Health Tips: ಬೆಳಗ್ಗಿನ ತಿಂಡಿ ಅಂದ್ರೆ, ಮನೆ ಕಟ್ಟುವಾಗ ನಾವು ಹಾಕುವ ಫೌಂಡೇಶನ್ ಇದ್ದ ಹಾಗೆ ಎನ್ನುತ್ತಾರೆ. ಏಕೆಂದರೆ, ಮನೆಯ ತಳಭಾಗ ಗಟ್ಟಿಯಾಗಿದ್ದಾಗ, ಮನೆ ಗಟ್ಟಿಯಾಗಿರುತ್ತದೆ. ಅದೇ ರೀತಿ ಬೆಳಿಗ್ಗಿನ ತಿಂಡಿ ಸರಿಯಾಗಿ ತಿಂದರೆ, ಅದು ಇಡೀ ದಿನ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ. ಆದರೆ ಕೆಲವರು, ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಿ, ಬರೀ ಡ್ರೈಫ್ರೂಟ್ಸ್ ತಿನ್ನುತ್ತಾರೆ. ಹಾಗಾದ್ರೆ ಇದು ಸರಿನಾ, ತಪ್ಪಾ ಅನ್ನೋ ಬಗ್ಗೆ ವೈದ್ಯೆಯಾದ ಹೇಮಾ ಅವರು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ನಾವು ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಿ, ಬರೀ ಡ್ರೈಫ್ರೂಟ್ಸ್ ತಿನ್ನುವುದು ತಪ್ಪು ಅಂತಾರೆ ವೈದ್ಯರು. ಬೆಳಿಗ್ಗೆ ನಾವು ಆರೋಗ್ಯಕರ ತಿಂಡಿಯನ್ನು ತಿನ್ನುವುದರಿಂದ 60ರಿಂದ 70 ಭಾಗದಷ್ಟು, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಬಾರದು ಅಂತಾರೆ, ವೈದ್ಯರು.
ಇನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾತ್ರಿ ನೆನೆಸಿಟ್ಟ ಡ್ರೈಫ್ರೂಟ್ಸ್ ತಿನ್ನುವುದು ಉತ್ತಮ. ಇದರಿಂದ ನಮ್ಮ ಆರೋಗ್ಯಕ್ಕೆ ಬೇಕಾದಷ್ಟು, ಲಾಭಗಳು ಸಿಗುತ್ತದೆ. ಆದರೆ ಬರೀ ಡ್ರೈಫ್ರೂಟ್ಸ್ ತಿನ್ನಬಾರದು. ಅರ್ಧ ಗಂಟೆ ಅಥವಾ ಒಂದು ಗಂಟೆ ಬಿಟ್ಟು, ನಾವು ತಿಂಡಿಯ ಸೇವನೆ ಮಾಡಲೇಬೇಕು. ಇನ್ನು ತಿಂಡಿಯನ್ನು ಸ್ಕಿಪ್ ಮಾಡಿ, ಬರೀ ಡ್ರೈಫ್ರೂಟ್ಸ್ ತಿಂದರೆ, ನಮ್ಮ ದೇಹಕ್ಕೆ ಬೇಕಾದ, ಆರೋಗ್ಯ ಲಾಭ ಸಿಗುವುದಿಲ್ಲ. ಅದರ ಅವಶ್ಯಕತೆಯೇ ಇಲ್ಲವೆನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..