Recipe: ಮನೆಯಲ್ಲಿ ಚಪಾತಿ ಮಾಡಿದಾಗ ಅದರೊಂದಿಗೆ ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಆದ್ರೆ ಚಪಾತಿ ಜೊತೆ ಬರೀ ಪಲ್ಯವಲ್ಲ, ನೀವು ಗ್ರೇವಿ ಕೂಡ ಟೇಸ್ಟ್ ಮಾಡಬಹುದು. ಹಾಗಾಗಿ ನಾವಿಂದು ಬೆಳ್ಳುಳ್ಳಿ- ಪಾಲಕ್ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಪಾಲಕನ್ನು ಚೆನ್ನಾಗಿ ತೊಳೆದು, ಹಸಿ ವಾಸನೆ ಹೋಗುವವರೆಗೂ ಹುರಿದು, ಬಳಿಕ ಕುದಿಸಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ ಎರಡು ಸ್ಪೂನ್ ತುಪ್ಪ, ಜೀರಿಗೆ, ಚಿಕ್ಕ ತುಂಡು ಶುಂಠಿ- ಬೆಳುಳ್ಳಿ- 1 ಈರುಳ್ಳಿ- 2 ಹಸಿಮೆಣಸಿನಕಾಯಿ ಹಾಕಿ ಮಾಡಿದ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ 1 ಸ್ಪೂನ್ ಕಡಲೆ ಹಿಟ್ಟು ಹಾಕಿ ಹುರಿಯಿರಿ.
1 ಸಣ್ಣಗೆ ಕತ್ತರಿಸಿದ ಟೊಮೆಟೋ ಹಾಕಿ ಹುರಿದು, ಇದಕ್ಕೆ ಕಾಲು ಕಪ್ ಮೊಸರು ಸೇರಿಸಿ. ಅರ್ಧ ಸ್ಪೂನ್ ಗರಂ ಮಸಾಲೆ, ಉಪ್ಪು, ಪಾಲಕ್ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಗ್ರೇವಿಗೆ ಬೇಕಾದಷ್ಟು ನೀರು, 1 ಕಪ್ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ ಕುದಿ ಬರಿಸಿ. ಬಳಿಕ ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಹುರಿದು ಒಗ್ಗರಣೆ ಕೊಟ್ಟರೆ ಪಾಲಕ್- ಬೆಳ್ಳುಳ್ಳಿ ಗ್ರೇವಿ ರೆಡಿ..
ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..
ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?
ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?