Health Tips: ಕಿಡ್ನಿಯಲ್ಲಿ ಕಲ್ಲಾಗುವ ಬಗ್ಗೆ ಹಲವರಿಗೆ ಮಾಹಿತಿ ಇರುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದರೆ, ಹೇಗೆ ಚಿಕಿತ್ಸೆ ಕೊಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಿಡ್ನಿಯಲ್ಲಿ ಕಲ್ಲಾಗಿದ್ದು, ಕೆಲ ದಿನಗಳಲ್ಲೇ ಗೊತ್ತಾದರೆ, ಬರೀ ಮಾತ್ರೆಯಿಂದಲೇ, ಅದನ್ನು ತೆಗೆದು ಹಾಕಬಹುದು. ಆದರೆ ಹಲವು ದಿನಗಳಾದ ಮೇಲೆ ಗೊತ್ತಾದರೆ, ಆಪರೇಷನ್ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದ್ರೆ, ಪಿತ್ತಕೋಶವನ್ನೇ ತೆಗೆಯಬೇಕಂತೆ. ಈ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಪಿತ್ತಕೋಶ ಅಂದ್ರೆ ಲಿವರ್. ಕೆಲವು ಆಹಾರಗಳನ್ನು ತಿಂದಾಗ, ಅದು ಜೀರ್ಣವಾಗಲು ಪಿತ್ತ ಬೇಕು. ಆ ಪಿತ್ತ ಬರುವುದು ಲಿವರ್‌ನಿಂದ. ಪಿತ್ತನಾಳದ ಮೂಲಕ ನಾವು ಸೇವಿಸಿದ ಆಹಾರ, ಸಣ್ಣ ಕರುಳಿಗೆ ಹೋಗಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೀಗೆ ಪಿತ್ತನಾಳಗಳು ಕೆಲಸ ಮಾಡುವಾಗ, ಕೆಲವು ಪಿತ್ತಕೋಶಗಳ ಅಂಶ ಒಂದೆಡೆ ಶೇಖರಣೆಯಾಗುತ್ತದೆ. ಅದರಲ್ಲಿ ಉಪ್ಪಿನಂಶವಿರುತ್ತದೆ. ಅದೇ ಕಲ್ಲಾಗಿ ಬದಲಾಗುತ್ತದೆ.
ಪಿತ್ತಕೋಷದಲ್ಲಿ ಕಲ್ಲಿದ್ದಾಗ, ಗೊತ್ತಾಗುವುದಿಲ್ಲ. ಆದರೆ ಪಿತ್ತಕೋಷದಿಂದ ಕಲ್ಲು ಹೊರಬಂದಾಗ, ಆ ಜಾಗದಲ್ಲಿ ನೋವುಂಟಾಗುತ್ತದೆ. ಆಗ ಅಲ್ಲಿ ಕಲ್ಲಾಗಿರುವುದು ಗೊತ್ತಾಗುತ್ತದೆ. ಇನ್ನೊಂದು ಲಕ್ಷಣವೆಂದರೆ, ಲಿವರ್ ಉಬ್ಬಿಕೊಂಡು, ಅದು ಕೈಗೆ ಸಿಗುತ್ತದೆ. ಸಾಮಾನ್ಯವಾಗಿ, ಲಿವರ್ ಇರುವ ಜಾಗಕ್ಕೆ ನಾವು ಮುಟ್ಟಿದಾಗ, ಅದು ಗೊತ್ತಾಗುವುದಿಲ್ಲ. ಆದರೆ ಅಲ್ಲಿ ಕಲ್ಲಾದಾಗ, ಲಿವರ್ ಉಬ್ಬಿಕೊಳ್ಳುತ್ತದೆ.
ಪಿತ್ತಕೋಷದಲ್ಲಿ ಕಲ್ಲಿದ್ದಷ್ಟು ದಿನ, ಅದರಲ್ಲಿ ದ್ರವ ತುಂಬಿಕೊಳ್ಳುತ್ತದೆ. ಕೀವು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮಗೆ ಪಿತ್ತಕೋಷದಲ್ಲಿ ಕಲ್ಲಿದೆ ಎಂದು ತಿಳಿದ ತಕ್ಷಣ, ವೈದ್ಯರಲ್ಲಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲವಾದಲ್ಲಿ, ಇದು ನಿಮ್ಮ ಜೀವಕ್ಕೆ ಅಪಾಯ ಮಾಡುವ ಸಂಭವವಿರುತ್ತದೆ. ಈ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..