Bengaluru Food News: ಬೆಂಗಳೂರಲ್ಲಿ ಹೊಟೇಲ್‌ಗಳಿಗೇನೂ ಕಡಿಮೆ ಇಲ್ಲ. ಗಲ್ಲಿ ಗಲ್ಲಿಗೊಂದು ಹೊಟೇಲ್ ಇದೆ. ಶೇ.90 ರಷ್ಟು ಜನ, ಹೊಟೇಲ್ ಇಟ್ಟು ಸಕ್ಸಸ್ ಕೂಡ ಕಂಡಿದ್ದಾರೆ. ಹೆಚ್ಚಿನವರು ಒಂದೇ ರೀತಿಯ ಫುಡ್ ಕೊಡುತ್ತಿದ್ದಾರೆ. ಆದರೆ ತಮ್ಮದೇ ಶೈಲಿಯಲ್ಲಿ, ದೇವಸ್ಥಾನಗಳಲ್ಲಿ ಸಿಗುವ ಊಟದ ರುಚಿಯನ್ನ ಕೊಡ್ತಾ ಇರೋದು ಬ್ರಾಹ್ಮಣ ಪ್ರಸಾದಮ್.
ಈಗ ಕೆಲವು ತಿಂಗಳ ಹಿಂದೆ ಬರೀ ಬೆಳಗ್ಗಿನ ತಿಂಡಿಯನ್ನ ಸರ್ವ್ ಮಾಡುತ್ತಿದ್ದ ಬ್ರಾಹ್ಮಣ ಪ್ರಸಾದಂ ಟೀ, ಈಗ ಚಿಕ್ಕ ಹೊಟೇಲ್ ಶುರು ಮಾಡಿದ್ದಾರೆ. ಬೆಳಿಗ್ಗೆ ಬನಶಂಕರಿಯಲ್ಲಿ ದೊಣ್ಣೆಯಲ್ಲಿ ತಿಂಡಿ ಸರ್ವ್ ಮಾಡುವ ಈ ಟೀಂ, 35 ರೂಪಾಯಿಗೆ ರುಚಿ ರುಚಿಯಾದ ಶಾಖಾನ್ನ, ಪಾಯಸ, ಸ್ವೀಟ್ ಪೊಂಗಲ್, ನಿಪ್ಪಟ್ಟು, ಹೋಳಿಗೆ, ಪೊಂಗಲ್ ಸೇರಿ ಒಂದೊಂದು ದಿನ ಒಂದೊಂದು ರೀತಿಯ ಫುಡ್ ಮಾಡ್ತಾರೆ. ಬಳಿಕ ಮಧ್ಯಾಹ್ನದ ವೇಳೆ ಹೊಟೇಲ್‌ನಲ್ಲಿ ದೇವಸ್ಥಾನದಲ್ಲಿ ಸಿಗುವ ಅನ್ನ ಪ್ರಸಾದದ ರೀತಿಯಲ್ಲಿ ಊಟವನ್ನು ಬಡಿಸುತ್ತಾರೆ.
ತಂದೆಯ ನಿಧನದ ನಂತರ, ತಂದೆಯ ಕನಸನ್ನು ಈಡೇರಿಸಲು ಭಾರದ್ವಾಜ ಬ್ರದರ್ಸ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇತ್ತೀಚೆಗೆ ಹಿಂದೂ ಸಂಪ್ರದಾಯವನ್ನು ಫಾಲೋ ಮಾಡೋದು ಕಡಿಮೆಯಾಗಿದೆ. ಅಂಥ ಊಟ ಸಿಗುವುದು ಊರ ಕಡೆ ಮಾತ್ರ. ಹಾಗಾಗಿ ಬೆಂಗಳೂರಿನಲ್ಲಿಯೂ ಅಂಥ ಸಾಂಪ್ರದಾಯಿಕ ಊಟವನ್ನು ಉಣಬಡಿಸಬೇಕು. ಮತ್ತು ತಾಯಿಯನ್ನ ಕೂಡ ಕೆಲಸದಲ್ಲಿ ತೊಡಗಿಸಿ, ಅವರ ಎಲ್ಲ ನೋವುಗಳನ್ನು ನೀಗಿಸಬೇಕು ಎಂಬುದು ಭಾರಧ್ವಾಜ ಬ್ರದರ್ಸ್ ನಿರ್ಧಾರವಾಗಿತ್ತು.
ಹಾಗಾಗಿ ಮಾಡೆಲಿಂಗ್‌ನಿಂದ ದೂರವಾದ ಸುಮನ್ ಭಾರದ್ವಾಜ್ ಮತ್ತು ಸಹೋದರ ಪವನ್ ಭಾರಧ್ವಾಜ್ ಸೇರಿ, ಬ್ರಾಹ್ಮಣ ಪ್ರಸಾದಮ್ ಎಂಬ ತಿಂಡಿಯನ್ನು ಶುರು ಮಾಡಿದರು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಮ್ಮ ಮಡಿಯಿಂದ ಅಡುಗೆ ಮಾಡಿದ್ರೆ, ಮಕ್ಕಳು ಪೂಜೆ ಮಾಡಿ, ಆ ತಿಂಡಿಯನ್ನು ನೈವೇದ್ಯ ಮಾಡುತ್ತಾರೆ. ಬಳಿಕ ಬನಶಂಕರಿಗೆ ಬರಲು ತಿಂಡಿ ಪ್ಯಾಕ್ ಮಾಡಲಾಗುತ್ತದೆ. ಹಾಗಾಗಿಯೇ ಇದನ್ನು ಬ್ರಾಹ್ಮಣ ಪ್ರಸಾದಮ್ ಎಂದು ಹೇಳಲಾಗಿದೆ.
ಇನ್ನು ಅಪ್ಪನ ಕನಸಿನಂತೆ ಹೊಟೇಲನ್ನು ಮುಂದುವರಿಸಿದ ಮಕ್ಕಳು, ಮಧ್ಯಾಹ್ನದ ಹೊತ್ತು ಬ್ರಾಹ್ಮಣ ಪ್ರಸಾದಮ್ ಎಂಬ ಊಟವನ್ನು ಕೂಡ ಉಣಬಡಿಸುತ್ತಿದ್ದಾರೆ. ಬೆಳಗ್ಗಿನ ಕೆಲಸವನ್ನು ಸುಮನ್ ಭಾರಧ್ವಾಜ್ ವಹಿಸಿಕೊಂಡ್ರೆ, ಮಧ್ಯಾಹ್ನದ ಕೆಲಸವನ್ನು ಪವನ್ ಭಾರಧ್ವಾಜ್ ವಹಿಸಿದ್ದಾರೆ. ಈ ಹೊಟೇಲ್‌ಗೆ ಬರುವಾಗ ನೀವು ಹೊರಗೆ ಚಪ್ಪಲಿ ಬಿಟ್ಟು, ಕಾಲು ತೊಳೆದು ಒಳಗೆ ಬರಬೇಕು. ಇಲ್ಲಿ ಚಾಪೆಯ ಮೇಲೆ ಚಟ್ಟೆಮುಟ್ಟೆ ಹಾಕಿ ಕುಳಿತು ಉಣ್ಣಬೇಕು. ಅಗತ್ಯವಿದ್ದವರಿಗೆ ಟೇಬಲ್ ಉಂಟು.
ಬಾಳೆ ಎಲೆ ಹಾಕಿ, ಉಪ್ಪು, ಉಪ್ಪಿನಕಾಯಿ, ಕೊಸಂಬರಿ, ಪಲ್ಯ, ಪಾಯಸ, ಗೊಜ್ಜು, ಹಬೆ ಬರಿಸಿದ ಕಡುಬು, ಅನ್ನ ಸಾರು, ಹುಳಿ, ಮೊಸರು ಹೀಗೆ ಸಾಂಪ್ರದಾಯಿಕ ಊಟ ಉಣ್ಣಬಹುದು. ಅಲ್ಲದೇ, ಇಲ್ಲಿ ಪೌರಾಣಿಕ ಕಥೆಗಳ ಪೇಯ್ಟಿಂಗ್ ಮಾಡಲಾಗಿದೆ. ರಾವಣನ ಹತ್ತು ತಲೆಯ ಅರ್ಥವೇನು..? ಹೀಗೆ ಹಲವು ಪೌರಾಣಿಕ ಕಥೆಗಳ ಚಿತ್ರವಿದೆ. ಈ ಹೊಟೇಲ್ ಬಗ್ಗೆ ಇನ್ನಷ್ಟು ತಿಳಿಯಬೇಕು ಅಂದ್ರೆ, ಈ ವೀಡಿಯೋ ನೋಡಿ.
ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನು ಸೂಚನೆ ಸಿಗುತ್ತದೆ..? ಯಾವ ಕೆಲಸ ಮಾಡಬೇಕು..?