Friday, April 11, 2025

Latest Posts

ನಿದ್ದೆ ಮಾಡುವ ಮುನ್ನ ಈ 3 ತಪ್ಪುಗಳನ್ನು ಮಾಡಬೇಡಿ..

- Advertisement -

ಮನುಷ್ಯ ಆರೋಗ್ಯವಾಗಿರಲು ಊಟವೆಷ್ಟು ಮುಖ್ಯವೋ, ನಿದ್ದೆಯೂ ಅಷ್ಟೇ ಮುಖ್ಯ. ಹಾಗಾಗಿ ಆರೋಗ್ಯಕರ ವಿಧಾನದಲ್ಲಿ ನಿದ್ದೆ ಮಾಡಬೇಕು ಅಂತಾ ಹೇಳೋದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು 8 ಗಂಟೆಗೆ ಊಟ ಮುಗಿಸಿ. 9 ಗಂಟೆ ಬಳಿಕ ನಿದ್ದೆ ಮಾಡಿ ಬಿಡುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಬಂದು ಸಮಯ ವ್ಯರ್ಥ ಮಾಡುತ್ತಿದೆ. ಹಾಗಾಗಿ ಲೇಟ್ ಆಗಿ ಮಲಗಿ ಲೇಟ್ ಆಗಿ ಏಳುವ ಪರಿಸ್ಥಿತಿ ಇದೆ. ಹಾಗಾಗಿ ಇಂದು ನಾವು ನಿದ್ದೆ ಮಾಡುವ ಮುನ್ನ ನಾವು ಯಾವ ತಪ್ಪುಗಳನ್ನು ಮಾಡಬಾರದು ಅಂತಾ ಹೇಳಲಿದ್ದೇವೆ.

ಮೊದಲನೇಯ ತಪ್ಪು, ಮೊಬೈಲ್, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಬಳಸಿದ ತಕ್ಷಣ ನಿದ್ದೆ ಮಾಡೋದು. ಹೌದು, ನೀವು ಮಲಗುವ ಒಂದು ಗಂಟೆ ಮುನ್ನವೇ ಮೊಬೈಲ್, ಲ್ಯಾಪ್‌ಟಾಪ್, ಮತ್ತು ಕಂಪ್ಯೂಟರ್ ಬಳಸಿ. ನಂತರ ಒಂದು ಗಂಟೆ ಬಿಟ್ಟು ಮಲಗಿ. ಆ ಒಂದು ಗಂಟೆಯಲ್ಲಿ ನೀವು ನಿಮ್ಮ ಆತ್ಮೀಯರೊಂದಿಗೆ ಹರಟೆ ಹೊಡೆಯಬಹುದು. ಪುಸ್ತಕ ಓದಬಹುದು. ನೀವು ಗ್ಯಾಜೆಟ್ ಬಳಸಿ, ಇಮ್ಮಿಡಿಯಟ್ ಆಗಿ ಮಲಗಿದ್ದಲ್ಲಿ, ಅದು ನಿಮಗೆ ಉತ್ತಮ ನಿದ್ದೆ ಮಾಡಲು ಬಿಡುವುದಿಲ್ಲ. ಹಾಗಾಗಿ ಈ ತಪ್ಪು ಮಾಡಬೇಡಿ.

ಎರಡನೇಯ ತಪ್ಪು, ಮಲಗುವಾಗ ನಿಮ್ಮ ಅಕ್ಕಪಕ್ಕವೇ, ಮೊಬೈಲ್, ಲ್ಯಾಪ್‌ಟಾಪ್ ಹಿಡಿದು ಮಲಗುವುದು. ಇದರಿಂದ ನಿಮ್ಮ ದೇಹದ ಹಲವು ಭಾಗಗಳಿಗೆ ಪೆಟ್ಟು ಬೀಳತ್ತೆ. ಕಿಡ್ನಿ, ಹೊಟ್ಟೆ, ಎದೆ, ತಲೆ, ಹೃದಯ, ಈ ಎಲ್ಲ ಭಾಗಕ್ಕೂ ಪೆಟ್ಟು ಬೀಳತ್ತೆ. ಯಾಕಂದ್ರೆ ಅದರ ರೇಡಿಯೇಶನ್ ನಿಮ್ಮ ದೇಹಕ್ಕೆ ಟಚ್ ಆಗ್ತತೆ. ಇದರಿಂದ ತಲೆ ನೋವು, ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಬರತ್ತೆ. ಹಾಗಾಗಿ ಮಲಗುವಾಗ ಗ್ಯಾಜೆಟ್ಸನ್ನ ದೂರವಿಟ್ಟು ಮಲಗಿ.

ಮೂರನೇಯ ತಪ್ಪು, ಮಲಗುವ ಮುನ್ನ ಸಿಹಿ ತಿಂಡಿ ತಿಂದು ಮಲಗುವುದು. ಕೆಲವರಿಗೆ ಈ ಚಟವಿರುತ್ತದೆ. ರಾತ್ರಿ ಊಟ ಮುಗಿದ ಬಳಿಕ, ಐಸ್‌ಕ್ರೀಮ್, ಕೇಕ್, ಪೇಸ್ಟ್ರೀಸ್, ಜಾಮೂನ್, ಹೀಗೆ ಹಲವು ಡೆಸರ್ಟ್ ತಿಂದು ಮಲಗುತ್ತಾರೆ. ಯಾವಾಗಲಾದರೂ ತಿಂದರೆ ಓಕೆ. ಆದ್ರೆ ಪದೇ ಪದೇ ನೀವು ಈ ತಪ್ಪು ಮಾಡಿದ್ರೆ, ಬೊಜ್ಜು ಬೆಳೆಯುತ್ತೆ. ಬಿಪಿ, ಶುಗರ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಲಗುವ ಮುನ್ನ ಯಾವುದೇ ಕಾರಣಕ್ಕೂ ಸಿಹಿ ತಿಂಡಿ ತಿನ್ನಬೇಡಿ.

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

- Advertisement -

Latest Posts

Don't Miss