Wednesday, March 12, 2025

Latest Posts

ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?

- Advertisement -

Health Tips: ಸಲಿಂಗ ಪ್ರೇಮ, ವಯಸ್ಸಿಗೆ ಬಂದ ಮಕ್ಕಳಲ್ಲಿ ಅಬ್ನಾರ್ಮಲ್ ಚಟುವಟಿಕೆ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಅವರು ಸಾಕಷ್ಟು ಮಾಹಿತಿಗಳನ್ನು ನಿಮಗೆ ಕೊಟ್ಟಿದ್ದಾರೆ. ಅದೇ ರೀತಿ ಇಂದು ಜನರಲ್ಲಿರುವ ಬೇಧ ಭಾವಗಳ ಭಾವನೆಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ವೈದ್ಯರ ಪ್ರಕಾರ, ಯಾವ ಸಂಬಂಧ ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಅಡ್ಡಿಯಾಗುತ್ತದೆಯೋ, ನಿಮ್ಮನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕುತ್ತದೆಯೋ, ಸ್ವಾತಂತ್ರವನ್ನು ಕಸಿದುಕೊಂಡು, ಬದುಕಿನ ರೀತಿಯನ್ನು ಕೆಟ್ಟದಾಗಿ ಬದಲಾಯಿಸುತ್ತದೆಯೋ, ಅಂಥ ಸಂಬಂಧ ಇಟ್ಟುಕೊಳ್ಳದಿರುವುದೇ ಉತ್ತಮ. ಈ ಮಾತು ವೈದ್ಯರು ಹೇಳಿದ್ಯಾಕೆ ಎಂದರೆ, ಸಲಿಂಗಿಯಾಗಿರುವವರು ಇನ್ನೊಬ್ಬರ ಜೀವನದ ಬಗ್ಗೆಯೂ ಯೋಚಿಸಬೇಕು.

ಮನೆಯಲ್ಲಿ ಒತ್ತಾಯ ಮಾಡಿದರು, ಅಥವಾ ಸಮಾಜ ಏನನ್ನುತ್ತದೆಯೋ ಎಂಬ ಕಾರಣಕ್ಕೆ ಸಲಿಂಗಿಯಾದವರು ವಿರುದ್ಧ ಲಿಂಗದವರನ್ನು ವಿವಾಹವಾಗಿ. ಅವರೊಂದಿಗೆ ಸರಿಯಾಗಿ ಸಂಸಾರ ಮಾಡದೇ, ಅವರಿಗೆ ಮೋಸ ಮಾಡಬಾರದು. ಇದೇ ರೀತಿಯಾಗಿ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ವಿವಾಹ ಮಾಡಿಕೊಂಡು ವಿದೇಶಕ್ಕೆ ಕರೆದುಕೊಂಡು ಹೋಗಿ, ಅವರೊಂದಿಗೆ ಸರಿಯಾಗಿ ಸಂಸಾರ ಮಾಡದೇ, ಹೆಣ್ಣು ಮಕ್ಕಳಿಗೆ ಮಾನಸಿಕೆ ಹಿಂಸೆ ನೀಡುವವರಿದ್ದಾರೆ.

ಇಂಥವರೊಂದಿಗೆ ಹಿಂಸೆಪಟ್ಟು ಸಂಸಾರ ಮಾಡುವ ಬದಲು, ಇಂಥವರಿಂದ ದೂರವಿರುವುದು ಉತ್ತಮ. ಆದರೆ ಇಲ್ಲಿ ಬರೀ ಓರ್ವ ಹೆಣ್ಣಿನ ಜೀವನವಷ್ಟೇ ಹಾಳಾಗುವುದಿಲ್ಲ. ಅವಳ ಕುಟುಂಬಸ್ಥರು ಅವಮಾನ ಅನುಭವಿಸುತ್ತಾರೆ. ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹಾಗಾಗಿ ನಿಮ್ಮ ದೇಹದಲ್ಲಿ ಸಮಸ್ಯೆ ಇದ್ದರೆ, ಅದಕ್ಕೆ ತಕ್ಕಂತೆ ಜೀವನ ಸಂಗಾತಿ ಹುಡುಕಬೇಕು. ಅದನ್ನು ಬಿಟ್ಟು ವಿರುದ್ಧ ಲಿಂಗದವರಿಗೆ ಮೋಸ ಮಾಡಬಾರದು ಅನ್ನೋದು ವೈದ್ಯರ ಮಾತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss