ಮನುಷ್ಯ ಜೀವನದಲ್ಲಿ ಬಯಸುವುದು ದುಡ್ಡು ಮಾತ್ರ. ಹಾಗಂತ ಎಲ್ಲ ಮನುಷ್ಯರೂ ದುಡ್ಡನ್ನೇ ಬಯಸಲ್ಲ. ದುಡ್ಡಿದ್ದವರು, ಪ್ರೀತಿ ಬಯಸುತ್ತಾರೆ. ದುಡ್ಡು, ಪ್ರೀತಿ ಸಿಕ್ಕವರು, ಆಯಸ್ಸು ಬಯಸುತ್ತಾರೆ. ಈ ಮೂರು ಇದ್ದವರು ಉತ್ತಮ ಆರೋಗ್ಯ ಸಿಗಲಿ ಎಂದು ಬಯಸುತ್ತಾರೆ. ಯಾಕಂದ್ರೆ ಆಯಸ್ಸು ಹೆಚ್ಚಾದ್ರೆ ಸಾಕಾಗಲ್ಲ. ಬದುಕಿರುವ ತನಕ ನಾವು ಆರೋಗ್ಯವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಮನುಷ್ಯ ಆರೋಗ್ಯವಾಗಿರಬೇಕು. ಮತ್ತು ಅವನ ಆಯಸ್ಸು ಕೂಡ ಹೆಚ್ಚಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ವಿಷಯಕ್ಕೆ ಕುರಿತಂತೆ, ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1
ಮೊದಲನೇಯದ್ದು ಬೆಳಿಗ್ಗೆ ಬೇಗ ಏಳಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನು ಮಾಡಿ, ಪೂಜೆ ಪುನಸ್ಕಾರ ಮಾಡಿ, ಮುಂದಿನ ಕೆಲಸದ ಕಡೆ ಗಮನ ಕೊಡಬೇಕು. ಹೀಗೆ ಮಾಡಿದಾಗ, ನಮ್ಮ ಜೀವನ ಅತ್‌ಯುತ್ತಮವಾಗಿರುತ್ತದೆ. ನಾವಂದುಕೊಂಡ ಕೆಲಸದಲ್ಲಿ ಉನ್ನತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ನೀವು ಬೆಳಿಗ್ಗೆ ಲೇಟಾಗಿ ಎದ್ದರೆ, ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ. ನಿಮ್ಮ ಆರೋಗ್ಯವೂ ಹಾಳಾಗುತ್ತದೆ.
ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 2
ಎರಡನೇಯದ್ದು ಎಂದಿಗೂ ಬ್ರಾಹ್ಮಿ ಮುಹೂರ್ತದಲ್ಲಿ ಪತಿ- ಪತ್ನಿ ಸಂಭೋಗ ಮಾಡಬಾರದು. ಹೀಗೆ ಮಾಡುವುದರಿಂದ ಇಬ್ಬರ ಆರೋಗ್ಯ ಬೇಗ ಕ್ಷೀಣಿಸುತ್ತದೆ. ಮತ್ತು ಆಯಸ್ಸು ಕಡಿಮೆಯಾಗುತ್ತದೆ. ಹಾಗಾಗಿ ನೀವು ಆರೋಗ್ಯವಾಗಿರಬೇಕು ಅಂದ್ರೆ ಬ್ರಾಹ್ಮಿ ಮುಹೂರ್ತದಲ್ಲಿ ಎಂದಿಗೂ ಸಂಭೋಗ ಮಾಡಬೇಡಿ. ಮತ್ತು ಹೀಗೆ ಮಾಡುವುದರಿಂದ, ದಂಪತಿ ನಡುವೆ ಬಿರುಕು ಮೂಡುತ್ತದೆ. ಪ್ರೀತಿ ಕಡಿಮೆಯಾಗುತ್ತದೆ ಅಂತಲೂ ಹೇಳಲಾಗಿದೆ.
ಕೋಪ ಬಂದಾಗ ಪತಿ-ಪತ್ನಿ ಅನುಸರಿಸಬೇಕಾದ 2 ನಿಯಮಗಳಿದು..
ಮೂರನೇಯದ್ದು ಹಸಿ ಮಾಂಸ ತಿನ್ನಬಾರದು. ಸನಾತನ ಧರ್ಮದ ನಿಯಮಗಳ ಪ್ರಕಾರ ಮಾಂಸ ತಿನ್ನುವುದು ತಪ್ಪು. ಆದ್ರೆ ಹಿಂದೂಗಳನ್ನು ಮಾಂಸಾಹಾರಿಗಳಿದ್ದಾರೆ. ಹಾಗಾಗಿ ಮಾಂಸಾಹಾರಿಗಳು ಮಾಂಸ ತಿಂದರೂ ಕೂಡ, ಚೆನ್ನಾಗಿ ಬೇಯಿಸಿದ ಮಾಂಸ ತಿನ್ನಬೇಕೆ ಹೊರತು, ಹಸಿ ಮಾಂಸವನ್ನು ಎಂದಿಗೂ ತಿನ್ನಬಾರದು ಎಂದು ಹೇಳಲಾಗಿದೆ. ಹೀಗೆ ಹಸಿ ಮಾಂಸ ತಿನ್ನುವುದರಿಂದ ನಿಮ್ಮ ಆರೋಗ್ಯ ಹಾಳಾಗುವುದಲ್ಲದೇ, ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.
ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು..?
ನಾಲ್ಕನೇಯದ್ದು ರಾತ್ರಿ ಸಮಯದಲ್ಲಿ ಮೊಸರು ತಿನ್ನಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಯಾಕಂದ್ರೆ ರಾತ್ರಿ ಸಮಯ ಮೊಸರು ದೇಹದಲ್ಲಿ ವಿಷದಂತೆ ಕೆಲಸ ಮಾಡುತ್ತದೆ. ಹಾಗಾಗಿ ರಾತ್ರಿ ಹೊತ್ತು ಮೊಸರಿನ ಸೇವನೆ ಮಾಡಬಾರದು. ಇದರಿಂದ ರೋಗ ರುಜಿನಗಳು ಪ್ರಾರಂಭವಾಗಿ, ಆರೋಗ್ಯ ಹದಗೆಡುತ್ತದೆ. ರಾತ್ರಿ ಮೊಸರು ತಿನ್ನೋದು, ಸ್ಲೋ ಪಾಯ್ಸನ್ ಸೇವಿಸುವುದಕ್ಕೆ ಸಮ.
ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..
ಐದನೇಯದ್ದು ಸ್ಮಶಾನದಿಂದ ಬರುವ ಹೊಗೆಯನ್ನು ಎಂದಿಗೂ ಸೇವಿಸಬೇಡಿ. ಈ ಮಾತಿನ ಅರ್ಥವೇನೆಂದರೆ, ಸ್ಮಶಾನದ ಬಳಿ ಎಂದಿಗೂ ಮನೆ ಮಾಡಬೇಡಿ. ಯಾಕಂದ್ರೆ ಸ್ಮಶಾನದಲ್ಲಿ ಶವವನ್ನು ಸುಟ್ಟ ಬಳಿಕ, ಅದರಿಂದ ಬರುವ ಹೊಗೆಯನ್ನು ನೀವು ಸೇವಿಸಿದರೆ, ರೋಗದಿಂದ ಬಳಸಿ, ಬಹು ಬೇಗ ಸಾವನ್ನಪ್ಪುವ ಸಾಧ್ಯತೆ ಇದೆ. ಹಾಗಾಗಿ ಸ್ಮಶಾನದ ಬಳಿ, ವಾಸ ಮಾಡಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.