ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ತಿಂದರೆ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಕಾಡು ನೆಲ್ಲಿಕಾಯಿ ರುಚಿಯಾಗಿರುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.

ಮೊದಲ ಲಾಭವೆಂದರೆ, ಕಾಡು ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜ್ವರ, ಕೆಮ್ಮು, ನೆಗಡಿ ಬರುವುದಿಲ್ಲ. ಕೆಲವೊಮ್ಮೆ ಪದೇ ಪದೇ ಜ್ವರ ಬರುವವರಿಗೆ ವೈದ್ಯರು ವಿಟಾಮಿನ್ ಸಿ ಮಾತ್ರೆ ನೀಡುತ್ತಾರೆ. ಆದರೆ ನೀವು ಮೊದಲೇ ಪ್ರತಿದಿನ ಒಂದು ಕಾಡು ನೆಲ್ಲಿಕಾಯಿ ಸೇವಿಸುವುದರಿಂದ, ನಿಮಗೆ ಪದೇ ಪದೇ ಜ್ವರ, ಕೆಮ್ಮು, ನೆಗಡಿ ಬರುವುದಿಲ್ಲ.

ಎರಡನೇಯ ಲಾಭವೆಂದರೆ, ಕಾಡು ನೆಲ್ಲಿಕಾಯಿ ಸೇವನೆಯಿಂದ, ಕಣ್ಣಿನ ಆರೋಗ್ಯ ಉತ್ತಮವಾಗುತ್ತದೆ. ನಿಮಗೆ ಹೆಚ್ಚು ವಯಸ್ಸಾಗುವವರೆಗೂ ಕನ್ನಡಕ ಬರಬಾರದು ಅಂದ್ರೆ, ನೀವು ಪ್ರತಿದಿನ ಒಂದು ನೆಲ್ಲಿಕಾಯಿ ಸೇವನೆ ಮಾಡಬೇಕು. ಅದರಲ್ಲೂ ಇಂದಿನ ಕಾಲದಲ್ಲಿ ಕಂಪ್ಯೂಟರ್‌, ಮೊಬೈಲ್ ಬಳಕೆ ಹೆಚ್ಚಾಗಿರುವ ಕಾರಣಕ್ಕೆ, ನಾವು ನೆಲ್ಲಿಕಾಯಿ ಸೇವನೆ ಮಾಡುವುದು ತುಂಬಾ ಮುಖ್ಯವಾಗಿದೆ.

ಮೂರನೇಯದಾಗಿ ನಮ್ಮ ಎಲುಬನ್ನು ಗಟ್ಟಿಗೊಳಿಸಲು ನೆಲ್ಲಿಕಾಯಿ ಸಹಕಾರಿಯಾಗಿದೆ. ಹಾಗಾಗಿಯೇ ಅಪಘಾತವಾದಾಗ ಮತ್ತು ಗರ್ಭಿಣಿಯರಿಗೆ ನಾರ್ಮಲ್ ಹೆರಿಗೆಗೆ ರೆಡಿಯಾಗಲು ನೆಲ್ಲಿಕಾಯಿ ನೀಡಲಾಗುತ್ತದೆ. ಅಪಘಾತವಾಗಿ ಮೂಳೆ ಮುರಿದಾಗಲೂ, ಅವರ ಕೈ ಕಾಲು ಗಟ್ಟಿಯಾಗಲಿ, ಮೂಳೆಗಳು ಕೂಡಲಿ ಎಂದು ನೆಲ್ಲಿಕಾಯಿ ಸೇವಿಸಲು ನೀಡಲಾಗುತ್ತದೆ.

ಅಲ್ಲದೇ ಪ್ರತಿದಿನ ಒಂದು ನೆಲ್ಲಿಕಾಯಿ ಸೇವನೆಯಿಂದ ನಿಮ್ಮ ದೇಹದ ತೂಕ ಸರಿಯಾಗಿ ಇರುತ್ತದೆ. ದಪ್ಪವಾಗಿರುವವರು ಇದನ್ನು ಸೇವಿಸಿದರೆ, ಅವರ ತೂಕ ಇಳಿಯುತ್ತದೆ. ಪದೇ ಪದೇ ತಿನ್ನುವ ಅಭ್ಯಾಸವನ್ನು ಇದು ತೊಡೆದು ಹಾಕುತ್ತದೆ. ಹಾಗಾಗಿಯೇ ನೆಲ್ಲಿಕಾಯಿ ಸೇವನೆಯಿಂದ ದೇಹದ ತೂಕವೂ ಇಳಿಯುತ್ತದೆ.

ಮಧುಮೇಹಿಗಳು ಈ ಸೊಪ್ಪು, ತರಕಾರಿಗಳನ್ನು ತಿನ್ನಲೇಬಾರದು..

ಚಹಾ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಗೊತ್ತಾ..?

ಸ್ಪಟಿಕದಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆ ಗೊತ್ತಾ..?

About The Author