Spiritual: ಹಿಂದೂವಾಗಿ ಹುಟ್ಟಿದವರು ಜೀವನದಲ್ಲಿ ಒಮ್ಮೆಯಾದರೂ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ, ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಈಗ ರೈಲ್ವೆ, ಬಸ್, ಫ್ಲೈಟ್ ವ್ಯವಸ್ಥೆ ಇದೆ. ಆದರೆ ಮೊದಲೆಲ್ಲ ವಯಸ್ಸಾದವರು ಕಾಲ್ನಡಿಗೆಯಲ್ಲೇ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡುತ್ತಿದ್ದರು. ಹಾಗೆ ಹೋದವರಲ್ಲಿ ಕೆಲವೇ ಕೆಲವರು ಬದುಕಿ, ಮರಳಿ ಮನೆಗೆ ಬರುತ್ತಿದ್ದರು. ಇನ್ನುಳಿದವರು ದೇವರ ದರ್ಶನ ಮಾಡಲಾಗದೇ, ಮಾರ್ಗಮಧ್ಯೆ ಸಾವನ್ನಪ್ಪುತ್ತಿದ್ದರು. ಪುಣ್ಯವಂತರು ಕಾಶಿ ವಿಶ್ವನಾಥನ ದರ್ಶನ ಮಾಡಿ ಮರಣ ಹೊಂದುತ್ತಿದ್ದರು. ಇಂದು ನಾವು ಕಾಶಿ ವಿಶ್ವನಾಥ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನವೂ ಒಂದು. ಉತ್ತರಪ್ರದೇಶದ, ವಾರಣಾಸಿಯ ಗಂಗೆಯ ತಟದಲ್ಲಿರುವ ವಿಶ್ವನಾಥನ ದರ್ಶನ ಮಾಡಿದರೆ, ಶಿವಲೋಕ ಪ್ರಾಪ್ತಿಯಾಗುತ್ತದೆ. ಕೈಲಾಸ ಸೇರುತ್ತೇವೆ ಎಂಬ ನಂಬಿಕೆ ಇದೆ. ಅಲ್ಲದೇ, ಗಂಗೆಯಲ್ಲಿ ಮಿಂದು, ಕಾಶಿ ವಿಶ್ವನಾಥನ ದರ್ಶನ ಮಾಡಿದ್ದಲ್ಲಿ, ನಾವು ಜೀವನದಲ್ಲಿ ಮಾಡಿದ ಸಕಲ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆ ಇದೆ. ಗಂಗಾ ನದಿಯಲ್ಲಿ ಹೆಣಗಳ ಬೂದಿ ಹಾಕಲಾಗುತ್ತದೆ. ಕೋಟಿ ಕೋಟಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ. ಆದರೂ ಕೂಡ ಗಂಗೆ ಮಲೀನವಾಗುವುದಿಲ್ಲ.
ಇನ್ನು ಇಲ್ಲಿ ನೆಲೆನಿಂತಿರುವ ಶಿವನಿಗೆ ವಿಶ್ವನಾಥನೆಂದು ಕರೆಯಲು ಕಾರಣ, ಈತ ವಿಶ್ವಕ್ಕೆ ನಾಥನೆಂದು. ಅಂದರೆ ಇಡೀ ಬ್ರಹ್ಮಾಂಡಕ್ಕೆ ನಾಯಕನಾಗಿರುವನು ಎಂದರ್ಥ. ಈ ಪ್ರಪಂಚದಲ್ಲಿ ಯಾವುದೇ ಜೀವಿ ಹುಟ್ಟಲು ಸಾಯಲು ಶಿವನ ಅನುಮತಿ ಬೇಕೆಂಬ ನಂಬಿಕೆ ಇದೆ. ಹಾಗಾಗಿ ಶಿವನಿಗೆ ವಿಶ್ವನಾಥನೆಂದು ಕರೆಯಲಾಗುತ್ತದೆ. ಇನ್ನು ಕಾಶಿಯಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ, ಮೆರವಣಿಗೆ ನಡೆಯುತ್ತದೆ. ಇಲ್ಲಿ ಶಿವನ ಪರಮ ಭಕ್ತರು, ಸ್ಮಶಾನವಾಸಿಗಳು ಆದ ನಾಗಾಸಾಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಶಿ ವಿಶ್ವನಾಥನ ದರ್ಶನಕ್ಕೆ ಬರುತ್ತಾರೆ.
Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?