ಜೀವನದಲ್ಲಿ ಉಳಿತಾಯ ಮಾಡೋದು ತುಂಬಾ ಮುಖ್ಯ ಅನ್ನೋ ಮಾತನ್ನ ಸ್ವತಃ ಚಾಣಕ್ಯರೇ ಹೇಳಿದ್ದಾರೆ. ಯಾಕಂದ್ರೆ ಕಷ್ಟ ಹೇಳಿ ಕೇಳಿ ಬರೋದಿಲ್ಲಾ. ಹಾಗಾಗಿ ನಾವು ದುಡಿಯೋ ಹಣದಲ್ಲಿ ಸ್ವಲ್ಪನಾದ್ರೂ ಉಳಿಸಬೇಕು ಅನ್ನೋದು ಚಾಣಕ್ಯರ ಅಂಬೋಣ. ಆದ್ರೆ 4 ಸ್ಥಳದಲ್ಲಿ ಎಂದಿಗೂ ಹಣ ಖರ್ಚು ಮಾಡೋಕ್ಕೆ, ಕಂಜೂಸುತನ ಮಾಡಬಾರದು ಅಂತಾ ಕೂಡ ಚಾಣಕ್ಯರೇ ಹೇಳಿದ್ದಾರೆ. ಹಾಗಾದ್ರೆ ಆ 4 ಸ್ಥಳಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?
ಮೊದಲನೇಯ ಸ್ಥಳ, ಬಡವರರಿಗೆ ದಾನ ನೀಡುವ ವೇಳೆ. ನೀವು ಬಡವರಿಗೆ ದಾನ ನೀಡುವ ವೇಳೆ, ಯಾವುದೇ ಕಾರಣಕ್ಕೂ ಕಂಜೂಸುತನ ಮಾಡಬೇಡಿ. ಯಾಕಂದ್ರೆ ದೀನರಿಗೆ ದಾನ ಮಾಡುವುದರಿಂದ, ದೇವರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ನಿಮಗೆ ಯಾವಾಗಲೂ ಒಳ್ಳೆಯದಾಗುತ್ತದೆ. ಹಾಗಾಗಿ ಎಂದಿಗೂ ಬಡವರಿಗೆ ದಾನ ನೀಡುವ ವೇಳೆ ಕಂಜೂಸುತನ ಮಾಡಬೇಡಿ. ಇನ್ನೂ ದಾನ ನೀಡುವಷ್ಟು ದೇವರು ನನಗೆ ಶಕ್ತಿ ನೀಡು ಎಂದು ಬೇಡಿ ಎನ್ನುತ್ತಾರೆ ಚಾಣಕ್ಯರು.
ಬಾಲಗೋಪಾಲನನ್ನು ನೋಡಲು ಬಂದ ಶನಿ ಕಣ್ಣೀರು ಹಾಕಿದ್ದೇಕೆ..?
ಎರಡನೇಯ ಸ್ಥಳ, ರೋಗಿಗೆ ಸಹಾಯ ಮಾಡು ವೇಳೆ. ನೀವು ಆಸ್ಪತ್ರೆಗೆ ಹೋಗಿ, ರೋಗಿಗಳಿಗೆ ಸಹಾಯ ಮಾಡಬೇಕೆಂದೆನೂ ಇಲ್ಲ. ಬದಲಾಗಿ ನಿಮ್ಮ ಸ್ನೇಹಿತರೋ, ಅಥವಾ ಸಂಬಂಧಿಕರೋ ಅಥವಾ ನಿಮಗೆ ಬೇಕಾದವರೇ ಯಾರೋ, ನನ್ನ ತಂದೆಗೋ, ತಾಯಿಗೋ ಆರೋಗ್ಯ ಸರಿ ಇಲ್ಲಾ, ದಯವಿಟ್ಟು ನನಗೆ ಸಹಾಯ ಮಾಡು ಎಂದು ಬೇಡಿದಾಗ, ಅದು ನಿಜವಾಗಿದ್ದಲ್ಲಿ, ಅಂಥವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಮತ್ತು ರೋಗಿ ಮನುಷ್ಯನೇ ಆಗಬೇಕೆಂದಿಲ್ಲ, ಅದು ಪ್ರಾಣಿಯಾಗಿದ್ರೂ ಸರಿ. ಅದು ಬಳಲುತ್ತಿದ್ದರೆ, ಅದಕ್ಕೂ ನೀವು ಚಿಕಿತ್ಸೆ ಕೊಡಿಸಿ, ಜೀವದಾನ ಮಾಡಬಹುದು. ರೋಗಿಗಳಿಗೆ ಸಹಾಯ ಮಾಡುವುದು ಪುಣ್ಯದ ಕೆಲಸ ಎಂದಿದ್ದಾರೆ ಚಾಣಕ್ಯರು.
ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ
ಮೂರನೇಯ ಸ್ಥಳ, ದೇವಸ್ಥಾನ. ನೀವು ದೇವಸ್ಥಾನಕ್ಕೆ ಕೋಟಿ ಕೋಟಿ ಕೊಡಬೇಕೆಂದೇನಿಲ್ಲ. ಬದಲಾಗಿ ನಿಮ್ಮ ಕೈಲಾದಷ್ಟು ಕೊಡಿ. ದೇವಸ್ಥಾನದ ಹುಂಡಿಗೆ ಬೀಳುವ ಹಣ ದೇವಸ್ಥಾನದ ಅಭಿವೃದ್ಧಿಗೆ ಹೋಗುತ್ತದೆ. ಆಗ ದೇವಸ್ಥಾನದ ಸೌಲಭ್ಯಗಳು ಹೆಚ್ಚುತ್ತದೆ. ಸೌಲಭ್ಯಗಳು ಹೆಚ್ಚಿದಂತೆ ಜನ ಅದನ್ನು ಬಳಸಿಕೊಳ್ಳುತ್ತಾರೆ. ಹೀಗೆ ನೀವು ಕೊಟ್ಟ ಸಣ್ಣ ದೇಣಿಗೆ, ಒಬ್ಬರ ಸಹಾಯಕ್ಕಾಗುತ್ತದೆ.
ನಾಲ್ಕನೇಯ ಸ್ಥಳ, ಸಾಮಾಜಿಕ ಕಾರ್ಯಗಳಲ್ಲಿ. ಶ್ರೀಮಂತರಷ್ಟೇ ಸಾಮಾಜಿಕ ಕಾರ್ಯಕ್ಕೆ ದುಡ್ಡು ಖರ್ಚು ಮಾಡಬೇಕೆಂದೇನಿಲ್ಲ. ನೀವೂ ಕೂಡ ಕೊಂಚ ಕೊಂಚ ದಾನ ಮಾಡಬಹುದು. ಶ್ರೀಮಂತರ ಒಂದು ಶಾಲೆಗೆ ದುಡ್ಡು ಖರ್ಚು ಮಾಡ್ತಾರೆ. ನೀವು ಒಂದು ವಿದ್ಯಾರ್ಥಿಗೆ ಪುಸ್ತಕ ಕೊಡಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಅಳಿಲು ಸೇವೆ ಮಾಡಬಹುದು.