Health Tips: ಮೊದಲಿನಿಂದಲೂ ಹಲವು ಪೋಷಕರು ಮಕ್ಕಳು ಹಸಿವು ಅಂತಾ ಬಂದಾಗ, ಹಾಲು ಬಿಸ್ಕೇಟ್ ನೀಡುತ್ತಿದ್ದಾರೆ. ಯಾಕಂದ್ರೆ, ಹಾಲು ಬಿಸ್ಕೇಟ್ ಸೇವಿಸಿದರೆ, ಮಕ್ಕಳಿಗೆ ಹೊಟ್ಟೆ ತುಂಬಿ ಬಿಡುತ್ತದೆ. ಇನ್ನು ಕೆಲ ಗಂಟೆ ಮಕ್ಕಳು ತಮ್ಮಷ್ಟಕ್ಕೆ ತಾವು ಆಡಿಕೊಂಡಿರುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಕುಂದು ತರುತ್ತದೆ. ಹಾಗಾದ್ರೆ ಮಕ್ಕಳಿಗೆ ಏಕೆ ಹಾಲು ಬಿಸ್ಕೇಟ್ ನೀಡಬಾರದು ಅಂತಾ ತಿಳಿಯೋಣ ಬನ್ನಿ..
ಹಾಲು ಆರೋಗ್ಯಕರ ಪೇಯ. ಇದನ್ನು ಕುಡಿದರೆ, ಶಕ್ತಿ ಬರುತ್ತದೆ. ಹೊಟ್ಟೆ ತುಂಬುತ್ತದೆ ಎಂಬುದು ನಿಜ. ಆದರೆ ಇದರೊಂದಿಗೆ ಬಿಸ್ಕೇಟ್, ಬ್ರೆಡ್, ರಸ್ಕ್ ಕೊಟ್ಟರೆ, ಹಾಲಿನಲ್ಲಿರುವ ಪೋಷಕಾಂಶವೂ ಹಾಳಾಗು ಹೋಗುತ್ತದೆ. ಇದರ ಸೇವನೆಯಿಂದ ಮಕ್ಕಳ ಬಾಯಿ ರುಚಿ ಹೆಚ್ಚುತ್ತದೆ. ಹೊಟ್ಟೆ ತುಂಬುತ್ತದೆ ಅಷ್ಟೇ. ಆದರೆ ಮಕ್ಕಳಿಗೆ ಯಾವ ಆರೋಗ್ಯಕರ ಲಾಭವೂ ಸಿಕ್ಕುವುದಿಲ್ಲ.
ಏಕೆಂದರೆ, ಬಿಸ್ಕೇಟ್, ಬ್ರೆಡ್, ರಸ್ಕ್‌ಗಳಲ್ಲಿ ಮೈದಾ, ಸಕ್ಕರೆ, ಜಿಡ್ಡಿನಂಶವನ್ನು ಬೆರೆಸಿರುತ್ತಾರೆ. ಮತ್ತು ಇವುಗಳಲ್ಲಿ ಯಾವುದೇ ಆರೋಗ್ಯಕರ ಗುಣವಿರುವುದಿಲ್ಲ. ಮಕ್ಕಳನ್ನು ಮತ್ತೆ ಮತ್ತೆ ತಿನ್ನುವಂತೆ ಅಡಿಕ್ಟ್ ಮಾಡುತ್ತದೆ. ಮತ್ತು ಮಕ್ಕಳ ದೇಹದ ತೂಕ ಹೆಚ್ಚಾಗಿ, ಮಕ್ಕಳು ಸೋಂಬೇರಿಯಾಗುವಂತೆ ಮಾಡುತ್ತದೆ. ಹಾಗಾಗಿ ಇವುಗಳನ್ನು ಹೆಚ್ಚಾಗಿ ಸೇವಿಸುವ ಮಕ್ಕಳು ಚೈತನ್ಯದಾಯಕರಾಗಿ, ಅಥವಾ ಚುರುಕಾಗಿ ಇರುವುದಿಲ್ಲ.
ಎಷ್ಟೋ ಜನ ಹುಟ್ಟಿದಾಗಿನಿಂದ, ಮುದುಕರಾಗುವವರೆಗೂ ಪ್ರತಿದಿನ ಹಾಲು ಬಿಸ್ಟೇಟ್ ತಿನ್ನುವವರಿದ್ದಾರೆ. ಏಕೆಂದರೆ, ಇದೊಂಥರ ರೋಗವಾಗಿ ಬಿಟ್ಟಿದೆ. ಬಿಡಲಾಗದ ಚಟವಾಗಿ ಬಿಟ್ಟಿದೆ. ಹಾಗಾಗಿ ಮಕ್ಕಳಿಗೆ ಪ್ರತಿದಿನ ತಿನ್ನಲು ಹಾಲು ಬಿಸ್ಕೇಟ್ ಕೊಡಬೇಡಿ. ಬದಲಾಗಿ ನೀವೇ ಮನೆಯಲ್ಲಿ ಏನಾದರೂ ರುಚಿಕರ ಸ್ನ್ಯಾಕ್ಸ್ ತಯಾರಿಸಿ, ಕೊಡಿ.