ನಾವು ತಿನ್ನುವ ಆಹಾರ ಸರಿಯಾಗಿದ್ರೆ, ನಮ್ಮ ಆರೋಗ್ಯ ಸರಿಯಾಗಿರತ್ತೆ. ಅದೇ ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್ ಇದ್ರೆ, ನಮ್ಮ ಆರೋಗ್ಯ ಹಾಳಾಗತ್ತೆ. ಹಾಗಾಗಿ ಅಡುಗೆ ಮಾಡುವವರು ಈ ಬಗ್ಗೆ ಗಮನ ಹರಿಸಬೇಕು. ಅಡುಗೆ ಮಾಡುವಾಗ ನಾವು ಮಾಡುವ 2 ತಪ್ಪುಗಳಿಂದ, ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ಯಾವುದು ಆ ಎರಡು ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ವಾಗ್ಭಟರ ಪ್ರಕಾರ, ಸೂರ್ಯನ ಕಿರಣ, ಮತ್ತು ಗಾಳಿಯ ಸ್ಪರ್ಶ ಇಲ್ಲದೇ ಮಾಡುವ ಅಡುಗೆ ವಿಷಕ್ಕೆ ಸಮಮವಂತೆ. ಅಂಥ ಆಹಾರವನ್ನ ಸೇವಿಸಲೇಬಾರದಂತೆ. ಇದೇ ನಮ್ಮ ಆಯುಷ್ಯ ಕಡಿಮೆಯಾಗಲು, ಆರೋಗ್ಯ ಸಮಸ್ಯೆ ಬರಲು ಕಾರಣವಾಗುತ್ತದೆ. ಇದನ್ನು ವಾಗ್ಭಟರು ಎಷ್ಟೋ ಸಾವಿರ ವರ್ಷಗಳ ಹಿಂದೆ ಹೇಳಿದ್ದರು. ಇದನ್ನು ಅವರು ಬರೆದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲೇ ನಮ್ಮ ಪೂರ್ವಜರು, ಆಹಾರ ಕ್ರಮಕ್ಕೆ ಎಷ್ಟು ಮಾನ್ಯತೆ ಕೊಡುತ್ತಿದ್ದರು ಅಂತಾ ತಿಳಿಯಬಹುದು.
ಸೂರ್ಯನ ಪ್ರಕಾಶವಿಲ್ಲದ ಮತ್ತು ವಾಯುವಿನ ಸ್ಪರ್ಶವಿಲ್ಲದ ಆಹಾರ ಅಂದ್ರೆ, ಪ್ರೆಶರ್ ಕುಕ್ಕರಿನಲ್ಲಿ ತಯಾರು ಮಾಡುವ ಆಹಾರ. ಇದರಲ್ಲಿ ತಯಾರಾಗುವ ಆಹಾರಕ್ಕೆ ಗಾಳಿಯ ಸ್ಪರ್ಶವಿರುವುದಿಲ್ಲ, ಸೂರ್ಯನ ಪ್ರಕಾಶ ತಗಲುವುದಿಲ್ಲ. ಕುಕ್ಕರ್‌ನಲ್ಲಿ ತಯಾರಿಸುವ ಆಹಾರ, ಆರೋಗ್ಯಕ್ಕೆ ವಿಷಕಾರಿಯಾಗಿದೆ. ಕುಕ್ಕರ್‌ನಲ್ಲಿ ಆಹಾರ ತಯಾರಿಸಿದ್ರೆ, ಬೇರ ತಯಾರಾಗುತ್ತದೆ ಅಂತಾ ಹೇಳಿ, ನಾವೆಲ್ಲ ಕುಕ್ಕರ್‌ನಲ್ಲೇ ಅನ್ನ, ಪಲಾವ್ ಸೇರಿ, ಹಲವು ಪದಾರ್ಥಗಳನ್ನು ಬೇಯಿಸುತ್ತೇವೆ. ಇದು ತಪ್ಪು ಎಂದು ಹೇಳಿದ್ದಾರೆ ವಾಗ್ಭಟರು.
ಇನ್ನು ಪಾತ್ರೆಗಳಲ್ಲಿ ಆರೋಗ್ಯ ಹಾಳು ಮಾಡುವ ಪಾತ್ರೆ ಅಂದ್ರೆ ಅಲ್ಯುಮಿನಿಯಂ ಪಾತ್ರೆ. ಮತ್ತು ಕುಕ್ಕರನ್ನು ಅಲ್ಯುಮಿನಿಯಂನಿಂದಲೇ ತಯಾರಿಸಲಾಗತ್ತೆ. ಹಾಗಾಗಿ ಕುಕ್ಕರ್‌ನಲ್ಲಿ ಮಾಡಿದ ಆಹಾರವನ್ನು ನೀವು ಪ್ರತಿದಿನ ತಿಂದ್ರೆ, ಚಿಕ್ಕ ವಯಸ್ಸಿನಲ್ಲೇ ನಿಮಗೆ ಹಲವು ಖಾಯಿಲೆಗಳು ಬರುತ್ತದೆ. ಗ್ಯಾಸ್ಟಿಕ್ ಸಮಸ್ಯೆ, ಹೊಟ್ಟೆ ನೋವಿನ ಸಮಸ್ಯೆ, ಕೈ ಕಾಲು ಸೆಳೆತ, ಬಿಪಿ, ಶುಗರ್, ಹೃದಯ ಸಮಸ್ಯೆ ಸೇರಿ ಇನ್ನೂ ಹಲವು ಆರೋಗ್ಯ ಸಮಸ್ಯಗಳು ಇದರಿಂದ ಉದ್ಭವಿಸುತ್ತದೆ.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?