Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು. ಯಾಕೆ ಅಂತಾ ತಿಳಿಯೋಣ ಬನ್ನಿ..
ಮೊಬೈಲ್, ಲ್ಯಾಪ್‌ಟಾಪ್ ಟ್ಯಾಬ್‌ಗಳು ವಿಕಿರಣ ಹೊರಸೂಸುತ್ತದೆ. ಆದರೆ ಚಾರ್ಜ್ ಹಾಕಿದಾಗ, ಇವು ಸೂಸುವ ವಿಕಿರಣಗಳ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ನಮ್ಮ ಮೆದುಳು, ಹೃದಯ ಸೇರಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ನಿಮಗೆ ಈ ಬಗ್ಗೆ ಸುಳಿವೇ ಇರುವುದಿಲ್ಲ. ಭವಿಷ್ಯದಲ್ಲಿ ಮಾರಕ ರೋಗಗಳು ಬಂದಾಗ, ಆ ರೋಗ ಬರಲು ನಿಮ್ಮ ಈ ಅಭ್ಯಾಸವೇ ಕಾರಣವೆಂದು ಗೊತ್ತಾಗುತ್ತದೆ. ಹಾಗಾಗಿ ಚಾರ್ಜ್ ಹಾಕಿ, ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು.
ಇನ್ನು ಚಾರ್ಜ್ ಹಾಕಿ, ಮೊಬೈಲ್ ಬಳಸಿ, ಎಷ್ಟೋ ಜನರ ಮೊಬೈಲ್ ಬ್ಲಾಸ್ಟ್ ಆಗಿ, ಅಂಥವರು ಕಣ್ಣು ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಮುಖ ಸುಟ್ಟುಕೊಂಡಿದ್ದಾರೆ. ಹೀಗೆ ಹಲವು ದುಷ್ಪರಿಣಾಮಗಳು ಉಂಟಾಗಿದೆ. ಹಾಗಾಗಿ ಚಾರ್ಜ್ ಹಾಕಿ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಸೇರಿ ಯಾವುದೇ ಗ್ಯಾಜೇಟ್ಸ್ ಬಳಸಬೇಡಿ.

