Tuesday, October 7, 2025

Latest Posts

ಸರ್ಪ ಕಚ್ಚಿದಾಗ ಶವವನ್ನು ಸುಡದಿರಲು ಕಾರಣವೇನು ಗೊತ್ತಾ..?

- Advertisement -

ಹಿಂದೂ ಧರ್ಮದಲ್ಲಿ ಕೆಲವರು ಶವವನ್ನು ಹೂಳುವ ಬದಲು ಸುಡುತ್ತಾರೆ. ಇನ್ನು ಕೆಲವರು ಶವವನ್ನು ಹೂಳುತ್ತಾರೆ. ಅಲ್ಲದೇ, ಶವ ಸಂಸ್ಕಾರದ ಪದ್ಧತಿ ಕೂಡ ಬೇರೆ ಬೇರೆ ಇದೆ. ಆದ್ರೆ ಸರ್ಪ ಕಚ್ಚಿ ಸಾವನ್ನಪ್ಪಿದಾಗ ಮಾತ್ರ, ಕೆಲವರು ಶವವನ್ನು ಸುಡುವುದಿಲ್ಲ. ಬದಲಾಗಿ ಹೂಳುತ್ತಾರೆ. ಅಥವಾ ನೀರಿನಲ್ಲಿ ತೇಲಿ ಬಿಡುತ್ತಾರೆ. ಹಾಗಾದ್ರೆ ಸರ್ಪ ಕಚ್ಚಿ ಸತ್ತಾಗ, ಶವವನ್ನ ಏಕೆ ಸುಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಈ ಸ್ವಭಾವದ ಜನರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ.. ಸಾಧ್ಯವಾದಷ್ಟು ದೂರವಿರಲು ಚಾಣಕ್ಯ ಹೇಳಿದನು..!

ಸರ್ಪ ಕಚ್ಚಿದಾಗ, ಆ ವ್ಯಕ್ತಿ ಸತ್ತೇ ಹೋಗುತ್ತಾನೆಂದು ಹೇಳಲಾಗುವುದಿಲ್ಲ. ಯಾಕಂದ್ರೆ ಸರ್ಪ ಕಚ್ಚಿದಾಗ, ಅದರ ವಿಷವನ್ನು ತೆಗೆಯುವವರು, ಆ ವಿಷವನ್ನು ತೆಗೆದು ಅವರನ್ನು ಬದುಕಿಸಬಹುದು. ಹಾಗಾಗಿ ಮೊದಲಿನ ಕಾಲದಲ್ಲಿ ಸರ್ಪ ಕಚ್ಚಿದಲ್ಲಿ, ಸತ್ತವರನ್ನೂ ಬದುಕಿಸುವ ತಾಕತ್ತು ಕೆಲವರಿಗೆ ಇತ್ತು. ನದಿ ಬಳಿ ವಾಸಿಸುವ ಅಂಥ ಜನರು, ಸರ್ಪ ಕಚ್ಚಿ ಸಾವನ್ನಪ್ಪಿದವರನ್ನೂ ಬದುಕಿಸುತ್ತಿದ್ದರು.

ನಿಮ್ಮ ಮನೆಯಲ್ಲಿ ಪಕ್ಷಿಗಳನ್ನು ಸಾಕುತ್ತೀರಾ…? ಆ ಪಂಜರವೇ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತೆ ಎಚ್ಚರ..!!

ಹಾಗಾಗಿ ಸರ್ಪ ಕಚ್ಚಿದ ವ್ಯಕ್ತಿಯನ್ನು ಸುಡುವ ಬದಲು, ಬಾಳೆಎಲೆಯಲ್ಲಿ ಸುತ್ತಿ ನದಿಯಲ್ಲಿ ತೇಲಿ ಬಿಡಲಾಗುತ್ತಿತ್ತು. ಇದರಿಂದ ನದಿಯಲ್ಲಿ ಆ ಮೃತನನ್ನು ನೋಡಿದವರಿಗೆ ಅವನು ಹಾವು ಕಚ್ಚಿ ಸಾವನ್ನಪ್ಪಿದ್ದಾನೆಂದು ಗೊತ್ತಾಗುತ್ತದೆ. ಮತ್ತು ವಿಷವನ್ನು ತೆಗೆಯುವವರು ಮೃತನ ದೇಹದಲ್ಲಿದ್ದ ವಿಷವನ್ನು ತೆಗೆದು, ಅವನನ್ನು ಬದುಕಿಸಬಹುದು. ಆತ ಮತ್ತೆ ಮರಳಿ ಬರಬಹುದು ಎಂಬ ನಂಬಿಕೆ ಇತ್ತು. ಹಾಗಾಗಿ ಸರ್ಪ ಕಚ್ಚಿದ ವ್ಯಕ್ತಿಯನ್ನು ಸುಡುವ ಬದಲು, ನದಿಯಲ್ಲಿ ತೇಲಿ ಬಿಡಲಾಗುತ್ತಿತ್ತು.

- Advertisement -

Latest Posts

Don't Miss