ಸ್ನಾನ ಮಾಡೋದಂದ್ರೆ, ನಮ್ಮ ದಿನನಿತ್ಯದ ಕೆಲಸದಲ್ಲಿ ಒಂದು ಭಾಗ ಅಂತಾ ನಿಮಗೆ ಅನ್ನಿಸಬಹುದು. ಹಾಗಾಗಿ ಕೆಲವರು ಗಂಟೆಗಟ್ಟಲೇ ಸ್ನಾನ ಮಾಡಿದ್ರೆ, ಇನ್ನು ಕೆಲವರು ದೇಹಕ್ಕೆ ನೀರು ತೋರಿಸಿ ಬಂದುಬಿಡುತ್ತಾರೆ. ಆದ್ರೆ ನಾವು ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳೇ ನಮ್ಮ ಆರೋಗ್ಯವನ್ನ, ಸೌಂದರ್ಯವನ್ನ ಹಾಳು ಮಾಡತ್ತೆ. ಹಾಗಾಗಿ ನಾವಿಂದು ಸ್ನಾನ ಮಾಡುವಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ಹೇಳಲಿದ್ದಿವೆ.
ಮೊದಲನೇಯ ತಪ್ಪು, ಊಟವಾದ ತಕ್ಷಣ ಸ್ನಾನ ಮಾಡುವುದು. ಮಧ್ಯಾಹ್ನವಾಗಲಿ ಅಥವಾ ರಾತ್ರಿಯಾಗಲಿ, ಊಟವಾದ ಬಳಿಕ ಸ್ನಾನ ಮಾಡಬಾರದು. ಬೆಳಿಗ್ಗೆಯೂ ಅಷ್ಟೇ ತಿಂಡಿ ತಿನ್ನುವ ಮೊದಲು ಸ್ನಾನ ಮಾಡಿ, ಇಲ್ಲವಾದಲ್ಲಿ ತಿಂಡಿ ತಿಂದು ಅರ್ಧ ಗಂಟೆ ಬಳಿಕ ಸ್ನಾನ ಮಾಡಿ. ಯಾಕಂದ್ರೆ ಊಟ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ, ಅದು ನಿಮ್ಮ ಜೀರ್ಣ ಕ್ರಿಯೆ ಮತ್ತು ರಕ್ತ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರತ್ತೆ. ಹಾಗಾಗಿ ಊಟವಾಗಿ 2 ಗಂಟೆ ಬಳಿಕ ಸ್ನಾನ ಮಾಡಿ. ಇಲ್ಲವಾದಲ್ಲಿ ಊಟಕ್ಕೂ ಮುನ್ನವೇ ಸ್ನಾನ ಮಾಡಿ.
ಎರಡನೇಯ ತಪ್ಪು ತಲೆ ಸ್ನಾನ ಮಾಡುವಾಗ ಹೆಚ್ಚು ಶ್ಯಾಂಪೂ ಬಳಸುವುದು ಮತ್ತು ಅದನ್ನು ಹೆಚ್ಚು ಹೊತ್ತು ತಲೆಯಲ್ಲಿರಿಸುವುದು. ನೀವು ಕೆಮಿಕಲ್ ಮುಕ್ತವಾದ ಶ್ಯಾಂಪೂ ಬಳಸಿದ್ರೆ ತುಂಬಾ ಒಳ್ಳೆಯದು. ಆದ್ರೂ ಯಾವ ಶ್ಯಾಂಪೂ ಬಳಸಿದ್ರೂ ಕೂಡ, ಅದು ತುಂಬ ಹೊತ್ತು ನಿಮ್ಮ ತಲೆಯಲ್ಲಿರಬಾರ್ದು. 2 ನಿಮಿಷವಷ್ಟೇ ಇದ್ರೆ ಸಾಕು. ತಕ್ಷಣ ಅದನ್ನು ನೀರಿನಿಂದ ತೊಳೆದು ಬಿಡಿ. ಇಲ್ಲದಿದ್ದಲ್ಲಿ, ನಿಮ್ಮ ಕೂದಲು ಹೆಚ್ಚು ಉದುರುವ ಸಾಧ್ಯತೆ ಇರುತ್ತದೆ.
ಮೂರನೇಯ ತಪ್ಪು ಸಿಕ್ಕಾಪಟ್ಟೆ ಬಿಸಿ ಬಿಸಿ ಸ್ನಾನ ಮಾಡೋದು. ಚಳಿಗಾಲದಲ್ಲಿ ತುಂಬಾ ಬಿಸಿ ಬಿಸಿ ಸ್ನಾನ ಮಾಡಬೇಕು ಅಂತಾ ಅನ್ನಿಸೋದು ಸಹಜ. ಆದ್ರೆ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ, ನಿಮ್ಮ ಸ್ಕಿನ್ ಕಲರ್ ಡಲ್ ಆಗತ್ತೆ. ಚರ್ಮ ಒಣಗತ್ತೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಇಲ್ಲವಾದಲ್ಲಿ ತಣ್ಣೀರಿನ ಸ್ನಾನ ಮಾಡಿ.
ನಾಲ್ಕನೇಯ ತಪ್ಪು ಕೆಮಿಕಲ್ ಯುಕ್ತವಾದ ಹಾರ್ಡ್ ಪ್ರಾಡಕ್ಟ್‌ಗಳನ್ನ ಬಳಸೋದು. ಸ್ನಾನ ಮಾಡುವಾಗ, ಬಾತ್ ಜೆಲ್, ಅಥವಾ ಸೋಪ್ ಬಳಸುತ್ತೇವೆ. ಅದರಲ್ಲಿ ಭರಪೂರ ಕೆಮಿಕಲ್ಸ್ ಇರತ್ತೆ. ಹಾಗಾಗಿ ಕೆಮಿಕಲ್ ಮುಕ್ತವಾದ ಸೋಪ್ ಬಳಸಿ. ಇಲ್ಲವಾದಲ್ಲಿ, ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು ಇಂಥ ಮನೆ ಮದ್ದನ್ನ ಬಳಸಿ.
ಯಾವುದರಿಂದ ಸ್ನಾನ ಮಾಡಿದ್ರೆ ಉತ್ತಮ..? ಆರೋಗ್ಯಕ್ಕೂ ಸ್ನಾನಕ್ಕೂ ಇದೆ ನಂಟು..