Health Tips: ಹುಚ್ಚುನಾಯಿ ಕಚ್ಚಿದಾಗ, ಹೇಗೆ ಮನೆ ಮದ್ದು ಮಾಡಬೇಕು. ಯಾಕೆ ನಿರ್ಲಕ್ಷ ಮಾಡಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರಾದ, ಡಾ.ಆಂಜೀನಪ್ಪಾ ಈ ಬಗ್ಗೆ ಮಾತನಾಡಿದ್ದು, ಹುಚ್ಚುನಾಯಿ ಕಚ್ಚಿದ್ರೆ ಮನುಷ್ಯ ಹುಚ್ಚನಾಗ್ತಾನಾ ಅನ್ನೋ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ನಾಯಿ ಕಚ್ಚಿದಾಗ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸದೇ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಏಕೆಂದರೆ, ನಾಯಿಯ ಬಾಯಲ್ಲಿರುವ ವೈರಸ್ ನಮ್ಮ ಮೆದುಳು ಸೇರಿಸಿದರೆ, ನಾವು ಬದುಕುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಮತ್ತು ನಾಯಿ ಕಚ್ಚಿದಾಗ, ಆ ವೈರಸ್ ನರಗಳ ಮೂಲಕ ನಮ್ಮ ಮೆದುಳು ಸೇರಲು 10ರಿಂದ 90 ದಿನ ಬೇಕು. ಹಾಗಾಗಿ ಅಷ್ಟರೊಳಗೇ, ಚಿಕಿತ್ಸೆ ತೆಗೆದುಕೊಳ್ಳಲೇಬೇಕು ಎಂದಿದ್ದಾರೆ.
ಇನ್ನು ನಾಯಿ ಕಚ್ಚಿದಾಗ, ಮನುಷ್ಯ ಹುಚ್ಚನಾಗ್ತಾನಾ ಎಂಬ ಪ್ರಶ್ನೆಗೆ ಉತ್ತರ. ಹೌದು, ಆ ಮನುಷ್ಯ ಕೂಡ ಹುಚ್ಚನಂತೆ ವರ್ತಿಸುತ್ತಾನೆ. ಆ ವೈರಸ್ ಮೆದುಳು ಸೇರಿದಾಗ, ಮನುಷ್ಯನಿಗೆ ಬೋಧವಿರುವುದಿಲ್ಲ. ಅವನು ಆ ನೋವು ತಾಳಲಾರದೇ, ಇನ್ನೊಬ್ಬರಿಗೆ ಕಚ್ಚಿಬಿಟ್ಟರೆ, ಅವರ ಮೆದುಳಿಗೂ ಆ ವೈರಸ್ ಹೋಗುತ್ತದೆ. ಮತ್ತು ಆ ಮನುಷ್ಯ ಕೂಡ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ, ಬದುಕುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಹಾಗಾಗಿ ಹೆಚ್ಚು ತಡ ಮಾಡದೇ, ನಾಯಿ ಕಚ್ಚಿದಾಗ, ಚಿಕಿತ್ಸೆ ತೆಗೆದುಕೊಳ್ಳಲೇಬೇಕು.
ಇನ್ನು ಇಂಥ ರೋಗಿಗಳಿಗೆ ನೀರಿನ ಶಬ್ದ ಕೇಳಿದರೇ ಭಯವಾಗುತ್ತದೆ. ನೀರನ್ನು ಕಂಡರೆ ಭಯವಾಗುತ್ತದೆ. ಇದನ್ನು ಹೈಡ್ರೋಫೋಬಿಯಾ ಎಂದು ಕರೆಯಲಾಗುತ್ತದೆ. ಹಾಗಾಗಿ ಬರೀ ನಾಯಿ ಕಚ್ಚಿದರಷ್ಟೇ ಅಲ್ಲದೇ, ನಾಯಿ ನೆಕ್ಕಿದರೂ ಕೂಡ, ನಿರ್ಲಕ್ಷಿಸದೇ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..




