Health Tips: ಕಣ್ಣಿನ ಸಮಸ್ಯೆ ಹೇಗೆ ಬರುತ್ತದೆ. ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ನಾವು ಏನು ತಿನ್ನಬೇಕು. ಆರೋಗ್ಯಕರವಾಗಿ ಕಣ್ಣನ್ನು ಕಾಪಾಡಿಕೊಳ್ಳುವುದು ಹೇಗೆ..? ಕನ್ನಡಕ ಆರಿಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ತಾಯಿಯಿಂದಲೂ ಮಗುವಿಗೆ ಕಣ್ಣಿನ ಸಮಸ್ಯೆ ಬರಬಹುದು ಎಂಬ ಬಗ್ಗೆ ವಿವರಿಸಲಿದ್ದೇವೆ.
ಕಣ್ಣಿನ ಸಮಸ್ಯೆ ಅನ್ನೋದು ವಯಸ್ಸಿನ ಖಾಯಿಲೆ. ನಮಗೆ ಹೆಚ್ಚು ವಯಸ್ಸಾಗುತ್ತಿದ್ದಂತೆ ಕಣ್ಣು ಮಂಜು ಮಂಜಾಗಲು ಶುರುವಾಗುತ್ತದೆ. ಕಣ್ಣಿನ ಮೇಲೆ ಪೊರೆ ಬರಲು ಶುರುವಾಗುತ್ತದೆ. ಪೂರ್ತಿ ಪೊರೆ ಬಂದರೆ, ಕಣ್ಣು ಕಳೆದುಕೊಂಡೆವು ಎಂದರ್ಥ. ಹಾಗಾಗಿ ಉತ್ತಮ ಆಹಾರಗಳನ್ನು ಸೇವಿಸಿ, ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಕಡಿಮೆ ಮಾಡಿದರೆ, ಇಂಥ ಸಮಸ್ಯೆಗಳು ಕಡಿಮೆಯಾಗುತ್ತದೆ.
ಇನ್ನು ತಾಯಿ ಮಾಡುವ ಕೆಲ ತಪ್ಪುಗಳು, ಆಕೆಯ ಮಗುವಿನ ಕಣ್ಣಿನ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿದ್ದಾಗ, ತಾಯಿಯಾದವಳು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಮಗುವಿನ ಉತ್ತಮ ಬೆಳವಣಿಗೆಗೆ ಬೇಕಾದ ಆಹಾರಗಳನ್ನು ತೆಗೆದುಕೊಳ್ಳಬೇಕು. ತನಗೆ ಮತ್ತು ತನ್ನ ಮಗುವಿಗೆ ಬೇಕಾದ, ಎಲ್ಲ ಪೋಷಕಾಂಶಗಳು ದೊರಕುವಂಥ ಆಹಾರವನ್ನು ಆಕೆ ತಿನ್ನಬೇಕು.
ಆದರೆ ಈ ಸಮಯದಲ್ಲಿ ತಾಯಿಯಾದವಳು ಉತ್ತಮ , ಆರೋಗ್ಯಕರ ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ, ಮುಂದೆ ಮಗುವಿನ ಆರೋಗ್ಯ ಹಾಳಾಗುತ್ತದೆ. ಅದೇ ರೀತಿ ವಿಟಾಮಿನ್ ಎ ಕೊರತೆಯಾದಾಗ, ಮಗುವಿಗೆ ಕಣ್ಣಿನ ಸಮಸ್ಯೆ ಬೇಗ ಬರುತ್ತದೆ. ಅವನ ಕಣ್ಣು ಬಾಲ್ಯದಿಂದಲೇ ತೊಂದರೆಗೆ ಈಡಾಗುತ್ತದೆ. ಹೀಗಾಗಬಾರದು ಅಂದ್ರೆ, ತಾಯಿಯಾದವಳು ವಿಟಾಮಿನ್ ಎ ಸಿಗುವ ಆಹಾರ, ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸಬೇಕು.
ಇಷ್ಟೇ ಅಲ್ಲದೇ, ಮಗು ಬೆಳೆಯುವಾಗ, ಅದಕ್ಕೆ ಬೇಕಾದ ಪೋಷಕಾಂಶಗಳು ಸಿಗುವಂಥ ಆಹಾರ ನೀಡಬೇಕು. ರಾಗಿ, ಜೋಳ, ಸಿರಿ ಧಾನ್ಯ, ಹಣ್ಣು, ತರಕಾರಿ, ಹಾಲು, ತುಪ್ಪ, ಮೊಸರು, ಮಜ್ಜಿಗೆ, ಎಳನೀರು, ಮೊಳಕೆ ಕಾಳು, ಡ್ರೈಫ್ರೂಟ್ಸ್, ನಟ್ಸ್ ಹೀಗೆ ಇಂಥ ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ತಿನ್ನಲು ನೀಡಬೇಕು. ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..