Friday, April 4, 2025

Latest Posts

ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

- Advertisement -

Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಶನಿವಾರ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ನಮಗೆ ದುರಾದೃಷ್ಟ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೆಲವರು ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಕೆಲವರು ಇದನ್ನು ನಂಬುವುದಿಲ್ಲ. ಆದರೆ ಈ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ಶನಿಯ ಅವಕೃಪೆಗೆ ಪಾತ್ರರಾಗುತ್ತೇವೆ ಅಂತಾ ಹೇಳಲಾಗುತ್ತದೆ.

ಇನ್ನು ಶನಿ ಮತ್ತು ಕಬ್ಬಿಣಕ್ಕೂ ಸಂಬಂಧವಿದೆ ಎನ್ನುತ್ತಾರೆ. ರಸ್ತೆಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತಂದರೆ, ಮನೆಗೆ ಶನಿ ವಕ್ಕರಿಸುತ್ತಾನೆ ಅಂತಾರೆ, ಹಾಗಾಗಿ ದಾರಿಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತರುವುದಿಲ್ಲ. ಇನ್ನು ಹೊಸ ವಾಹನ ಖರೀದಿಸಿದಾಗ, ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ, ಶನಿದೇವನಿಗೂ ಪೂಜೆ ಸಲ್ಲಿಸಿದರೆ, ಅಪಘಾತವಾಗದಂತೆ ಶನಿ ನಮ್ಮನ್ನು ರಕ್ಷಿಸುತ್ತಾನೆಂದು ಹೇಳಲಾಗುತ್ತದೆ. ಇನ್ನು ಸಾಡೇಸಾಥಿ ಇದ್ದವರಿಗೆ ಹೆಚ್ಚಾಗಿ ಅಪಘಾತವಾಗುತ್ತದೆ. ಹಾಗಾಗಿ ನಾವು ಶನಿಗೂ ಕಬ್ಬಿಣಕ್ಕೂ ಸಂಬಂಧವಿದೆ ಅನ್ನೋದನ್ನ ನಂಬಬಹುದು. ಶನಿವಾರದ ದಿನ ಕಬ್ಬಿಣವನ್ನು ಮನೆಗೆ ತಂದರೆ, ದುರಾದೃಷ್ಟ ತಂದಹಾಗೆ ಎನ್ನಲಾಗಿದೆ.

ಈ ಮೂರ್ತಿಯನ್ನು ನಿಮ್ಮ ಆಫೀಸ್ ಟೇಬಲ್ ಮೇಲಿಟ್ಟರೆ ಅದೃಷ್ಟ ನಿಮ್ಮ ಪಾಲು

ಅಶ್ವಿನಿ ದೇವತೆಗಳು ಯಾರು..? ಇವರೇಕೆ ಅಸ್ತು ಅಸ್ತು ಎನ್ನುತ್ತಾರೆ..?

ಈ 4 ರಾಶಿಯವರು ಸೌಮ್ಯ ಸ್ವಭಾವದವರು

- Advertisement -

Latest Posts

Don't Miss