Health Tips: ಡಯಟ್ ಮಾಡುವವರಿಗೆ ಅನ್ನ ತಿಂದದರೆ ತೂಕ ಹೆಚ್ಚಾಗುತ್ತದೆ ಅನ್ನೋ ಅಭಿಪ್ರಾಯವಿರುತ್ತದೆ. ಅಲ್ಲದೇ, ದಪ್ಪವಿರುವವರಿಗೆ, ನೀನು ಅನ್ನ ತಿನ್ನುವುದನ್ನು ಕಡಿಮೆ ಮಾಡು, ಅಥವಾ ಅನ್ನ ಸೇವಿಸಲೇಬೇಡವೆಂದು ಹಲವರು ಸಜೆಶನ್ ಕೊಡುತ್ತಾರೆ. ಹಾಗಾದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..? ಈ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ..
ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಈ ಬಗ್ಗೆ ವಿವರಿಸಿದ್ದು, ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದಕ್ಕಿಂತ ದೊಡ್ಡ ಮಿಥ್ಯ ಯಾವುದೂ ಇಲ್ಲವೆಂದಿದ್ದಾರೆ. ಅಂದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲಎನ್ನುತ್ತಾರೆ ವೈದ್ಯರು.
ದಿನಕ್ಕೆ ಮೂರು ಹೊತ್ತು ಅನ್ನ ತಿಂದರೂ ಕೂಡ, ನಮ್ಮ ದೇಹದ ತೂಕ ಹೆಚ್ಚುವುದಿಲ್ಲ. ನಮ್ಮ ಹೊಟ್ಟೆಯ ಬೊಜ್ಜು ಬೆಳೆಯುವುದಿಲ್ಲ. ನಮ್ಮ ದೇಹಕ್ಕೆ ಹೆಚ್ಚು ಕ್ಯಾಲೋರಿ ಸೇರಿದಾಗ ಮಾತ್ರ, ನಮ್ಮ ದೇಹದ ತೂಕ ಹೆಚ್ಚುತ್ತದೆ, ಹೊರತು ಅನ್ನ ತಿನ್ನುವುದರಿಂದ ನಮ್ಮ ದೇಹದ ಬೊಜ್ಜು ಹೆಚ್ಚಾಗುವುದಿಲ್ಲ. ಈ ಬಗ್ಗೆ ವೈದ್ಯರು ಇನ್ನಷ್ಟು ಮಾಹಿತಿ ಕೊಟ್ಟಿದ್ದಾರೆ ನೋಡಿ..