Tuesday, April 15, 2025

Latest Posts

ಎಂಥ ಪತ್ನಿ ಪತಿಯ ಜೀವನವನ್ನೇ ನಾಶ ಮಾಡಬಲ್ಲಳು ಗೊತ್ತಾ..?

- Advertisement -

Spiritual: ಎಂಥ ಪತ್ನಿ ಪತಿಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುತ್ತಾಳೆ. ಅವನ ಆರೋಗ್ಯ, ಆಯುಷ್ಯವನ್ನು ಉತ್ತಮವಾಗಿ ಇಡುತ್ತಾಳೆ ಅನ್ನೋ ಬಗ್ಗೆ ಕಳೆದ ಭಾಗದಲ್ಲಿ ನಾವು ಹೇಳಿದ್ದೆವು. ಅದೇ ರೀತಿ ಚಾಣಕ್ಯರ ಪ್ರಕಾರ ಯಾವ ಹೆಣ್ಣು ತನ್ನ ಪತಿಯ ಭವಿಷ್ಯವನ್ನು, ಜೀವನವನ್ನೇ ಹಾಳು ಮಾಡಬಲ್ಲಳು. ಅವನ ನೆಮ್ಮದಿಯನ್ನೇ ಕಸಿಯಬಲ್ಲಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟು ವಚನ ಹೇಳುವವಳು. ಓರ್ವ ಗೃಹಿಣಿಯ ಮಾತು ಹಿತವಾಗಿದ್ದಾಗ, ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಅದೇ ಪ್ರತೀ ಮಾತಿಗೂ ಹಂಗಿಸಿ ಮಾತನಾಡುವ ಗೃಹಿಣಿ ಇರುವ ಮನೆಯಲ್ಲಿ, ಶಾಂತಿ, ನೆಮ್ಮದಿ ಇರಲು ಸಾಧ್ಯವೇ ಇಲ್ಲ. ಅದು ಭೂಮಿಯ ಮೇಲಿನ ನರಕವಾಗಿರುತ್ತದೆ. ಅಲ್ಲಿರುವ ಜನ, ಮನೆಯಲ್ಲಿ ಇರಲೂ ಆಗದೇ, ಮನೆ ಬಿಟ್ಟು ಹೋಗಲೂ ಆಗದೇ, ಉಸಿರುಗಟ್ಟಿರುವಂತೆ ಬದುಕುತ್ತಾರೆ. ಅಂಥ ಮನೆಯಲ್ಲಿರುವ ಜನರಿಗೆ ಸಿಗುವ ಖುಷಿಯನ್ನೂ ಅನುಭವಿಸುವ, ಸರಿಯಾಗಿ ಆಹಾರ ಸೇವಿಸುವ ಯೋಗವೂ ಇರುವುದಿಲ್ಲ. ಹಾಗಾಗಿ ಯಾವ ಮನೆಯಲ್ಲಿ ಹಂಗಿಸಿ ಮಾತನಾಡುವ ,ಕೊಂಕು ಮಾತನಾಡುವ, ಹೋಲಿಕೆ ಮಾಡಿ ಮಾತನಾಡುವ ಮಹಿಳೆ ಇರುತ್ತಾಳೋ. ಅಂಥ ಮನೆ ನರಕಕ್ಕೆ ಸಮ.

ಚರಿತ್ರ ಹೀನ ಸ್ತ್ರೀ. ಯಾವ ಮಹಿಳೆ ಒಬ್ಬರಿಗಿಂತ ಹೆಚ್ಚು ಪುರುಷರೊಂದಿಗೆ ಸಂಬಂಧವನ್ನು ಹೊಂದಿರುತ್ತಾಳೋ. ಅಂಥ ಮಹಿಳೆಯೊಂದಿಗೆ ಸಂಸಾರ ನಿಭಾಯಿಸಿಕೊಂಡು ಹೋಗಲು ಎಂದಿಗೂ ಸಾಧ್ಯವಾಗುವುದಿಲ್ಲ. ಅಂಥವರು ಮನೆಯಲ್ಲಿದ್ದರೆ, ಆ ಮನೆಯ ಯಾವ ಸದಸ್ಯನಿಗೂ ಸಮಾಜ ಗೌರವ ಕೊಡುವುದಿಲ್ಲ.

ದುರಾಸೆಯ ಹೆಣ್ಣು. ನನಗೆ ಅದು ಬೇಕು, ಇದು ಬೇಕು, ಕೊಡಿಸಿ ಎಂದು ಸದಾ ಕಂಡು ಕಂಡಿದ್ದನ್ನ ಕೇಳುವ ಹೆಣ್ಣು ಮಕ್ಕಳು, ಪತಿಯನ್ನ ಎಂದಿಗೂ ನೆಮ್ಮದಿ ಮತ್ತು ಸಂತೋಷದಿಂದ ಇಡಲು ಸಾಧ್ಯವಾಗುವುದಿಲ್ಲ. ಅವನ ಆರ್ಥಿಕ ಪರಿಸ್ಥಿತಿಯನ್ನು ಅರಿಯದೇ, ಆಕೆ ಕಂಡಿದ್ದನ್ನೆಲ್ಲ ಕೇಳಿದಾಗ, ಅವನು ಅದೆಲ್ಲ ತಂದು ಕೊಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾನೆ. ಆಗಲೇ ಕಲಹ ಶುರುವಾಗುತ್ತದೆ. ಇನ್ನು ಕೆಲ ಪುರುಷರು, ಹೀಗೆ ಹೇಳಲು ಸಾಧ್ಯವಾಗದೇ, ದುಡ್ಡಿಗಾಗಿ ಅಡ್ಡ ದಾರಿ ಹಿಡಿಯುತ್ತಾರೆ. ಹಾಗಾಗಿ ದುರಾಸೆಯ ಹೆಣ್ಣು ಮಕ್ಕಳು ತನ್ನ ಪತಿಯ ಜೀವನವನ್ನೇ ಸರ್ವನಾಶ ಮಾಡಬಲ್ಲಳು.

ಸುಂದರತೆ ಎಲ್ಲವೂ ಅಲ್ಲ. ಕೆಲವು ಪುರುಷರು ನಾನು ಮದುವೆಯಾಗುವ ಹೆಣ್ಣು ಸುಂದರವಾಗಿದ್ದರೆ ಅಷ್ಟೇ ಸಾಕು. ಉಳಿದದ್ದೆಲ್ಲ, ನಾನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ. ಆದರೆ ಇದು ಮೂರ್ಖರ ಲಕ್ಷಣ. ಹೆಣ್ಣು ಬರೀ ಸುಂದರವಾಗಿದ್ದರೆ ಸಾಲುವುದಿಲ್ಲ. ಆಕೆಯ ಗುಣವೂ ಸುಂದರವಾಗಿರಬೇಕು. ನಿಮ್ಮ ಮನೆಯನ್ನು ಆಕೆ ನಿಭಾಯಿಸಿಕೊಂಡು ಹೋಗಬೇಕು. ಅತ್ತೆ, ಮಾವ, ಮೈದುನ ಎಲ್ಲರೂ ನನ್ನವರು ಎನ್ನುವ ಭಾವನೆ ಆಕೆಗೆ ಬರಬೇಕು. ಏನೇ ಜಗಳವಾದರೂ, ಅದನ್ನು ಮುಂದುವರಿಸದೇ, ಸುಧಾರಿಸಿಕೊಂಡು ಹೋಗಬೇಕು. ಇಂಥ ಹೆಣ್ಣಿನಿಂದ ಮಾತ್ರ ಓರ್ವ ಪುರುಷನ ಜೀವನ ಸುಂದರವಾಗಿರಲು ಸಾಧ್ಯ.

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 1

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 3

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 2

- Advertisement -

Latest Posts

Don't Miss