೆಂದರೆ ಬಲು ಇಷ್ಟ, ಅದೇ ರೀತಿ ಶಿವನಿಗೆ ಭಕ್ತಿಯಿಂದ ನೀರೆರೆದರೆ ಸಾಕು, ಶಿವ ನಾವು ಕೇಳಿದ್ದನ್ನು ನೀಡುತ್ತಾನೆಂಬ ಮಾತಿದೆ. ಏಕೆಂದರೆ, ಶಿವ ಸರಳವಾದ ದೇವರು. ಅವನಿಗೆ ಆಡಂಬರದ ಅವಶ್ಯಕತೆ ಇಲ್ಲ. ಆದರೆ ನಿಮಗೆ ಶಿವನ ಕೃಪೆಗೆ ಪಾತ್ರರಾಗಬೇಕು ಅಂತಿದ್ದರೆ, ನೀವು ಸೋಮವಾರದ ದಿನ ಕೆಲ ಪದಾರ್ಥಗಳ ಸೇವನೆ ಮಾಡುವಂತಿಲ್ಲ. ಹಾಗಾಗಿ ಸೋಮವಾರ ನಾವು ಏನನ್ನು ಸೇವಿಸಬಾರದು..? ಏನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಸೋಮವಾರದ ದಿನ ನೀರನ್ನಷ್ಟೇ ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಉಪವಾಸ ಮಾಡುವವರು ಈ ನಿಯಮವನ್ನು ಅನುಸರಿಸಬೇಕು. ಉಪವಾಸ ಮಾಡುವುದಿದ್ದರೆ, ಮಾಂಸಾಹಾರ, ಮೊಟ್ಟೆ, ಮದ್ಯ ಇವ್ಯಾವುದನ್ನೂ ಸೇವಿಸಬಾರದು ಅಂತಾ ಎಲ್ಲರಿಗೂ ಗೊತ್ತು. ಆದರೆ ನೀವು ಉಪವಾಸವಿಲ್ಲದಿದ್ದರೂ, ಸೋಮವಾರದ ದಿನ ಮಾಂಸ, ಮೊಟ್ಟೆ ಸೇವನೆ ಮಾಡಬೇಡಿ.
ಇನ್ನು ,ಸೋಮವಾರದ ದಿನ ಉಪವಾಸ ಮಾಡುವವರು ಈರುಳ್ಳಿ. ಬೆಳ್ಳುಳ್ಳಿ, ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥ, ಸಕ್ಕರೆ, ಚಹಾ, ಕಾಫಿ, ಮಸಾಲೆ ಪದಾರ್ಥ ಇವ್ಯಾವುದನ್ನು ಸೇವಿಸಬಾರದು. ಕಟ್ಟು ನಿಟ್ಟಾಗಿ ಉಪವಾಸ ಮಾಡುವವರು ಸೋಮವಾರದ ದಿನ ಉಪ್ಪನ್ನು ಸಹ ಸೇವಿಸುವುದಿಲ್ಲ. ಏಕೆಂದರೆ, ಉಪ್ಪು ರುಚಿ ಕೊಡುವಂಥ ಪದಾರ್ಥ. ನಾವು ರುಚಿ ರುಚಿಯಾದ ಆಹಾರ ತಿಂದಾಗ ನಮಗೆ ಭಕ್ತಿ ಬರಲು ಸಾಧ್ಯವಿಲ್ಲ. ಹಾಗಾಗಿ ಸೋಮವಾರದ ದಿನ ಈ ಪದಾರ್ಥಗಳ ಸೇವನೆ ಮಾಡುವಂತಿಲ್ಲ.
ಕೆಲವರು ಸೋಮವಾರದ ದಿನ ಹಸಿರು, ಸೊಪ್ಪು, ತರಕಾರಿ ಕೂಡ ತಿನ್ನಲ್ಲಿಚ್ಛಿಸುವುದಿಲ್ಲ. ಏಕೆಂದರೆ, ಕೆಲವು ತರಕಾರಿ, ಎಲೆಗಳನ್ನು ಎಷ್ಟೇ ತೊಳೆದರೂ ಅದರಲ್ಲಿ ಕೀಟಾಣುಗಳು ಇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಸೊಪ್ಪು, ತರಕಾರಿ, ಹಾಲು, ಮೊಸರು, ಬೆಣ್ಣೆ, ತುಪ್ಪ, ಇವ್ಯಾವುದನ್ನೂ ಸೇವಿಸುವುದಿಲ್ಲ. ನುಗ್ಗೇಕಾಯಿ, ಪಪ್ಪಾಯಿ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ತಾಮಸಿಕ ಗುಣ ಬರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಸೋಮವಾರ ಉಪವಾಸವಿದ್ದಲ್ಲಿ, ಈ ತರಕಾರಿ, ಹಣ್ಣು ಕೂಡ ನಿಷಿದ್ಧವಾಗಿರುತ್ತದೆ.
ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..