Health Tips: ಕೆಲವೊಂದು ಶುಭಕಾರ್ಯ ಇದ್ದಾಗ, ಪ್ರವಾಸ ಹೋಗುವಾಗ, ಪರೀಕ್ಷೆ ಇದ್ದಾಗ ಹೀಗೆ ಹಲವು ಕಾರಣಗಳಿಗಾಗಿ ಹೆಣ್ಣು ಮಕ್ಕಳು ಮುಟ್ಟು ಮುಂದೂಡಲು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ನೀವು ಪದೇ ಪದೇ ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದ್ರೆ ಏನೇನು ತೊಂದರೆಯಾಗುತ್ತದೆ ಎಂದು ತಿಳಿಯೋಣ ಬನ್ನಿ..
ಮುಟ್ಟಿಗಾಗಿ ನೀವು ಪೋಸ್ಟ್‌ಪೋನ್ ಮಾತ್ರೆ ತೆಗೆದುಕೊಂಡಾಗ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಆ ಮೂಲಕ ನಿಮ್ಮ ಮುಖದ ಮೇಲೆ ಮೊಡವೆಗಳಾಗುತ್ತದೆ. ಹೊಟ್ಟೆ ನೋವಾಗುವುದು, ಹೊಟ್ಟೆ ಉರಿಯುವ ಸಾಧ್ಯತೆಗಳಿದೆ. ಸರಿಯಾಗಿ ಮಲ, ಮೂತ್ರ ವಿಸರ್ಜನೆಯಾಗುವುದಿಲ್ಲ. ಹಾಗಾಗಿ ಪದೇ ಪದೇ ನೀವು ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳಬಾರದು.
ಇಷ್ಟೇ ಅಲ್ಲದೇ ನಿಮಗೆ ಪದೇ ಪದೇ ಕೋಪ ಬರಬಹುದು. ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ. ನೀವು ಚೈತನ್ಯದಾಯಕರಾಗಿರುವುದಿಲ್ಲ. ಸ್ತನದಲ್ಲಿ ನೋವಾಗುತ್ತದೆ. ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಂಡಾಗ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಎದೆಹಾಲು ಕುಡಿಸುವ ತಾಯಂದಿರುವ ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಂಡರೆ, ಎದೆ ಹಾಲು ಕಡಿಮೆಯಾಗುವ ಸಾಧ್ಯತೆ ಇದೆ.
ಇವೆಲ್ಲ ಸಮಸ್ಯೆ ಬರಬಾರದು ಅಂದ್ರೆ ಪದೇ ಪದೇ ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳಬಾರದು. ಮತ್ತು ದೇಹಕ್ಕೆ ತಂಪು ನೀಡುವ ಆಹಾರ ಸೇವಿಸಬೇಕು. ಹಣ್ಣು, ಎಳನೀರು, ಮಜ್ಜಿಗೆ, ಮೊಸರು ಇಂಥ ಆಹಾರಗಳನ್ನು ಸೇವಿಸಿದಾಗ, ಮಾತ್ರೆಯಿಂದ ಅಡ್ಡ ಪರಿಣಾಮವಾಗುವುದಿಲ್ಲ.
ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?
ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..