ನವಿಲುಕೋಸು ಆರೋಗ್ಯಕ್ಕೆಷ್ಟು ಉತ್ತಮ ಗೊತ್ತಾ..? ಇಲ್ಲಿದೆ ನೋಡಿ ಇದರ ಆರೋಗ್ಯ ಲಾಭಗಳು..

Health Tips: ನವಿಲುಕೋಸನ್ನು ಬಳಸುವವರ ಸಂಖ್ಯೆ ತುಂಬಾ ಕಡಿಮೆ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಬಳಸುವವರಿದ್ದಾರೆ. ಇನ್ನು ಕೆಲವರು ನವಿಲುಕೋಸು ಅಂದ್ರೆ, ಯಾವ ತರಕಾರಿ, ಅದರ ರುಚಿ ಹೇಗಿರುತ್ತೆ ಅಂತಾನೇ ಗೊತ್ತಿರುವುದಿಲ್ಲ. ಆದರೆ ನವಿಲುಕೋಸಿನ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಇಂದು ನಾವು ನವಿಲುಕೋಸಿನ ಸೇವನೆಯಿಂದ ಆರೋಗ್ಯಕ್ಕೆ ಏನೇನು ಲಾಭವಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ನವಿಲುಕೋಸಿನ ಸೇವನೆಯಿಂದ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ನವಿಲುಕೋಸಿನಲ್ಲಿ ನಾರಿನಂಶ ಹೆಚ್ಚಾಗಿರುವ ಕಾರಣ, ಇದು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುವಲ್ಲಿ ಸಹಕಾರಿಯಾಗಿದೆ. ಈ ಮೂಲಕ ನಿಮ್ಮ ದೇಹದ ತೂಕ ಇಳಿಸುವಲ್ಲಿ ಇದು ಸಹಕಾರಿಯಾಗುತ್ತದೆ. ನವಿಲುಕೋಸಿನ ನಿಯಮಿತ ಸೇವನೆಯಿಂದ ಬೊಜ್ಜು ಬರುವುದನ್ನು ತಡೆಯಬಹುದು.

ಹೃದಯದ ಆರೋಗ್ಯ ಕಾಪಾಡಲು ನವಿಲುಕೋಸಿನ ಪದಾರ್ಥದ ಸೇವನೆ ಮಾಡಬೇಕು. ರಕ್ತನಾಳಗಳನ್ನು ಕ್ಲೀನ್ ಮಾಡಿ, ಹೃದಯ ಬಡಿತ ಸರಿಯಾಗಿ ಇರಿಸಲು ನವಿಲುಕೋಸು ಸಹಾಯ ಮಾಡುತ್ತದೆ. ಈ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ನೀವು ನವಿಲುಕೋಸಿನ ಸಾಂಬಾರ್ ಮಾಡುತ್ತಿದ್ದಲ್ಲಿ, ಅದಕ್ಕೆ ಹೆಚ್ಚು ಮಸಾಲೆ ಹಾಕದೇ, ಸಾಂಬಾರ್ ಮಾಡಿ. ಮತ್ತು ತುಪ್ಪವನ್ನು ಬಳಸಿ. ಅಥವಾ ಬರೀ ನವಿಲುಕೋಸನ್ನು ಬೇಯಿಸಿ, ಸೇವಿಸಬಹುದು. ನಿಮಗೆ ಪದೇ ಪದೇ ಕೆಮ್ಮು ಬರುತ್ತಿದ್ದರೆ, ನವಿಲು ಕೋಸಿನ ಸೇವನೆ ಮಾಡಿ. ಇದರಿಂದ ಕೆಮ್ಮು ಕಡಿಮೆಯಾಗುತ್ತದೆ.

ವಯಸ್ಸಾಗುತ್ತ ಕೀಲು ನೋವು ಬರುತ್ತದೆ. ಅಂಥವರು ನವಿಲುಕೋಸು ಸೇವಿಸಿದರೆ, ಕೀಲು ನೋವು ಕಡಿಮೆಯಾಗುತ್ತದೆ. ಏಕೆಂದರೆ, ಇದರಲ್ಲಿ ಕ್ಯಾಲ್ಶಿಯಂ ಅಂಶ ಹೆಚ್ಚಾಗಿದ್ದು, ಇದು ಮೂಳೆಯನ್ನು ಗಟ್ಟಿಗೊಳಿಸುತ್ತದೆ. ದೇಹದಲ್ಲಿ ಶಕ್ತಿ ಇಲ್ಲದಿದ್ದವರು, ನವಿಲುಕೋಸಿನ ಪದಾರ್ಥ ಸೇವನೆ ಮಾಡಿದ್ದಲ್ಲಿ, ದೇಹಕ್ಕೆ ಶಕ್ತಿ ಸಿಗುತ್ತದೆ. ಇನ್ನು ನಿಮಗೆ ನವಿಲುಕೋಸಿನ ಸೇವನೆ ಮಾಡಿದ್ದಲ್ಲಿ, ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.

ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

About The Author