Spiritual: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸಕ್ಕೂ ನಾವು ಕೆಲ ನಿಯಮಗಳನ್ನು ಅನುಸರಿಸಬೇಕೆಂಬ ಪದ್ಧತಿ ಇದೆ. ಆದರೆ ಅದನ್ನು ಎಲ್ಲರೂ ಅನುಸರಿಸುವುದಿಲ್ಲ. ಏಕೆಂದರೆ ಕೆಲವರಿಗೆ ಆ ಪದ್ಧತಿಯಲ್ಲಿ ನಂಬಿಕೆ ಇರುವುದಿಲ್ಲ. ಮತ್ತೆ ಕೆಲವರಿಗೆ ಆ ಪದ್ಧತಿ ಬಗ್ಗೆ ಗೊತ್ತೇ ಇರುವುದಿಲ್ಲ. ಉಗುರು ಕತ್ತರಿಸುವ ವಿಷಯವಾಗಿಯೂ ಕೆಲ ನಿಯಮಗಳಿದೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದಲ್ಲಿ ಮುಸ್ಸಂಜೆ ಎಂದರೆ, ಲಕ್ಷ್ಮೀ ಬರುವ ಹೊತ್ತು. ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತ ತಿರುಗಾಡುವ ಹೊತ್ತು ಎಂದು ಹೇಳಲಾಗುತ್ತದೆ. ಇಂತ ಹೊತ್ತಿನಲ್ಲಿ ತಲೆಗೂದಲು ಬಾಚಬಾರದು. ನಿದ್ರೆ ಮಾಡಬಾರದು. ಉಗುರು ಕತ್ತರಿಸಬಾರದು. ಜಗಳವಾಡಬಾರದು. ಕಣ್ಣೀರು ಹಾಕಬಾರದು. ಇಂಥ ಕೆಲಸಗಳನ್ನು ಮಾಡುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. ಹಾಗಾಗಿ ಮುಸ್ಸಂಜೆ ಹೊತ್ತಿನಲ್ಲಿ ಉಗುರು ಕತ್ತರಿಸಬಾರದು ಅಂತಾ ಹಿರಿಯರು ಹೇಳುತ್ತಾರೆ.
ಇನ್ನು ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಉಗುರು ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಮಂಗಳವಾರ, ಶುಕ್ರವಾರ ದೇವಿಯ ವಾರವಾಗಿದೆ. ಈ ದಿನ ಉಗುರು ಕತ್ತರಿಸುವುದರಿಂದ, ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇನ್ನು ಗುರುವಾರ ಉಗುರು ಕತ್ತರಿಸಿದರೆ, ಬ್ರಹಸ್ಪತಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೇ, ಗುರುಬಲ ಕಡಿಮೆಯಾಗುತ್ತದೆ. ಶನಿವಾರದ ದಿನ ಉಗುರು ಕತ್ತರಿಸಿದರೆ, ಶನಿಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ.
ಇವೆಲ್ಲ ಧಾರ್ಮಿಕ ನಂಬಿಕೆಯಾಯಿತು. ಇದಕ್ಕೆ ಬೇರೆ ಕಾರಣವೂ ಇದೆ. ಹಿಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಕತ್ತಲಲ್ಲಿ ಉಗುರು ಕತ್ತರಿಸಿದರೆ, ಅದು ಅಲ್ಲಲ್ಲಿ ಬಿದ್ದು, ಆ ಉಗುರು ಊಟದ ಮೂಲಕ ನಮ್ಮ ದೇಹ ಸೇರುವ ಸಾಧ್ಯತೆ ಇತ್ತು. ಇನ್ನು ನಮಗೆಲ್ಲ ಇಂದು ಉಗುರು ಕತ್ತರಿಸಲು ನೇಲ್ ಕಟರ್ ಇದೆ. ಆದರೆ ಹಿಂದಿನ ಕಾಲದಲ್ಲಿ ಬ್ಲೇಡ್‌ನಂಥ ವಸ್ತುವಿನಿಂದ ಉಗುರು ಕತ್ತರಿಸುತ್ತಿದ್ದರು. ಕತ್ತಲಲ್ಲಿ ಗೊತ್ತಾಗದೇ, ಆ ಮೋನಚಾದ ವಸ್ತು ತಾಗಿ ರಕ್ತ ಬರುವ ಸಾಧ್ಯತೆ ಇತ್ತು. ಹಾಗಾಗಿ ಮುಸ್ಸಂಜೆ ವೇಳೆಗೆ ಉಗುರು ಕತ್ತರಿಸುವುದು ನಿಷಿದ್ಧವಾಗಿತ್ತು.
ತುಳಸಿ ಗಿಡವನ್ನು ಯಾವ ರೀತಿ ಬೆಳೆಸಿದರೆ ಮನೆಯಲ್ಲಿ ಸಾಕಾರಾತ್ಮಕತೆ ಹೆಚ್ಚುತ್ತದೆ ಗೊತ್ತಾ..?
ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..