Thursday, December 12, 2024

Latest Posts

ಜೀವನದಲ್ಲಿ ಅಪ್ಪಿ ತಪ್ಪಿಯೂ ಈ 5 ತಪ್ಪುಗಳನ್ನು ಮಾಡಬೇಡಿ..

- Advertisement -

ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ. ಹಾಗೆ ತಪ್ಪು ಮಾಡಿದಾಗ, ಅದನ್ನು ತಿದ್ದಿಕೊಂಡು ಹೋಗೋದು ಮನುಷ್ಯನ ಉತ್ತಮ ಗುಣ. ಒಂದು ಜೀವನ ಸುಂದರವಾಗಿ ರೂಪುಗೊಳ್ಳಬೇಕು ಎಂದಲ್ಲಿ, ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಹೋಗಬೇಕು. ಆದ್ರೆ ಕೆಲ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದಂತೆ. ಹಾಗಾದ್ರೆ ಎಂಥ 5 ತಪ್ಪುಗಳನ್ನು ನಾವು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..

ಮೊದಲನೇಯ ತಪ್ಪು ನೀವು ಯಾವುದಾದರೂ ಗುರಿ ಇರಿಸಿಕೊಂಡಿದ್ದರೆ, ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದಲ್ಲಿ, ಅದರ ಬಗ್ಗೆ ಡಂಗೂರ ಸಾರಬೇಡಿ. ಈ ತಪ್ಪನ್ನು ಹಲವರು ಮಾಡ್ತಾರೆ. ನೀವು ಏನನ್ನಾದರೂ ಸಾಧಿಸಬೇಕು ಎಂದಲ್ಲಿ, ಅದಕ್ಕೆ ಬೇಕಾದ ಪ್ರಯತ್ನ ಮಾಡಿ. ಅದನ್ನು ಬಿಟ್ಟು ನಾನು ಹೀಗೆ ಮಾಡಬೇಕು ಎಂದಿದ್ದೇನೆ ಎಂದು ನೀವು ಬೇರೆಯವರಲ್ಲಿ ಹೇಳಿದರೆ, ಅವರು ಅದನ್ನು ನೆನಪಿನಲ್ಲಿಡುತ್ತಾರೆ. ನೀವು ಆ ಕೆಲಸ ಮಾಡಲಿಲ್ಲವೆಂದಲ್ಲಿ, ಅದನ್ನೇ ಹಿಡಿದುಕೊಂಡು ನಿಮ್ಮನ್ನು ಅಣಕಿಸುತ್ತಾರೆ. ಹಾಗಾಗಿ ಏನಾದರೂ ಸಾಧಿಸುವ ಮುನ್ನವೇ ಡಂಗುರ ಸಾರಬೇಡಿ.

ಎರಡನೇಯ ತಪ್ಪು ?ಯಶಸ್ಸು ಸಾಧಿಸೋಕ್ಕೆ ಯಾವುದೇ ಶಾರ್ಟ್ ಕಟ್ ದಾರಿ ಹುಡುಕಬೇಡಿ. ಕಷ್ಟಪಟ್ಟೇ ಆ ಕೆಲಸವನ್ನು ಸಾಧಿಸಿ. ಆದ್ರೆ ನೀವೇನಾದ್ರೂ ಯಶಸ್ಸು ಸಾಧಿಸಲು ಶಾರ್ಟ್ ಕಟ್ ದಾರಿ ಹುಡುಕಿದ್ರೆ, ಎಷ್ಟು ಬೇಗ ಯಶಸ್ಸು ಸಾಧಿಸಿದ್ರೋ, ಅಷ್ಟೇ ಬೇಗ ನಷ್ಟ ಹೊಂದುತ್ತೀರಿ. ಉದಾಹರಣೆಗೆ ಹುಲ್ಲು ಕತ್ತರಿಸುವಾಗ ಕೆಲವರು ಮೇಲೆ ಮೇಲೆ ಹುಲ್ಲು ಕತ್ತರಿಸುತ್ತಾರೆ. ಇದರಿಂದ ಬೇಗ ಹುಲ್ಲು ಬೆಳೆಯುತ್ತದೆ. ಆದ್ರೆ ಬುಡದಿಂದಲೇ ಹುಲ್ಲನ್ನ ಕಿತ್ತರೆ, ಅದು ಬೆಳೆಯಲು ತುಂಬ ಸಮಯ ಬೇಕಾಗುತ್ತದೆ. ಹಾಗಾಗಿ ಯಶಸ್ಸನ್ನ ಕಷ್ಟ ಪಟ್ಟೇ ಸಾಧಿಸಿ.

ಮೂರನೇಯ ತಪ್ಪು ಬದಲಾವಣೆ ಜಗದ ನಿಯಮ ಅನ್ನೋದನ್ನ ಅರಿತುಕೊಳ್ಳಿ. ಕಾಲಕ್ಕೆ ತಕ್ಕಂತೆ ನೀವು ಬದಲಾಗಬೇಕು. ನಿಮ್ಮ ಗುಣಗಳಲ್ಲಿ ಅಭಿವೃದ್ಧಿ ಹೊಂದಬೇಕು. ಹಾಗಂತ, ನಿಮ್ಮವರನ್ನ ಕಡೆಗಣಿಸಬೇಕು. ಗುಣವನ್ನು ಬದಲಾಯಿಸಿಕೊಳ್ಳಬೇಕು ಅಂತಲ್ಲ. ಬದಲಾಗಿ ನಿಮ್ಮ ಯಶಸ್ಸಿಗೆ ಬೇಕಾದ ಹಾಗೆ ನಿಮ್ಮ ಉತ್ತಮ ಗುಣವನ್ನ ದ್ವಿಗುಣ ಮಾಡಿಕೊಳ್ಳಿ. ಉತ್ತಮ ಅಭ್ಯಾಸಗಳನ್ನ ರೂಢಿಸಿಕೊಳ್ಳಿ. ಪ್ರಪಂಚ ಜ್ಞಾನ ಹೆಚ್ಚಿಸಿಕೊಳ್ಳಿ. ಕಾಲಕ್ಕೆ ತಕ್ಕಂತೆ ಹಾವ ಭಾವ, ಉಡುಗೆ ತೊಡುಗೆಯನ್ನು ಉತ್ತಮ ಬದಲಾವಣೆ ಮಾಡಿಕೊಳ್ಳುವುದು ಕೂಡ ಅತ್ಯಗತ್ಯ.

ಬೆಳಗ್ಗಿನ ಈ 5 ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ನಾಲ್ಕನೇಯ ತಪ್ಪು ಯಾವುದೇ ಕೆಲಸ ಮಾಡುವ ಮೊದಲು ಯೋಚನೆ ಮಾಡಿ. ಉದಾಹರಣೆಗೆ ನೀವೊಂದು ಉದ್ಯಮ ಶುರು ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಅದಕ್ಕೆ ಬೇಕಾದಷ್ಟೇ ಬಂಡವಾಳವನ್ನು ನೀವು ಹಾಕಬೇಕು. ಅದನ್ನು ಬಿಟ್ಟು ಅದರಲ್ಲಿ ಲಾಭ ಬರುತ್ತದೆಯೋ ಇಲ್ಲವೋ ಅನ್ನುವುದನ್ನು ಅಂದಾಜು ಮಾಡದೇ, ಅದರ ಬಗ್ಗೆ ಯೋಚನೆ ಮಾಡದೇ, ಸಾಲ ಸೋಲ ಮಾಡಿ ಕೊನೆಗೆ ಜೀವಕ್ಕೆ ಕುತ್ತು ತಂದುಕೊಳ್ಳುವ ಪರಿಸ್ಥಿತಿ ತಂದಿಟ್ಟುಕೊಳ್ಳಬಾರದು.

ಐದನೇಯ ತಪ್ಪು, ನೀವಂದುಕೊಂಡ ಸಮಯದೊಳಗೆ ಯಶಸ್ಸು ಸಾಧಿಸಲು ಆಗಲಿಲ್ಲವೆಂದು ಕೈ ಚೆಲ್ಲಿ ಕುಳಿತುಕೊಳ್ಳಬೇಡಿ. ಯಾಕಂದ್ರೆ ಹಲವರು ನೀವು ನೆಲಕ್ಕುರುಳುವುದನ್ನು ನೋಡಲು ಕಾದು ಕುಳಿತಿರುತ್ತಾರೆ. ಹಾಗಾಗಿ ಛಲ ಬಿಡದೇ, ನೀವಂದುಕೊಂಡಿದ್ದನ್ನ ಸಾಧಿಸಿ.

- Advertisement -

Latest Posts

Don't Miss