Health Tips: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು, ಸೀಬೆ ಹಣ್ಣಿನ ಸೇವನೆಯಿಂದಾಗುವ 8 ಲಾಭಗಳಲ್ಲಿ, 4 ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಐದನೇಯದಾಗಿ ಸೀಬೆಹಣ್ಣಿನ ಸೇವನೆಯಿಂದ ದೇಹದ ತೂಕ ಇಳಿಯುತ್ತದೆ. ತೂಕ ಇಳಿಸಲು ಬಯಸುವವರು, ತಮ್ಮ ಡಯಟ್ ಲೀಸ್ಟ್‌ನಲ್ಲಿ ಸೀಬೆ ಹಣ್ಣನ್ನೂ ಸೇರಿಸಿಕೊಳ್ಳಬಹುದು. ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಫೈಬರ್ ಇರುವ ಕಾರಣ, ಇದು ದೇಹದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಕ್ಯಾನ್ಸರ್‌ನಿಂದ ದೂರವಿರಬೇಕು ಅಂದ್ರೆ ಸೀಬೆಹಣ್ಣಿನ ಸೇವನೆ ಮಾಡಬೇಕು. ಸೀಬೆಹಣ್ಣಿನ ಸೇವನೆಯಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಏಕೆಂದರೆ ಇದರಲ್ಲಿ ಆ್ಯಂಟಿ ವೈರಸ್ ಗುಣಗಳಿದ್ದು, ಇದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಆದರೆ ಸೀಬೆ ಹಣ್ಣು ತಿನ್ನುವಾಗ, ಸ್ವಚ್ಛವಾಗಿ ತೊಳೆದು, ತಿನ್ನಬೇಕು.
ಅಲ್ಲದೇ, ಲಿವರ್ ಆರೋಗ್ಯವಾಗಿರಬೇಕು ಅಂದ್ರೆ ಸೀಬೆಹಣ್ಣಿನ ಸೇವನೆ ಮಾಡಬೇಕು. ಆದರೆ ಸೀಬೆಹಣ್ಣನ್ನು ತಿನ್ನುವಾಗ ಅದರ ಬೀಜವನ್ನು ಹೆಚ್ಚು ಕಚ್ಚಿ ತಿನ್ನಬಾರದು. ಹಾಗೇನಾದರೂ ತಿಂದರೆ, ಅದರಿಂದ ನಿಮ್ಮ ಆರೋಗ್ಯಕ್ಕೆ ಸಂಪೂರ್ಣ ಆರೋಗ್ಯ ಲಾಭ ಸಿಗುವುದಿಲ್ಲ. ಹಾಗಾಗಿ ಸೀಬೆಹಣ್ಣನ್ನು ತಿನ್ನುವಾಗ ಅದರ ಬೀಜವನ್ನು ಅರ್ದಂಬರ್ಧ ಕಚ್ಚಿ ತಿನ್ನಬೇಕು.
ಸೀಬೆಹಣ್ಣಿನ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖ ಸುಕ್ಕುಗಟ್ಟುವುದಿಲ್ಲ. ಮೊಡವೆಗಳಾಗುವುದಿಲ್ಲ. ನೀವು ಹೆಚ್ಚು ವಯಸ್ಸಾದವರಂತೆ ಕಾಣದಿರಲು ಸೀಬೆಹಣ್ಣಿನ ಸೇವನೆ ಮಾಡಬಹುದು. ಆದರೆ ಕೆಲವರಿಗೆ ಸೀಬೆಹಣ್ಣನ್ನು ತಿಂದರೆ, ಅಲರ್ಜಿಯಾಗುತ್ತದೆ. ಅಂಥವರು ವೈದ್ಯರ ಸಲಹೆ ಪಡೆದು ಬಳಿಕ ಸೀಬೆಹಣ್ಣು ಸೇವಿಸುವುದು ಉತ್ತಮ.