ಮನಸ್ಸು ಎಲ್ಲಿರುತ್ತೆ ನಿಮಗೆ ಗೊತ್ತಾ? ಮೆದುಳು ಮನಸ್ಸು ಎರಡು ಬೇರೆ ಬೇರೆ

Health Tips: ಪ್ರತಿದಿನ ನಮ್ಮ ತಲೆಯಲ್ಲಿ ಹಲವು ಯೋಚನೆಗಳು ಹರಿದಾಡುತ್ತದೆ. ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳದ ಭಾವನೆಗಳಿರುತ್ತದೆ. ಆದರೆ ಮೆದುಳಿನ ಯೋಚನೆ, ಮನಸ್ಸಿನ ಮಾತು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇಂದು ಮನೋವೈದ್ಯರಾದ ಡಾ. ಶ್ರೀಧರ್ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಬದುಕಿನ ವಿಷಯಕ್ಕೆ ಬಂದಾಗ, ನಾವು ಯಾವ ಕೆಲಸವನ್ನು ಮಾಡಬೇಕು ಮತ್ತು ಮಾಡಬಾರದು ಅಂತಾ ನಿರ್ಧರಿಸುವ ಶಕ್ತಿ ಇರುವುದು ಮನಸ್ಸಿಗೆ. ನಮ್ಮ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿ, ನಿಗ್ರಹಿಸುವ ಶಕ್ತಿ ಇರುವುದು ಮನಸ್ಸಿಗೆ. ಮನಸ್ಸು ಎಲ್ಲಿದೆ ಎಂಬ ಪ್ರಶ್ನೆಗೆ ಕೆಲವರು ಹೃದಯವನ್ನು ತೋರಿಸುತ್ತಾರೆ. ಇನ್ನು ಕೆಲವರು ಮೆದುಳೇ ನಮ್ಮ ಮನಸ್ಸು ಎನ್ನುತ್ತಾರೆ. ಹೌದು ಮೆದುಳು ನಮ್ಮ ಮನಸ್ಸು. ಏಕೆಂದರೆ ನಮ್ಮ ಯೋಚನೆಯೇ ನಮ್ಮನ್ನು ನಿಗ್ರಹಿಸುತ್ತದೆ.

ಇನ್ನು ಮೆದುಳಿಗೆ ನೋವಾದರೆ, ಮನಸ್ಸಿಗೂ ನೋವಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ, ಹೌದು. ಉದಾಹರಣೆಗೆ ಓರ್ವ ವ್ಯಕ್ತಿಗೆ ಅಪಘಾತವಾಗಿ, ಅವನ ಮೆದುಳಿಗೆ ಪೆಟ್ಟಾದರೆ, ಅವನು ಮೌನವಾಗುತ್ತಾನೆ. ಅಥವಾ ಹುಚ್ಚರಂತೆ ಆಡುತ್ತಾನೆ. ಅಂದರೆ, ಆ ಅಪಘಾತ ಅವನ ಮನಸ್ಸಿನ ಮೇಲೆ ಪರಿಣಾಮ ಬೀರಿದೆ ಎಂದರ್ಥ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ರವೆ ಲಾಡು ರೆಸಿಪಿ: ವೀಡಿಯೋ ಸಮೇತ

ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

About The Author