Health Tips: ಗರ್ಭಿಣಿಯಾಗಿದ್ದಾಗ, ರುಚಿ ರುಚಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಕೆಲವರಿಗೆ ಸಿಹಿ ತಿಂಡಿ ಹೆಚ್ಚು ತಿನ್ನಬೇಕು ಎನ್ನಿಸಿದರೆ, ಇನ್ನು ಕೆಲವರಿಗೆ ಉಪ್ಪು, ಖಾರ , ಹುಳಿ ತಿನ್ನಬೇಕು ಎನ್ನಿಸುತ್ತದೆ. ಎಂಥ ಸಿಹಿ ಪದಾರ್ಥ ಕಂಡರೂ ಅದನ್ನು ತಿನ್ನಬೇಕು ಎನ್ನಿಸುತ್ತದೆ. ಆದರೆ ನಾಲಿಗೆಗೆ ರುಚಿ ಕೊಡುವ ಈ ಸಿಹಿ ತಿಂಡಿ, ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯ ನಷ್ಟ ಮಾಡಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗರ್ಭಿಣಿಯಾಗಿದ್ದಾಗ, ಶುಗರ್ ಮತ್ತು ಬಿಪಿ ಚೆಕ್ ಮಾಡಲಾಗುತ್ತದೆ. ನಿಮಗೆ ಗರ್ಭಿಣಿಯಾಗುವುದಕ್ಕಿಂತ ಮುನ್ನ ಶುಗರ್ ಇದ್ದಲ್ಲಿ, ನೀವು ಸಕ್ಕರೆಯನ್ನು ಪೂರ್ತಿಯಾಗಿ ತ್ಯಜಿಸಲೇಬೇಕು. ಅಥವಾ ನೀವು ಗರ್ಭಾವಸ್ಥೆಯಲ್ಲಿದ್ದಾಗ, ಸಕ್ಕರೆ ಪ್ರಮಾಣ ಹೆಚ್ಚಿದ್ದಲ್ಲೂ ಸಕ್ಕರೆ ಹಾಕಿ ಮಾಡಿದ ತಿಂಡಿ ತಿನ್ನಬಾರದು. ಇನ್ನು ಶುಗರ್ ಬರುತ್ತದೆ ಎಂಬ ಕಾರಣಕ್ಕೆ ಮಾತ್ರ ಸಕ್ಕರೆ ತಿನ್ನುವುದನ್ನ ಕಂಟ್ರೋಲ್ ಮಾಡುವುದಲ್ಲ. ಬದಲಾಗಿ ಇದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ತರಹೇವಾರಿ ರೋಗಗಳು ಬರುತ್ತದೆ. ಹಾಗಾಗಿ ಸಕ್ಕರೆ ಸೇವನೆ ಕಡಿಮೆ ಮಾಡಬೇಕು.
ಆದರೆ ನೀವೇನಾದರೂ ನಿರ್ಲಕ್ಷ್ಯ ಮಾಡಿ ಸಕ್ಕರೆ ಸೇವನೆ ಹೆಚ್ಚು ಮಾಡಿದ್ದಲ್ಲಿ, ಹೆರಿಗೆಯ ಸಂದರ್ಭದಲ್ಲಿ ನಿಮಗೂ ನಿಮ್ಮ ಮಗುವಿಗೂ ಆರೋಗ್ಯ ಸಮಸ್ಯೆ ಬರುತ್ತದೆ. ಗರ್ಭಿಣಿಯಾಗಿದ್ದಾಗ, ಹೆಚ್ಚು ವಾಂತಿಯಾಗುತ್ತದೆ. ದೇಹದ ತೂಕ ಅತೀಯಾಗಿ ಹೆಚ್ಚಾಗುತ್ತದೆ. ಇದರಿಂದ ನಾರ್ಮಲ್ ಹೆರಿಗೆಯಾಗಲು ಸಾಧ್ಯವಾಗುವುದಿಲ್ಲ. ಸಿಸರಿನ್ ಮಾಡಲೇಬೇಕಾಗುತ್ತದೆ. ಮಗುವಿನ ತೂಕ ಅಗತ್ಯಕ್ಕಿಂತ ಹೆಚ್ಚಾಗುತ್ತದೆ. ಹಾಗಾಗಿ ಸಕ್ಕರೆ ಸೇವನೆ ಮಿತವಾಗಿರಬೇಕು.
ಹಾಗೆಂದಲ್ಲಿ ಸಿಹಿ ಪದಾರ್ಥ ತಿನ್ನಲೇಬಾರದು ಎಂದಲ್ಲ. ಬೆಲ್ಲ ಬಳಸಿದ ಪದಾರ್ಥವನ್ನು ತಿನ್ನಿ. ಆರೋಗ್ಯಕರ ಲಾಡು ತಿನ್ನಿ. ಹೀಗೆ ಸಿಹಿಯಾದರೂ ಅದು ನಿಮ್ಮ ಆರೋಗ್ಯಕ್ಕೆ ಹಾನಿಮಾಡದಂಥ ಸ್ವೀಟ್ಸ್ ತಿನ್ನಿ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..