Sunday, September 8, 2024

Latest Posts

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

- Advertisement -

Spiritual: ಹಿಂದೂ ದೇವಸ್ಥಾನಗಳ ನಾಡು ಭಾರತವಾಗಿದ್ದರೂ ಕೂಡ, ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನವಿದೆ. ಅವುಗಳಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿರುವ ಗಣಪತಿಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..

ಹಿಂದೂಗಳು ಪ್ರಥಮವಾಗಿ ಪೂಜಿಸುವ ದೇವರು ಅಂದ್ರೆ ಗಣೇಶ. ಹಾಗಾಗಿ ಅವನನ್ನು ಪ್ರಥಮ ಪೂಜಿತ ಎಂದು ಕರೆಯುತ್ತಾರೆ. ಗಣೇಶನನ್ನು ಪೂಜಿಸಿ, ಇಷ್ಟ ದೇವರು, ಕುಲದೇವರಿಗೆ ಪೂಜಿಸಿದರೆ, ಎಲ್ಲ ಕಾರ್ಯವೂ ಸರಾಗವಾಗಿ ಆಗುತ್ತದೆ. ನಮ್ಮ ಬೇಡಿಕೆಗಳೆಲ್ಲ ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಜರ್ಮನಿಯ ಬೆರ್ಲಿನ್ ನಲ್ಲಿಯೂ ಹಿಂದೂಗಳು ಸೇರಿ, ಗಣೇಶ ದೇವಸ್ಥಾನ ನಿರ್ಮಿಸಿದ್ದಾರೆ.

ಈ ದೇವಸ್ಥಾನ ಅಷ್ಟೇನೂ ದೊಡ್ಡದಿಲ್ಲ. ಪುಟ್ಟ ದೇವಸ್ಥಾನವಾಗಿದ್ದರೂ ಕೂಡ, ಹತ್ತಿರದಲ್ಲಿರುವ ಹಿಂದೂಗಳು ಈ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಾರೆ. 2006ರಲ್ಲಿ ಜರ್ಮನಿಯಲ್ಲಿ ನೆಲೆನಿಂತ ಹಿಂದೂಗಳು ಸೇರಿ, ಈ ದೇವಸ್ಥಾನವನ್ನು ನಿರ್ಮಿಸಿದರು. ಇಲ್ಲಿ ಎಲ್ಲ ಹಿಂದೂಗಳು ಸೇರಿ, ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಇಲ್ಲಿ ಸಂಜೆ ನಾಲ್ಕು ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದರ್ಶನವಿರುತ್ತದೆ. ವಿಶೇಷ ಪೂಜೆ ಪುನಸ್ಕಾರಗಳಿದ್ದರೆ, ಶನಿವಾರ ಮತ್ತು ಭಾನುವಾರವಷ್ಟೇ ಮಾಡಿಸಬಹುದು.

ಜರ್ಮನಿಯಲ್ಲಿ ಬರೀ ಗಣೇಶನನ್ನು ಅಷ್ಟೇ ಅಲ್ಲದೇ. ಬೇರೆ ಬೇರೆ ದೇವಿ ದೇವತೆಗಳನ್ನು ಪೂಜಿಸಲಾಗುತ್ತದೆ. ಹಲವು ಹಿಂದೂ ಮಂದಿರಗಳಿದೆ. ಇಲ್ಲಿನ ಅರ್ಚಕರು ಹಿಂದೂಗಳ ಮನೆಗೆ ಹೋಗಿ, ಪೂಜೆ ಪುನಸ್ಕಾರ, ಹೋಮ ಹವನಗಳನ್ನು ಕೂಡ ನೆಡಸಿಕೊಡುತ್ತಾರೆ.

Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?

ಹೊಟ್ಟೆಕಿಚ್ಚಿನ ಸ್ವಭಾವದವರು ಈ 4 ರಾಶಿಯವರು..

Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?

- Advertisement -

Latest Posts

Don't Miss