Health Tips: ಚಹಾ ಎಂದರೆ, ಭಾರತೀಯರಿಗೆ ಇಷ್ಟವಾದ ಪೇಯ. ಅಪರೂಪಕ್ಕೆ ಒಂದಿಷ್ಟು ಜನ ಚಹಾ ಕುಡಿಯುವುದಿಲ್ಲ. ಅದನ್ನು ಬಿಟ್ಟರೆ, ಹಲವರಿಗೆ ದಿನಕ್ಕೆ ಎರಡು ಹೊತ್ತು ಚಹಾ ಕುಡಿಯಲೇಬೇಕು. ಇನ್ನು ಕೆಲವರಿಗೆ ದಿನಕ್ಕೆ 5 ಸಲವಾದ್ರೂ ಚಹಾದ ಸೇವನೆ ಮಾಡಲೇಬೇಕು. ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಕೆಟ್ಟದ್ದು. ಹಾಗಾದ್ರೆ ಚಹಾ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಎಂಥೆಂಥ ಕೆಟ್ಟ ಪರಿಣಾಮಗಳಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಅಗತ್ಯಕ್ಕಿಂತ ಹೆಚ್ಚು ಚಹಾ ಸೇವಿಸುವುದರಿಂದ, ದೇಹದಲ್ಲಿರುವ ಐರನ್ ಅಂಶವನ್ನು ಆ ಚಹಾ ಹೀರಿಕೊಳ್ಳಲು ಶುರು ಮಾಡುತ್ತದೆ. ಮತ್ತು ದೇಹದಿಂದ ಹೊರಹಾಕುತ್ತದೆ. ಆಗ ಮನುಷ್ಯನ ದೇಹದಲ್ಲಿ ಐರನ್ ಅಂಶ ಕಡಿಮೆಯಾಗುತ್ತದೆ. ಮನುಷ್ಯ ಅಶಕ್ತತೆಗೆ ಒಳಗಾಗುತ್ತಾನೆ. ಹೀಗಾಗಿ ಚಹಾವನ್ನು ಸ್ಲೋ ಪಾಯ್ಸನ್ ಎಂದು ಕರೆಯಲಾಗುತ್ತದೆ.
ಅಲ್ಲದೇ, ಹೆಚ್ಚು ಚಹಾ ಸೇವನೆ ಮಾಡುವವರಿಗೆ ಅತೀಯಾದ ಹೆದರಿಕೆ ಕಾಡುತ್ತದೆ. ಅವರಲ್ಲಿರುವ ಧೈರ್ಯ ಕಡಿಮೆಯಾಗುತ್ತದೆ. ಊಟವಾದ ತಕ್ಷಣ ಚಹಾ ಸೇವನೆ ಮಾಡಬಾರದು. ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಉತ್ತಮ ಪೋಷಕಾಂಶ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ನಿಮಗೆ ಚಹಾ ಕುಡಿಯಲೇಬೇಕು ಎಂದರೆ, ಊಟವಾಗಿ 4 ಗಂಟೆ ಬಳಿಕ ಮಿತವಾಗಿ ಚಹಾ ಸೇವನೆ ಮಾಡಬಹುದು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಚಹಾ ಸೇವನೆ ಮಾಡಲೇಬೇಡಿ. ಇದರಿಂದ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಬರುತ್ತದೆ. ಪಿತ್ತದ ಸಮಸ್ಯೆ ಹೆಚ್ಚಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಅಲ್ಲದೇ, ರಾತ್ರಿ ಚಹಾದ ಸೇವನೆ ಮಾಡಿದ್ರೆ, ನಿದ್ರಾಹೀನತೆ ಸಮಸ್ಯೆ ಬರುತ್ತದೆ. ನಿಮಗೆ ಚಹಾ ಕುಡಿಯಲೇಬೇಕು ಎಂದಲ್ಲಿ, ನೀವು ಹರ್ಬಲ್ ಚಹಾ ತಯಾರಿಸಿ ಸೇವಿಸಬಹುದು.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..